ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

XV, ಇಸ್ಲಾಂ ಮತದ ಮೂಲ ತತ್ವಗಳು ೧೫೯ ಈ ಮಾತು ಹಾಗಿರಲಿ; ಇಸ್ಲಾಂ ಮತ ಧರ್ಮಗಳ ಮೇರೆಗೆ ಸ್ತ್ರೀಯ ಸ್ವಯಾರ್ಜಿತ ವಿಷ್ಯದ ಮೇಲೆ ಪುರುಷನಿಗೆ ಸುತರಾಂ ಅಧಿಕಾರ ವಿರುವುದಿಲ್ಲ. ವಿವಾಹಿತಳಾದ ಸ್ತ್ರೀಯು ತನ್ನ ಆದಾಯ ವೆಚ್ಚಗಳ ಕೆಲಸ ವನ್ನು ತಾನೇ ಸ್ವಂತವಾಗಿ ನಡೆಯಿಸಬಹುದು; ಗಂಡನ ಮಲಕವೋ ತಂದೆಯ ಮಲಕವೋ ನಡೆಯಿಸಬೇಕಾದ ಆವಶ್ಯಕತೆಯೇನೂ ಇರುವು ದಿಲ್ಲ. ಸ್ವಂತವಾಗಿ ತಾನೇ ನ್ಯಾಯ ಸ್ಥಾನದಲ್ಲಿ ಮೊಕದ್ದಮೆಯನ್ನು ನಡೆಯಿಸಲು ಅವಳಿಗೆ ಪೂರ್ಣಾಧಿಕಾರವುಂಟು. ಇಸ್ಲಾಂ ಧರ್ಮ ಶಾಸ್ತ್ರ ರೀತಿಯಾಗಿ ಪ್ರಾಪ್ತ ವಯಸ್ಕಳಾದ ಸ್ತ್ರೀಗಿರತಕ್ಕ ಹಕ್ಕು ಬಾಧ್ಯತೆಗಳಿಗೆ ಅವಳ ತಂದೆಯಾಗಿ ಗಂಡನಾಗಲಿ ಅಡ್ಡ ಬರಲು ಯಾವ ಅಧಿಕಾರವೂ ಇರುವುದಿಲ್ಲ. ಇಸ್ಲಾಂ ಮತ ಧರ್ಮದ ಪ್ರಕಾರ ಒಬ್ಬ ಗಂಡುಸಿಗೆ ಏಕ ಕಾಲದಲ್ಲಿ ನಾಲ್ವರ ವರೆಗೂ ಪತ್ನಿಯರಿರಬಹುದು. ಭಾರತೀಯರಲ್ಲಿಯ ಬಹು ಪತ್ನಿತ್ವಕ್ಕೆ ಅನುಜ್ಞೆಯಿದ್ದರೂ, ಬಹುಪತ್ನಿತ್ವವು ಬಹು ಪತ್ನಿತ್ವ ಉಪಾದೇಯವಾದ ಗುಣವಲ್ಲವೆಂದೂ, ಏಕ ಪತ್ನಿ ಈ ವ್ರತವೇ ಸರ್ವೋತ್ಕೃಷ್ಟವಾದುದೆಂದೂ ಸಾಮಾನ್ಯ ವಾಗಿ ಎಲ್ಲರೂ ಒಪ್ಪುತ್ತಾರೆ. ಆದರೆ, ಬಹು ಪತ್ನಿತ್ವಕ್ಕೆ ಅವಕಾಶ ಕೊಟ್ಟುದರಿಂದ ಮಹಮ್ಮದನು ತಪ್ಪಿತಮಾಡಿದಂತಾಯಿತೇ ಎಂಬುದು ಇಲ್ಲಿಯ ಚರ್ಚಾಂಶವಾಗಿದೆ. ಈ ವಿಷಯದಲ್ಲಿ ರೈಟ್ ಆನರೆಬಲ್ ಸೈಯದ್ ಅಮೂಾರ್ ಆಲಿಯವರೂ, ಮೆ|| ಸ್ವಾಜಾ ಕಮಾಲುದ್ದೀನ ರವರೂ ಸೂಚಿಸಿರುವ ಅಭಿಪ್ರಾಯಗಳ ಮುಖ್ಯಾಂಶವನ್ನು ಇಲ್ಲಿ ಕೊಟ್ಟಿದೆ: ಬಹು ಪತ್ನಿತ್ವವು ಈಗಿನ ಮನೋಭಾವದ ಮೇರೆಗೆ ಅಕ್ಷಮ್ಯ ವಾದುದೆಂಬುದೇನೋ ನಿಜ. ಆದರೆ, ನಮ್ಮ ಸಮಾಜ ಸ್ಥಿತಿಯಲ್ಲಿ ಕೆಲವು ವೇಳೆ ಅದು ತೀರ ಆವಶ್ಯಕವಾಗಿ ಪರಿಣಮಿಸಬಹುದು. ಉದಾಹರಣೆ ಗಾಗಿ, ಘೋರವಾದ ಒಂದು ಯುದ್ಧವು ನಡೆದು ರಣ ರಂಗದಲ್ಲಿ ಅನೇಕ ಮಂದಿ ಪುರುಷರು ಹತರಾಗುತ್ತಾರೆ. ಇದರಿಂದ ಪುರುಷರ ಸಂಖ್ಯೆಯು ಬಹಳ ಕಡಿಮೆಯಾಗಿ, ಸ್ತ್ರೀಯರ ಸಂಖ್ಯೆಯು ಪುರುಷರ ಸಂಖ್ಯೆಯ