ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೧೭೦ ಪೈಗಂಬರ ಮಹಮ್ಮದನು ವೆಂಬ ಉದಾತ್ತ ತತ್ತ್ವವನ್ನು ಮಹ ಮ್ಮ ದನು ಎಲ್ಲೆಲ್ಲಿಯೂ ಹರಡಿದನು. ೪. ನ್ಯೂನಾತಿರೇಕಗಳ ತಿದ್ದು ಪಡಿ-ಮಹಮ್ಮದನು ಜನ ರಲ್ಲಿದ್ದ ಯಾವುದಾದರೂ ಒಂದೆರಡು ನ್ಯೂನತೆಗಳನ್ನು ಸರಿಪಡಿಸಿ, ಅಷ್ಟು ಮುಟ್ಟಿನ ಸಮಾಜ ಪರಿಷ್ಕರಣದಿಂದಲೇ ತೃಪ್ತನಾಗಲಿಲ್ಲ ; ಅರಬ್ಬಿಯವರ ಜೀವನದಲ್ಲಿದ್ದ ವಿಶಿಷ್ಟ ನ್ಯೂನಾತಿರೇಕಗಳನ್ನೂ ತಿದ್ದಿ ಅವರ ಜನಪದ ವನ್ನು ಆರಿಸಿದನು. ಮನುಷ್ಯ ಸಾಮಾನ್ಯರಲ್ಲಿ ಅವ್ಯಕ್ತವಾಗಿ ಅಡಗಿರುವ ಸಮಸ್ತ ಗುಣಗಳೂ ಪರಿಸ್ಪುಟಗೊಳ್ಳಲು ಅವಕಾಶವಿರುವಂತೆ ಅವನು ಬಲವಾದ ತಳಹದಿಯ ಮೇಲೆ ಕಟ್ಟಡವನ್ನೆಬ್ಬಿಸಿದನು. ಮಹಮ್ಮದನು ಅನಾಥ ಬಾಲಕನಾಗಿದ್ದುದು ಮೊದಲುಗೊಂಡು ಪ್ರಭು ಪದವಿಯನ್ನು ಹೊಂದುವ ವರೆಗೂ ನಾನಾ ಸನ್ನಿ ವೇಶಗಳಲ್ಲಿ ತದನುಗುಣವಾಗಿ ಪಡೆದಿದ್ದ ಕಷ್ಟ ಸುಖಗಳ ಅನುಭವವು ಇದಕ್ಕೆ ಬಹಳವಾಗಿ ಸಹಕಾರಿಯಾಯಿತು. - ೫, ಸ್ವಭಾವ ಪರಿವರ್ತನ ದಕ್ಷತೆ-ಸಮಾಜ ಪರಿಷ್ಕರಣ ವಾಗಬೇಕೆಂಬ ಕುತೂಹಲವು ಅರಬ್ಬಿಯವರಿಗಿದ್ದು, ಅಂತಹ ಸಮಯದಲ್ಲಿ ಮಹಮ್ಮದನು ಅವತರಿಸಿದ್ದರೆ, ಆಗ ಅವನ ಉಪದೇಶವು ಅವರ ಮನ ಸ್ಸಿಗೆ ಸುಲಭವಾಗಿ ಹಿಡಿಯುತ್ತಿದ್ದಿತು ; ಅವನ ಕಾರ್ಯವು ಸುಲಲಿತ ವಾಗಿ ಸಾಗುತ್ತಿದ್ದಿತು. ಆದರೆ, ಪರಿಷ್ಕರಣವು ಅವರಲ್ಲಿ ಬಹು ಮಂದಿಗೆ ಬೇಡದೆ ಇದ್ದುದರಿಂದ, ಮಹಮ್ಮದನ ಉಪದೇಶವು ಅವರಿಗೆ ಅಪ್ರಿಯ ವಾಗಿ ತೋರಿತು. ಇದರ ಪರಿಣಾಮವಾಗಿ ಮಹಮ್ಮದನಿಗೆ ಎಷ್ಟು ಘೋರವಾದ ವಿಪತ್ತುಗಳೊದಗಿದುವೆಂಬುದನ್ನು ಹಿಂದೆಯೇ ಹೇಳಿದೆ. ಮಹಮ್ಮದನು ಯಾವ ಕಷ್ಟಗಳಿಂದಲೂ ಕಳೆಗುಂದದೆ, ತನ್ನ ಉದ್ದೇಶ ವಡೇರಿಸಿಕೊಂಡು ವಿಜಯ ಮಾಲೆಯನ್ನು ತಳೆದನು. ಭಗವಂಕ ಲ್ಪದ ಮುಂದೆ ಮಾನವರ ಎಡರು ತೊಡರುಗಳು ಎಷ್ಟು ಕಾಲ ನಿಲ್ಲ ಬಲ್ಲವು? ಅಂತು, ಯಾವ ಭಾಗದಲ್ಲಿ ಪರಾಮರ್ಶಿಸಿ ನ ಅದರ ಮa ಮೃದು ಮಹಾ ಪುರುಷನೆಂಬುದು ವ್ಯಕ್ತವಾಗುತ್ತದೆ. ಮೆ|| ಮಹ ಮ್ಮದ್ ಆಲಿಯವರು ಅಪ್ಪಣೆ ಕೊಡಿಸಿರುವಂತೆ, ಪತಿತರನ್ನು ದರಿಸುವುದು