ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XIII, ಮಹಮ್ಮದನ ರೂಪವೂ ಗುಣಗಳೂ ೧೨೧ ಪಂಡಿತನು ಕಂಡು, ತಾವು ಹಸಿದಿರುವುದನ್ನು ಸೂಚಿಸುವುದಕ್ಕಾಗಿ, ಖುರಾನಿನಲ್ಲಿ ಹಸಿವಿನ ಬಾಧೆಯ ವಿಷಯವಾಗಿ ಹೇಳಿರುವ ಅತಿ ಸುಲಭ ವಾದ ಪದ್ಯವೊಂದಕ್ಕೆ ಅರ್ಥ ಹೇಳೆಂದು ಕೇಳಿದನು. ಪಂಡಿತನ ಈ ಆಶಯವು ಅಬೂ ಬಕರನಿಗೆ ತಿಳಿಯದೆ ಅವನು ಸದ್ಯಕ್ಕೆ ಅರ್ಥವನ್ನು ಹೇಳಿ ಮುಂದಕ್ಕೆ ಹೊರಟುಹೋದನು. ಆ ಬಳಿಕ ಅದೇ ಮಾರ್ಗವಾಗಿ ಓಮರನು ಬರಲು, ಪಂಡಿತನು ಅವನಿಗೂ ಹಿಂದಿನಂತೆಯೇ ತನ್ನ ಆಶಯವನ್ನು ಸೂಚಿಸಲು ಯತ್ನಿಸಿದನು. ಓಮರನೂ ಇದನ್ನು ಗ್ರಹಿ. ಸದೆ ಪದ್ಯದ ಅರ್ಥವನ್ನು ಮಾತ್ರ ಹೇಳಿ ಹೊರಟುಹೋದನು. ಕೊನೆಗೆ. ಮಹಮ್ಮದನು ಅದೇ ಮಾರ್ಗವಾಗಿ ಬರಲು, ಪಂಡಿತನು ಅವನನ್ನೂ ಇದೇ ರೀತಿಯಾಗಿ ಪರೀಕ್ಷೆ ಮಾಡಿದನು. ಮಹಮ್ಮದನು ಕೂಡಲೆ ಪಂಡಿ. ತನ ಆಶಯವನ್ನು ಗ್ರಹಿಸಿ ಗಟ್ಟಿಯಾಗಿ ನಕ್ಕು, ಅವರೆಲ್ಲರನ್ನೂ ತನ್ನ ಮನೆಗೆ ಕರೆದುಕೊಂಡು ಹೋದನು. ಅದೃಷ್ಟ ವಶದಿಂದ ಆ ದಿನ. ಯಾರೋ ಒಂದು ಗುಡಾಣದ ತುಂಬ ಹಾಲನ್ನು ಮಹಮ್ಮದನ ಮನೆಗೆ. ಕಳುಹಿಸಿದ್ದರು, ಮಹಮ್ಮದನು ತನ್ನ ಅತಿಥಿಗಳಿಗೆ ಮೊದಲು ಆ ಹಾಲನ್ನು ಹಂಚಿ, ತರುವಾಯ ಇತರ ಆಹಾರ ವಸ್ತುಗಳನ್ನೂ ಕೊಟ್ಟು ಉಪಚರಿಸಿ ಕಳುಹಿಸಿದನು. ರಣ ರಂಗದಲ್ಲಿ ಮಹಮ್ಮದನು ಅಸೀಮ ಪರಾಕ್ರಮದಿಂದ ಯುದ್ಧ ಮಾಡುತ್ತಿದ್ದುದಕ್ಕೆ ಅವನಲ್ಲಿದ್ದ ಅಸಾಮಾನ್ಯವಾದ ಧೈರ್ಯೊತ್ಸಾಹ ಗಳೇ ಕಾರಣ. ಇದಕ್ಕೆ ಅನೇಕ ನಿದರ್ಶನಗಳನ್ನು ಧೈರ್ಯೊತ್ಸಾಹ ಹಿಂದೆಯೇ ಕೊಡಲಾಗಿದೆ. ಬದರ್ ಕದನದಲ್ಲಿ ತನ್ನ ಗಳು ಕಡೆಯ ಸೈನ್ಯವು ಬಹಳ ಕಡಿಮೆಯಾಗಿದ್ದು ಶತ್ರುಗಳ ಸೈನ್ಯವು ಬಹಳ ದೊಡ್ಡದಾಗಿದ್ದರೂ ಭಯಪಡದೆ, ತಾನು ಮುಂದಾಳಾಗಿ ನಿಂತು, ತನ್ನವರನ್ನು ಪ್ರೋತ್ಸಾಹ ವಚನಗಳಿಂದ. ಹುರಿದುಂಬಿಸಿದುದರಿಂದಲೇ ಅಲ್ಲವೆ ಅಂದು ಅವರು ಯುದ್ಧ ಮಾಡಿ ಪರಿಣಾಮದಲ್ಲಿ ಅಜೇಯರೆನಿಸಿಕೊಂಡು ಪ್ರಖ್ಯಾತರಾದುದು ! ಇತರರೂ ತನ್ನಂತೆಯೇ ಧೈರ್ಯಶಾಲಿಗಳಾಗಿರಬೇಕೆಂಬುದು ಮಹಮ್ಮದನ ಆಕಾಂಕ್ಷೆ, ಒಮ್ಮೆ, ಮಹಮ್ಮದನ ಬಳಿಗೆ ಅವನ ಸೈನಿಕರು ಒಬ್ಬ