ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XIII, ಮಹಮ್ಮಹನ ರೂಪವೂ ಗುಣಗಳೂ ೧೨೫ ಒಂಟೆಯನ್ನು ತೆಗೆದುಕೊಂಡು ಓಮರನ ಮಗನೊಡನೆ, ' ನೋಡಯ್ಯಾ! ನಿಮ್ಮ ತಂದೆಯ ಸ್ವತ್ತಾಗಿದ್ದ ಒಂಟೆಯನ್ನು ನಾನು ಬೆಲೆಗೆ ತೆಗೆದು ಕೊಂಡೆನು; ಇಗೋ ! ಅದನ್ನು ಈಗ ನಿನಗೆ ಕೊಟ್ಟಿದ್ದೇನೆ, ತೆಗೆದುಕೊ. ಇನ್ನು ನಿಮ್ಮ ತಂದೆಯ ಕೈ ನಡೆಯುವಂತಿಲ್ಲ ; ನಿನ್ನ ಒಂಟೆಯ ಮುಂದೆ ನಡೆಯಲಿ ಎಂದು ಹೇಳಿ ಅವರನ್ನು ಸಂತೋಷಪಡಿಸಿದನಂತೆ. ಮಹಮ್ಮದನು ನಿಸ್ಸಹನೆಂದ ಮಾತ್ರಕ್ಕೆ, ಪಾರಿತೋಷಿಕಗಳನ್ನು ಕೊಡುವುದು, ಇತರರು ಆದರದಿಂದೊಪ್ಪಿಸಿದ ವಸ್ತುಗಳನ್ನು ಸ್ವೀಕ ರಿಸುವುದು-ಇವೇ ಮುಂತಾದ ಸಭ್ಯ ಸಂಪ್ರದಾಯಗಳಿಗೆ ಅನಾದರ ವುಳ್ಳವನಾಗಿದ್ದನೆಂದು ಅಭಿಪ್ರಾಯವಲ್ಲ. ಮಿತ್ರರು ಸಂತೋಷ ದಿಂದೊಪ್ಪಿಸಿದ ವಸ್ತುಗಳನ್ನು ಸ್ವೀಕರಿಸುವುದು ಅವಶ್ಯ ಕರ್ತವ್ಯವೆಂದೂ, ಅದರಿಂದ ಪರಸ್ಪರ ಮೈತ್ರಿಯು ಹೆಚ್ಚುವುದೆಂದೂ ಅವನು ಪದೇ ಪದೇ ಹೇಳುತ್ತಲೇ ಇದ್ದನು. ಆದರೆ, ಇತರರು ಕೊಟ್ಟ ವಸ್ತುಗಳನ್ನು ಸ್ವೀಕರಿ ಸಿದ ಮೇಲೆ ಸಮಯವರಿತು ಅವರಿಗೂ ಅದಕ್ಕನುಗುಣವಾಗಿ ಕೊಟ್ಟು, ಮಿತ್ರ ಧರ್ಮವನ್ನುಳಿಸಿಕೊಳ್ಳುವುದು ಮಹಮ್ಮದನು ಅನುಸರಿಸುತ್ತಿದ್ದ ನಿಯಮವಾಗಿದ್ದಿತು. ಒಂದು ಬಾರಿ ರೋಮನ್ ಚಕ್ರವರ್ತಿಯು ಬಹಳ ಹಸನಾದ ಬನಾತಿನ ಅಂಗಿಯನ್ನು ಮಹಮ್ಮದನಿಗೆ ಕಾಣಿಕೆಯಾಗಿ ಕಳುಹಿಸಿದನು. ಮಹಮ್ಮದನು ಅದನ್ನು ಸ್ವಲ್ಪ ಕಾಲ ಧರಿಸಿದ್ದು, ಅಷ್ಟು ಬೆಲೆಯುಳ್ಳ ಅಂಗಿಯು ತನಗೇಕೆಂದು ಬಗೆದು, ಅದನ್ನು ಅಲೀಯ ಸಹೋದರನಾದ ಜಫಾರ್ ಎಂಬವನಿಗೆ ಕೊಟ್ಟು ಬಿಟ್ಟನು. ಮತ್ತೊಬ್ಬ ದೊರೆಯು ಮಹಮ್ಮದನಿಗೆ ಅರವತ್ತಾರು ಒಂಟೆಗಳನ್ನು ಕಾಣಿಕೆಯಾ ಗೊಪ್ಪಿಸಿದನು. ಇದಕ್ಕೆ ಪ್ರತಿಯಾಗಿ ಮಹಮ್ಮದನು ಅಮೂಲ್ಯವಾದ ಅಂಗಿಯೊಂದನ್ನು ಆ ದೊರೆಗೆ ಉಡುಗೊರೆಯಾಗಿ ಕಳುಹಿಸಿಕೊಟ್ಟನು. ಮಹಮ್ಮದನು ಅನೇಕ ಪತ್ನಿಯರನ್ನು ವರಿಸಿದ್ದನು. ಇದರಲ್ಲಿ ಮಹಮ್ಮದನ ಆಶಯವು ಉದಾತ್ತವಾಗಿಯೇ ಇದ್ದಿತೆಂದೂ, ಸ್ವಲ್ಪವೂ ಆಕ್ಷೇಪಣೆಗೊಳಗಾಗತಕ್ಕುದಲ್ಲವೆಂದೂ ಕೆಲವು ಬಹುಪತ್ನಿತ್ವದ ಮಂದಿ ಲೇಖಕರು ಸಮಾಧಾನ ಹೇಳಿದ್ದಾರೆ. ಮತ್ತೆ ವಿಚಾರ ಕೆಲವರು, ಬಹುಪತ್ನಿತ್ವವು ಮಹಮ್ಮದನಲ್ಲಿದ್ದ