ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XV, ಇಸ್ಲಾಂ ಮತದ ಮೂಲ ತತ್ವಗಳು ಹೇಳಲ್ಪಟ್ಟಿದೆಯೆಂದೂ ಮಹಮ್ಮದೀಯ ಪಂಡಿತರುಗಳು ಅಭಿಪ್ರಾಯ ಪಡುತ್ತಾರೆ. ಜೀವಾತ್ಮನು ಪ್ರಗತಿ ಮಾರ್ಗದಲ್ಲಿ ಸಂಚರಿಸುವನೆಂಬು ದನ್ನು ಮಹಮ್ಮದೀಯರು ಒಪ್ಪಿಕೊಂಡಿರುವರಾದರೂ, ತನ್ನ ಕರ್ಮಾನುರೂಪವಾಗಿ ಪುನರ್ಜನ್ಮ ಧಾರಣೆ ಮಾಡುವನೆಂಬುದನ್ನು ಅವರು ಒಪ್ಪುವುದಿಲ್ಲ. ಆದರೂ, ಭಗವಂತನನ್ನು ಪ್ರಾರ್ಥಿಸುವುದ ರಿಂದಲೂ, ಅದಕ್ಕನುಗುಣವಾದ ಸತ್ಯರ್ವಚರಣೆಯಿಂದಲೂ, ಜೀವಾ ತ್ಮನಿಗೆ ಪುಗತಿ ಸಾಧನೆಯಲ್ಲಿ ಸುಗಮವಾದ ಮಾರ್ಗವು ಲಭಿಸಿ ಅವನ ಇಷ್ಟಾರ್ಥವು ಈಡೇರುವುದೆಂಬುದನ್ನು ಅವರು ದೃಢವಾಗಿ ನಂಬಿರುವರು? ಪ್ರಾರ್ಥನೆಯೆಂಬುದು ಭಗವದ್ವಿಭೂತಿ ಚಿಂತನೆಯೆಂದೂ, ಭಗ ವಂತನ ಸದ್ಗುಣಗಳನ್ನು ನೆನೆ ನೆನೆದು ಅವುಗಳನ್ನು ನಮ್ಮ ಅನುಷ್ಕಾ ನಕ್ಕೆ ತಂದುಕೊಂಡರೆ, ಅಲ್ಲಿಗೆ ದೈವಿಕ ಸ್ವಭಾವ ಭಗವದ್ವಿಭೂತಿ ಸಾಕ್ಷಾತ್ಕಾರವಾದಂತಾಗಿ ಪ್ರಗತಿ ಸಾಧನೆಗೆ ಅನು - ಚಿಂತನೆ, ದೈವಿಕ ಸ್ವಭಾವ ಕೂಲಿಸುವುದೆಂದೂ ಮಹಮ್ಮದೀಯರ ಭಾವನೆ. ಸಾಕಾ ತಾರ (ಭಗವಂತನಲ್ಲಿರುವ ಸದ್ಗುಣಗಳು ನಿಮ್ಮಲ್ಲಿಯ ನೆಲೆಗೊಳ್ಳುವಂತೆ ಮಾಡಿಕೊಳ್ಳಿರಿ' ಎಂಬುದೇ ಈ ವಿಷಯದಲ್ಲಿ ಮಹಮ್ಮದನ ಉಪದೇಶ. ಆದರೂ, ಅಪರಿಪೂರ್ಣನಾದ ಜೀವಾತ್ಮನು ಪರಿಪೂರ್ಣನಾದ ಪರಮಾತ್ಮನ ಸ್ವಭಾವವನ್ನು ಪೂರ್ತಿ ಯಾಗಿ ಗ್ರಹಿಸುವುದು ಸಾಧ್ಯವೆಂಬುದು ಮಹಮ್ಮದನ ಆಶಯವೇ ಅಲ್ಲ ; ಜೀವಾತ್ಮನು ಎಷ್ಟನ್ನು ಗ್ರಹಿಸುವುದು ಸಾಧ್ಯವೋ ಅಷ್ಟನ್ನು ಮಾತ್ರ ಗ್ರಹಿಸಿ ಆಲೋಡನೆಗೆ ತಂದುಕೊಳ್ಳಬೇಕೆಂಬುದೇ ಅವನ ಅಭಿಪ್ರಾಯ. ಮನುಷ್ಯನು ಸೃಷ್ಟಿ ವೈಚಿತ್ರವನ್ನು ಪರಿಶೀಲಿಸಿ, ಅದರಿಂದ ತೋರುವು ದಕ್ಕನುಗುಣವಾಗಿ ಭಗವಂತನ ಗುಣಗಳು ಎಂತಹವೆಂಬುದನ್ನು ಅನುಮೇಯಿಸಿ, ಆ ಗುಣಗಳನ್ನು ಅನುಕರಣ ಮಾಡಬೇಕೆಂಬುದೇ ಮಹಮ್ಮದನ ಅಭಿಪ್ರಾಯ. ಈ ಭಾಗದಲ್ಲಿ, ಮಹಮ್ಮದನು ಭಗ ವಂತನ ಗುಣಗಳೆಂದು ತನಗೆ ತೋರಿದ ತೊಂಬತ್ತೊಂಬತ್ತು, ಸದ್ಗುಣ ಗಳನ್ನು ಖುರಾನಿನಲ್ಲಿ ಸೂಚಿಸಿದ್ದಾನೆ; ಭಗವಂತನ ಆ ಸದ್ಗುಣಗಳನ್ನು ಮಾನವನು ಧ್ಯಾನಿಸುತ್ತಿರಬೇಕೆಂದೂ, ತನ್ನ ದುರ್ಗುಣಗಳನ್ನು ದಮನ