ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XIII, ಮಹಮ್ಮದನ ರೂಪವೂ ಗುಣಗಳೂ ೧೨೩? ಬಂದ ಹಣದಿಂದ ಮಾನವಾಗಿ ಜೀವನವಾಡು ; ಯಾಚನಾ ವೃತ್ತಿ ಗಿಂತಲೂ ಇದು ಎಷೆ ಮೇಲಾದುದು' ಎಂದು ಬುದ್ದಿ ವಾದವನ್ನು ಹೇಳಿ ಕಳುಹಿಸಿದನು. ಅವನು ಅದರಂತೆಯೇ ನಡೆದು, ಕಾಲ ಕ್ರಮದಲ್ಲಿ. ತಾನೇ ಇತರರಿಗೆ ಸಹಾಯ ಮಾಡುವ ಸ್ಥಿತಿಗೆ ಬಂದನು. ಮತ್ತೊಂದು ಸಮಯದಲ್ಲಿ, ಆಗ ತಾನೆ ಇಸ್ಲಾಂ ಮತಕ್ಕೆ ಸೇರಿದ್ದ ಮನುಷ್ಯನೊಬ್ಬನು. ಮಹಮ್ಮದನ ಬಳಿಗೆ ಯಾಚನೆಗೆ ಬಂದು ಸಹಾಯ ಪಡೆದು ಹೊರಟು ಹೋದನು ; ಕೆಲವು ದಿನಗಳು ಕಳೆದ ಮೇಲೆ ಮರಳಿ ಬಂದು ಯಾಚಿ ಸಲು, ಆಗ ಮಹಮ್ಮದನು ಅವನಿಗೆ ಸಹಾಯ ಮಾಡಿದನು. ತಾನು ಇಸ್ಲಾಂ ಮತಕ್ಕೆ ಸೇರಿದುದೇ ಮಹಮ್ಮದನಿಗೆ ಮಹದುಪಕಾರವೆಂದು ಆ ಭಿಕ್ಷುಕನು ಭಾವಿಸಿದ್ದನೋ ಏನೋ ! ಮರಳಿ ಮೂರನೆಯ ಸಾರಿ. ಅವನು ಭಿಕ್ಷೆ ಬೇಡುವುದಕ್ಕೆ ಬರಲು, ದೃಢಾಂಗನಾಗಿದ್ದ ಆ ಮನುಷ್ಯ. ನನ್ನು ನೋಡಿ ಮಹಮ್ಮದನು, ಅಯ್ಯಾ ! ಕೊಡುವವನ ಕೈ ಮೇಲಿರು ಇದೆ, ಕೇಳುವವನ ಕೈ ಕೆಳಗಿರುತ್ತದೆ, ದೀನನಾಗಿ ಬೇಡುವವನು ದಾನಿ. ಯಾಗಿ ನೀಡುವವನಿಗಿಂತಲೂ ಎಂದಿದ್ದರೂ ಕೀಳಾದವನೇ : ಇದನ್ನು ನೀನು ಚೆನ್ನಾಗಿ ಗ್ರಹಿಸಯ್ಯಾ ! ಹಣ ಕೊಡಲಾರದೆ ನಾನು ನಿನಗೆ ಹೀಗೆ ಹೇಳುತ್ತಿರುವೆನೆಂದು ಭಾವಿಸಬೇಡ ; ನಿನಗೆ ವಿವೇಕವು ಬರಲೆಂಬ ಆಸೆ. ಯಿಂದ ನಾನು ಹೀಗೆ ಹೇಳುತ್ತಿದ್ದೇನೆ ಎಂದು ಉಪದೇಶಿಸಿ ಅವನನ್ನು ಯಾಚಕ ವೃತ್ತಿಯಿಂದ ಬಿಡಿಸಿದನಂತೆ. ಅಶಕ್ತರಾದವರೂ ಆಪತ್ತಿಗೆ ಸಿಕ್ಕಿ ನಿರ್ಗತಿಕರಾದವರೂ ಮಾತ್ರವೇ ಭಿಕ್ಷಬೇಡಬಹುದಲ್ಲದೆ ದೃಢಾಂಗ ರಾಗಿರುವವರು ಎಂದಿಗೂ ಬೇಡಬಾರದೆಂಬುದು ಮಹಮ್ಮದನ ಅಭಿ. ಪ್ರಾಯವು. ರಾಜ ಭೋಗವನ್ನನುಭವಿಸುವ ಸಾಧನಗಳಿದೂ ಬಡತನಕ್ಕೆ ಆಮಂತ್ರಣ ಕೊಟ್ಟು ಕುಟೀರ ವಾಸಿಯಾದ ಮಹಮ್ಮದನ ನಿಸ್ಸಹ ತೆಯು ಎಷ್ಟು ಮಹತ್ವವಾದುದೆಂಬುದನ್ನು ನಿಸ್ಪೃಹತೆ ಹತ್ತು ಬಾಯಿಗಳಿಂದ ಹೊಗಳಿದರೂ ಸಾಲದು. ಯಾವುದಾದರೂ ವಸ್ತುವನ್ನು ಮತ್ತೊಬ್ಬನಿಂದ ಉಚಿತವಾಗಿ ಪಡೆದು ಹಂಗಿನ ಹೊರೆಯನ್ನು ಹೊತ್ತು ಜೀವಿಸುವುದು