________________
XV, ಇಸ್ಲಾಂ ಮತದ ಮೂಲ ತತ್ತ್ವಗಳು ಇಸ್ಲಾಂ ಮತದ ನಿಯಮ. ಖುರಾನಿನ ಕೆಲವು ಹೇಳಿಕೆಗಳಿಂದ ಇದನ್ನು ಸಮರ್ಥಿಸಬಹುದು : ವಿಧರ್ಮಿಗಳನ್ನು ದಂಡನೆಗೆ ಗುರಿಮಾಡುವವರೇ ಇಲ್ಲದೆ ಹೋಗಿದ್ದರೆ, ಅಥವಾ ಭಗವಂತನು ಇದಕ್ಕೆ ಅವಕಾಶವನ್ನೇ ಕಲ್ಪಿಸದೆ ಹೋಗಿದ್ದರೆ, ಚರ್ಚುಗಳು, ಮಸೀದಿಗಳು ಮುಂತಾದ ಪ್ರಾರ್ಥನಾ ಮಂದಿರಗಳೆಲ್ಲ ನೆಲ ಸಮವಾಗಿ, ಭಗವನ್ನಾಮ ಸಂಕೀರ್ತ ನೆಗೇ ಅವಕಾಶ ತಪ್ಪಿಹೋಗುತ್ತಿದ್ದಿತು. ” “ ಮತಗಳು ಏರ್ಪಟ್ಟಿರು. ವುದು ಭಗವಂತನ ಸೇವೆಗಾಗಿ. ಆದಕಾರಣ, ಧರ್ಮಾಚರಣೆಗುಂಟಾಗಿರುವ ತೊಂದರೆಗಳು ತಪ್ಪುವ ವರೆಗೂ ಅದಕ್ಕೆ ಕಾರಣರಾದ ವಿಧರ್ಮಿ ಗಳ ಮೇಲೆ ಯುದ್ಧಮಾಡಿರಿ,' ಇವು ಕೇವಲ ಸ್ಫೂರ್ತಿ ದಾಯಕವಾದ ಉಪದೇಶಗಳು, ಮಹಮ್ಮದನು ಅನೇಕ ಸಾರಿ ಯುದ್ಧ ಮಾಡಿದರೂ, ತನ್ನ ನ ತನ್ನ ಮತವನ್ನೂ ಧ್ವಂಸ ಮಾಡುವ ಉದ್ದೇಶದಿಂದ ಕಾಳೆಗಕ್ಕೆ. ಅನುವಾದವರೊಡನೆಯ, ಮತ ಪ್ರಸಾರಣೆಗೆ ಅಡ್ಡಿ ಬಂದು ತನ್ನ ಅನು ಯಾಯಿಗಳನ್ನು ಹಿಂಸಿಸಿದವರೊಡನೆಯ ಮಾತ್ರವೇ ಅವನು ಯುದ್ಧ ಮಾಡಿದನು, “ ನಿಮ್ಮ ಮೇಲೆ ಯುದ್ಧಕ್ಕೆ ಬಂದವರೊಡನೆ ಭಗವಂತನ ಕಾರ್ಯಕ್ಕಾಗಿ ಎಷ್ಟು ಆವಶ್ಯಕವೋ ಅಷ್ಟರ ಮಟ್ಟಿಗೆ ಮಾತ್ರ ಯುದ್ಧ ಮಾಡಿರಿ; ಈ ಹದ್ದನ್ನು ಮೀರಿ ನಡೆಯಬೇಡಿರಿ. ಏಕೆಂದರೆ, ಹದ್ದು. ಊಾರಿ ವರ್ತಿಸುವವರನ್ನು ಭಗವಂತನೆಂದಿಗೂ ಪ್ರೀತಿಸನು' ಎಂಬುದು ಖುರಾನಿನ ಕಟ್ಟಪ್ಪಣೆ, ಶತ್ರುಗಳಲ್ಲಿ ಕೂಡ ಮಹಮ್ಮದನಿಗೆ ಸಹಾನು. ಭೂತಿಯಿದ್ದಿತೆಂಬುದು ಖುರಾನಿನಲ್ಲಿರುವ ಮುಂದಣ ವಾಕ್ಯಗಳಿಂದ ಸ್ಪಷ್ಟವಾಗುವುದು: “ಶತ್ರು ಪಕ್ಷದವರು ಈ ಬಗೆಯ ಅಧರ್ಮ ಯುದ್ಧ ವನ್ನು ನಿಲ್ಲಿಸುವುದಾದರೆ, ಕರುಣಾಳುವಾದ ಭಗವಂತನು ಅವರ ಅಪರಾಧವನ್ನು ಮನ್ನಿಸುವನು ; ಅವರ ಅತ್ಯಾಚಾರವು ಅಡಗುವ ವರೆಗೆ ಮಾತ್ರವೇ ಅವರೊಡನೆ ಯುದ್ಧ ಮಾಡು. ಯುದ್ಧವು ಸಾಕೆಂದು ಬಗೆದು ಶತ್ರುಗಳು ಸಮಾಧಾನ ಮಾಡಿಕೊಳ್ಳುವ ಆಲೋಚನೆ ಮಾಡಿದರೆ, ನೀನೂ. ಅದೇ ರೀತಿ ಮಾಡಿ ಭಗವಂತನಲ್ಲಿ ಭರವಸೆಯಿಡು, ಅವರು ನಿನಗೆ ಮೋಸ ಮಾಡಲಿಚ್ಛಿಸುವದಾದರೆ, ಹಾಗೂ ಮಾಡಲಿ ; ಅದಕ್ಕಾಗಿ ನೀನು ಭಯ ಪಡಬೇಡ ; ಭಗವಂತನೊಬ್ಬನ ಬೆಂಬಲವೇ ನಿನಗೆ ಸಾಕು.”