________________
೧೫L ಪೈಗಂಬರ ಮಹಮ್ಮದನು ಗಳುಂಟು. ಅವರು ತಮ್ಮ ಕರ್ತವ್ಯವನ್ನು ನೆರವೇರಿಸುವುದಕ್ಕೆ ಮಾತ್ರವೇ ಈ ಲೋಕದಲ್ಲಿ ಹುಟ್ಟಿದವರಲ್ಲ, ಹಕ್ಕುಗಳನ್ನು ಅನುಭವಿ 'ಸುವುದಕ್ಕೂ ಹುಟ್ಟಿದವರು ” ಎಂದೂ, ' ಪುರುಷನು ಹೀಗೆ ಹೇಗೆ ಭೂಷಣ ಪ್ರಾಯನೋ, ಸ್ತ್ರೀಯ ಹಾಗೆಯೇ ಪುರುಷನಿಗೆ ಭೂಷಣ ಪ್ರಾಯಳು ಎಂದೂ ಸಿದ್ದಾಂತ ಮಾಡಿದ ಮಹನೀಯನು ಮಹ ಮ್ಮದನು. ಮಾತೃ ದೇವೋ ಭವ' ಎಂಬ ವೇದೋಕ್ತಿಯನ್ನು ನಮ್ಮ ನೆನಪಿಗೆ ತರುವ, “ಸ್ವರ್ಗ ಲೋಕವು ಮಾತೆಯ ಅಡಿದಾವರೆಯ ಬಳಿ ಯಲ್ಲಿದೆ” ಎಂಬ ಮಹಾ ವಾಕ್ಯವನ್ನು ನುಡಿದ ಸಾಧು ಶ್ರೇಷ್ಠನು ಮಹ ಮೃದನು. ಒಮ್ಮೆ, ಶಿಷ್ಯನೊಬ್ಬನು ಮಹಮ್ಮದನನ್ನು ಕುರಿತು, ಗಂಡನು ಹೆಂಡತಿಯನ್ನು ಹೇಗೆ ಕಾಣಬೇಕೆಂದು ಪ್ರಶ್ನೆ ಮಾಡಿದನು. ಆಗ ಮಹಮ್ಮದನು, “ ನೀನು ಊಟ ಮಾಡುವಾಗ ಆಕೆಯನ್ನೂ ಊಟ ಮಾಡುವಂತೆ ಹೇಳು ; ನೀನು ಬಟ್ಟೆಯನ್ನು ಕೊಂಡುಕೊಂಡಾಗ ಆಕೆಗೂ ಬಟ್ಟೆಯನ್ನು ತೆಗೆದುಕೊಡು ; ಆಕೆಯನ್ನು ಎಂದಿಗೂ ಹಿಂಸಿಸ ಬೇಡ ; ಗುಲಾಮಳಂತೆ ಕಂಡು ತಾಡಿಸುವುದನ್ನು ಬಿಟ್ಟುಬಿಡು. ಒಳ್ಳೆಯ ಮಾತುಗಳಿಂದ ಆಕೆಗೆ ವಿವೇಕವನ್ನು ಪದೇಶಿಸು ಎಂದು ಉತ್ತರ ಹೇಳಿದನು. ಸ್ತ್ರೀಯರ ವಿಚಾರವಾಗಿ ಖುರಾನಿನಲ್ಲಿ ಉತ್ತಮವಾದ ಕೆಲವು ಉಪದೇಶ ವಾಕ್ಯಗಳಿವೆ: ( ನೀವೂ ನಿಮ್ಮ ಪತ್ನಿಯರೂ ಸಂತುಷ್ಟ ಚಿತ್ರ ರಾಗಿ ಆನಂದದಿಂದ ಸ್ವರ್ಗ ಲೋಕವನ್ನು ಪ್ರವೇಶಿಸಿರಿ.” “ಮತ ಧರ್ಮ ದಲ್ಲಿ ಶ್ರದ್ಧೆಯನ್ನಿಟ್ಟು ಸತ್ಕರ್ಮಗಳನ್ನಾಚರಿಸಿದವರೆಲ್ಲರೂ ಸ್ವರ್ಗವನ್ನು ಪಡೆಯುವರು ; ಹೆಂಗಸರಾದ ಮಾತ್ರಕ್ಕೆ ಯಾವ ಪ್ರತಿಬಂಧಕವೂ ಇಲ್ಲ. ಪುಣ್ಯ ಕರ್ಮಗಳನ್ನಾಚರಿಸಿದ ಸ್ತ್ರೀ ಪುರುಷರಿಬ್ಬರಿಗೂ ಸ್ವರ್ಗ ಲಾಭ ವುಂಟು.” “ಧರ್ಮೋಲ್ಲಂಘನೆ ಮಾಡದೆ ಮತಾಚರಣೆಯಲ್ಲಿ ಶ್ರದ್ಧಾಳು ಗಳಾಗಿದ್ದು ಸತ್ಯ ಪ್ರಿಯರೂ, ವಿನೀತಾತ್ಮರೂ, ಪರೋಪಕಾರ ನಿರತರೂ, ಮಾನ ರಕ್ಷಕರೂ, ಭಗವಧ್ಯಾನ ಪರಾಯಣರೂ ಎನಿಸಿಕೊಂಡಿರುವ ಸಜ್ಜನರು ಪುರುಷರೇ ಆಗಲಿ, ಸ್ತ್ರೀಯರೇ ಆಗಲಿ ಭಗವಂತನಿಂದ ಕ್ಷಮಾ ಭಿಕ್ಷೆಯನ್ನೂ ಅನಘ್ರ್ರವಾದ ಬಹುಮಾನವನ್ನೂ ಪಡೆಯುವರು.”