ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XI, ಮಕ್ಕಾ ನಗರದ ಮುತ್ತಿಗೆ ಇಷ್ಟು ಉಪಕಾರವನ್ನು ಹೊಂದಿಯ ನಾನು ನಿಮ್ಮಲ್ಲಿ ಪ್ರೀತಿಯನ್ನು ತೊರೆದು ಪಕ್ಷಪಾತ ಮಾಡುವೆನೆ ? ಮಕ್ಕಾ ನಿವಾಸಿಗಳು ಇದುವರೆಗೂ ನನಗೆ ಶತ್ರುಗಳಾಗಿದ್ದ ಕಾರಣ, ಅವರ ಮನಸ್ಸಿಗೆ ಸಂತೋಷವಾಗ ಲೆಂಬ ಇಚ್ಛೆಯಿಂದ ಅವರಿಗೆ ಸ್ವಲ್ಪ ಹೆಚ್ಚಾಗಿ ಪಾರಿತೋಷಿಕವನ್ನು ಕೊಟ್ಟ ಮಾತ್ರಕ್ಕೆ ನೀವು ನನ್ನಲ್ಲಿ ಪಕ್ಷಪಾತ ಬುದ್ದಿಯನ್ನು ಆರೋಪಿಸ ಬಹುದೆ? ಇಷ್ಟಕ್ಕೂ, ಇಸ್ಲಾಂ ಮತಕ್ಕಿಂತ ಮತ್ತೆ ಯಾವ ಹೆಚ್ಚಿನ ಭಾಗ್ಯವು ನಮಗೆ ಬೇಕು ? ಅದರ ಮುಂದೆ ತುಚ್ಛವಾದ ಐಹಿಕ ವಸ್ತುಗಳು ಹೆಚ್ಚು ಬೆಲೆಯುಳ್ಳವುಗಳೇ ? ಅವರು ಮೇಕೆಗಳನ್ನೂ ಒಂಟೆಗಳನ್ನೂ ಸಾಗಿಸಿಕೊಂಡು ಹೋಗುವುದಾದರೆ, ನನ್ನ ಸ್ನೇ ನೀವು ಸಂಗತ ಕರೆದು ಕೊಂಡು ಹೋಗುವಿರಲ್ಲಾ! ನೀವೆಲ್ಲರೂ ಸೇರಿ ಯಾವ ದಾರಿಯನ್ನು ತೋರಿಸಿದರೆ ಅದನ್ನು ನಾನು ಅವಲಂಬಿಸತಕ್ಕವನೇ ಹೊರತು, ಎಂದಿಗೂ ನಿಮ್ಮನ್ನು ಬಿಟ್ಟು ಕದಲಲೊಲ್ಲೆನು. ಹೀಗಿದ್ದೂ, ನಾನು ಪಕ್ಷಪಾತ ಮಾಡುವೆನೆ ? ಎಂದು ಅವರಿಗೆ ಸಮಾಧಾನ ಹೇಳಿದನು. ಈ ಮಾತುಗಳನ್ನು ಕೇಳಿ ಅವರಲ್ಲನೇಕರು ಆನಂದ ಬಾಷ್ಪಗಳನ್ನು ಸುರಿಸಿದರು. ಮಹಮ್ಮದನು ಇನ್ನು ಮುಂದೆ ಮಕ್ಕಾ ನಗರದಲ್ಲಿಯೇ ನಿಂತುಬಿಡುವನೆಂದು ಸಂಶಯ ಪಟ್ಟಿದ್ದ ಆ ಜನರು ಅವನು ತನ್ನೊಡನೆ ಬರುವನೆಂದು ತಿಳಿದು ಅತ್ಯಾನಂದ ಹೊಂದಿದರು. ಶತು) ಪಕ್ಷದವರು ತಮ್ಮ ಕಡೆಯ ಸೆರೆಯಾಳುಗಳಾದ ಆರು ಸಾವಿರ ಮಂದಿಯನ್ನೂ ಬಿಟ್ಟುಕೊಟ್ಟು ಉಪಕಾರ ಮಾಡಬೇಕೆಂದು ಮಹಮ್ಮದನನ್ನು ಬೇಡಿಕೊಳ್ಳಲು ಅಲ್ಲಿಗೆ ಬಂದರು. ಮಹಮ್ಮದನ ಕರುಣೆ ಅವರೆಲ್ಲರೂ ಎಗ್ರಹಾರಾಧಕರು. ಆದುದರಿಂದ, ಸೆರೆ ಸಿಕ್ಕಿದ್ದವರೆಲ್ಲರೂ ಇಸ್ಲಾಂ ಮತವನ್ನವಲಂಬಿಸದೆ ಹೋದರೆ ಅವರನ್ನು ಬಿಡುಗಡೆ ಮಾಡುವುದಿಲ್ಲವೆಂದು ಮಹಮ್ಮದನು ಹೇಳಬಹುದಾಗಿದ್ದಿತು; ಅದಕ್ಕೆ ಅವರು ಒಪ್ಪದೆ ಹೋಗಿದ್ದರೆ ಎಲ್ಲರನ್ನೂ ಕೊಲ್ಲಿಸುವ ಪ್ರಯತ್ನವನ್ನಾದರೂ ಅವನು ಮಾಡಬಹುದಾಗಿದ್ದಿತು. ಆದರೆ, ಕರುಣಾಳುವಾದ ಮಹಮ್ಮದನು ಪರ ಮತ ಸಹಿಷ್ಣುವಾಗಿಯೂ ಇದ್ದ ಕಾರಣ, ಇಸ್ಲಾಂ ಮತಕ್ಕೆ ಸೇರಬೇಕೆಂದು ಅವನು ಯಾರೊಬ್ಬ