ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XV, ಇಸ್ಲಾಂ ಮತದ ಮೂಲ ತತ್ವಗಳು ೧೪೩ ನಮ್ಮ ಹೃದಯವನ್ನು ನಾವೇ ಪರೀಕ್ಷಿಸಿಕೊಂಡು ತಪ್ಪುಗಳನ್ನು ತಿದ್ದಿಕೊಳ್ಳುತ್ತ ಬರಬೇಕೆಂಬುದು ಮಹಮ್ಮದನ ಅಭಿಮತ. ಭಗ ವಂತನನ್ನು ಧ್ಯಾನಿಸುತ್ತಲೂ, ಅವನ ಸದ್ಗುಣಗಳನ್ನು ಮನನ ಮಾಡುತ್ತಲೂ, ಯಾರು ಅವನನ್ನು ಅನುಕರಿಸಲು ಪ್ರಯತ್ನಿಸುವರೋ, ಅವರು ಮಾತ್ರವೇ ನೀತಿಯ ನೆಲೆಯನ್ನರಿತ ಸಾಧುಗಳೆಂದು ಮಹಮ್ಮ ದನು ಬೋಧಿಸಿದ್ದಾನೆ. ಭಗವಂತನ ಸದ್ಗುಣಗಳು ನಮ್ಮ ಮನಸ್ಸಿಗೆ ಹೊಳೆಯಲನುಕೂಲಿಸುವಂತೆ ಪ್ರಾರ್ಥನೆಯಲ್ಲಿ ತಕ್ಕ ಪದಗಳನ್ನು ಅವನು ಜೋಡಿಸಿದ್ದಾನೆ. ಅದೇ ಪ್ರಾರ್ಥನೆಯೇ ಇಂದು ಕೂಡ ಅನೇಕ ಮಸೀದಿಗಳಲ್ಲಿ ನಡೆಯುತ್ತಿದೆ. ಅನೇಕ ಮಂದಿ ಮಹಮ್ಮದೀಯರು ಮಹಮ್ಮದನು ಗೊತ್ತುಮಾಡಿರುವಂತೆ ಇಂದಿಗೂ ದಿನಕ್ಕೆ ದು ಸಾರಿ ಭಗವಂತನಿಗೆ ಪ್ರಾರ್ಥನೆಯನ್ನು ಸಮರ್ಪಿಸುತ್ತಿದ್ದಾರೆ. ಪ್ರಾರ್ಥನೆಯ ಪಾಠವನ್ನು ಗಿಳಿಗಳಂತೆ ದಿನಕ್ಕೆದು ಸಾರಿ ಒಪ್ಪಿಸಿ ಬಿಟ್ಟರೆ ಸಾಲದೆಂಬುದೂ, ಖುರಾನಿನಲ್ಲಿ ಹೇಳಿರುವಂತೆ ತದನುಗುಣವಾದ ಸದ್ವರ್ತನೆಯನ್ನೂ ಅನುಸರಿಸಬೇಕೆಂಬುದೂ ಮಹ ಸದ್ವರ್ತನೆ ಮೈದನು ಬೋಧಿಸಿದ ಇಸ್ಲಾಂ ಮತದ ತತ್ತ್ವಗಳು, ರಹ್ಮಾನ್ ಮತ್ತು ರಹೀಂ ಎಂಬ ನಾಮಗಳಿಂದ ಶೋಭಿಸುವ ಭಗವಂತನು ಒಟ್ಟು ಮನುಷ್ಯತ್ವದೊಡನೆ ಯಾವ ರೀತಿಯಲ್ಲಿ ವರ್ತಿಸುತ್ತಿರುವನೋ, ಅದೇ ಉದಾಹರಣೆಯ ಮೇಲೆ, ಅದೇ ರೀತಿಯಲ್ಲಿ ಮನುಷ್ಯನೂ ಯಥಾ ಶಕ್ತಿಯಾಗಿ ಇತರರ ವಿಷಯದಲ್ಲಿ ವರ್ತಿಸಬೇಕೆಂಬುದು ಮಹಮ್ಮದನ ಕಟ್ಟಾಜ್ಞೆ, ಮಾನ ವನು ಇತರರ ಕುಂದು ಕೊರತೆಗಳನ್ನರಿತು ಅವರಿಗೆ ಯಥಾ ಶಕ್ತಿಯಾಗಿ ಸಹಾಯ ಮಾಡಬೇಕು ; ತನ್ನ ನ್ನು ಪ್ರಾರ್ಥಿಸದೆಯೇ ಅವರಿಗೆ ಸಹಾಯ ಮಾಡಲು ಸಿದ್ದನಾಗಿರಬೇಕು. ಅದಕ್ಕಾಗಿಯೇ ಮಹಮ್ಮದನು, ನಿನ್ನ ಜೀವಮಾನದ ಪ್ರತಿ ಹೆಜ್ಜೆಯಲ್ಲಿಯೂ ಇತರರಿಗೆ ರಹ್ಮಾನನಾಗಿಯೂ (ಉಪಕಾರಿಯಾಗಿಯ), ರಹೀಮನಾಗಿಯೂ (ಕರುಣಾಳುವಾಗಿಯ) ಇರು. ಭಗವಂತನನ್ನು ಪ್ರೀತಿಸಲು ನಿನಗೆ ಇಚ್ಚೆಯಿದ್ದಲ್ಲಿ ಅವನು ಸೃಷ್ಟಿಸಿರುವ ಪ್ರಾಣಿಗಳನ್ನು ಪ್ರೀತಿಸು; ಅದರಿಂದಲೇ ಅವನು ಸುಪ್ರೀತ