ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ವಯಸ್ಸಿನಲ್ಲಿ ಚಿಕ್ಕವನೆಂದಾಗಲಿ, ನಿರ್ಗತಿಕನಾಗಿದ್ದು ತನ್ನ ಕಟಾಕ್ಷ ವೀಕ್ಷಣೆಯಿಂದ ಧನಿಕನಾಗಿ ತನ್ನಿಂದ ಅನುಗೃಹೀತನಾಗಿದ್ದನೆಂದಾ ಗಲಿ ಭಾವಿಸಿ ಅವನಲ್ಲಿ ಲೇಶಮಾತ್ರವೂ ಆಕೆಯು ಅಲಕ್ಷ್ಯವನ್ನಾ ಗಲ ಅಗೌರವವನ್ನಾಗಲಿ ತೋರಿಸಲಿಲ್ಲ; ಮಹಮ್ಮದನೇ ತನ್ನ ಪ್ರಾಣೇಶ್ವರನೆಂದು ಭಾವಿಸಿ ಅವನನ್ನು ಪ್ರೀತಿಸಿದಳು. ತನ್ನ ಸಮಸ್ಯ ಸಂಪತ್ತನ್ನೂ ಆ ಸಾಧಿಯು ಅವನ ಪದತಲಕ್ಕೆ ಸಮರ್ಪಿಸಿದಳು. ಅವನು ಅದನ್ನು ಸ್ವೀಕರಿಸಿದುದೇ ಮಹಾನುಗ್ರಹವೆಂದು ಭಾವಿಸಿ ಪ್ರೇಮಮಯಿಯಾದ ಆ ಸಾಧಿಯು ಸಂತೋಷದಿಂದ ಹಿಗ್ಗಿದಳು ; ಸಮ ದುಃಖಿನಿಯಾಗಿ, ಸಹ ಧರ್ಮಿಣಿಯಾಗಿ, ಅವನನ್ನು ಓಲೈಸಿದಳು. ಮಹಮ್ಮದನ ಕಣ್ಣಿಗೆ ದೇವ ದೂತನು ಗೋಚರಿಸಿದನೆಂಬ ಸಂಗತಿಯನ್ನು ಕೇಳಿ ಹಲವರು ತಿರಸ್ಕಾರ ಭಾವದಿಂದ ನಗುತ್ತಿದ್ದರೂ ಅದನ್ನು ಮೊಟ್ಟಮೊದಲು ಆದರದಿಂದ ನಂಬಿ ಪತಿಯ ಮಾಹಾತ್ಮಗಾಗಿ ಅಜಿ. ಮಾನದಿಂದ ತಲೆದೂಗಿದವಳು ಖದೀಜಳೇ. [ಇದರ ವಿಚಾರವನ್ನು ಮುಂದೆ ವಿಸ್ತರವಾಗಿ ತಿಳಿಸಲಾಗುವುದು.] ಹಲವರು ಅಪಹಾಸ್ಯ ಮಾಡಿ ಮಹಮ್ಮದನನ್ನು ಸಂತಾಪಕ್ಕೆ ಗುರಿ ಮಾಡಿದಾಗ ಅವನ ಮನಸ್ಸನ್ನು ಸಮಾಧಾನಗೊಳಿಸಿ ಪ್ರೀತಿಯಿಂದ ಸಂತವಿಟ್ಟವಳು ಖದೀಜಳೇ, ಆಕೆಯು ಒಳ್ಳೆಯ ಸ್ವಭಾವದವಳಲ್ಲದೆಹೋಗಿದ್ದರೆ ಮಹಮ್ಮದನು, ಯಾರೂ ನಂಬದ ಭಗವದನುಗ್ರಹದ ವಿಚಾರವನ್ನು ತನ್ನೊಡನೆ ತಿಳಿಸಿದಾಗ, ಆಕೆಯು ವ್ಯಂಗ್ಯವಾಗಿ ನಕ್ಕು, “ ಇದು ನನ್ನ ಸಹಾಯದಿಂದ ದೊರೆತ ಸುಖ ಜೀವನದ ಮಹಿಮೆ, ಅಲಸತನದ ಚರಮ ಸೀಮೆಯ ಪಿತ್ತ ವಿಕಾರ, ಮಾಡಲು ಕೆಲಸವಿಲ್ಲದವರ ಚಿತ್ರ ಭ್ರಮಣೆ !'> ಎಂದು ಹೇಳಿ ಅವನನ್ನು ಹಾಸ್ಯ ಮಾಡುತ್ತಿದ್ದಳೋ ಏನೋ ! ಸತೀ ಧರ್ಮವನ್ನರಿತು ನಡೆಯುತ್ತಿದ್ದ ಎದೀಜಳಿಗೆ ಅಂತಹ ಯೋಚನೆಯೇ ಹುಟ್ಟಲಿಲ್ಲ. ಹಣದ ರಾಶಿಯ ಮೇಲೆ ಕುಳಿತಿದ್ದರೂ ಸುಖವನ್ನು ಕಾಣುವುದು ಸಾಧ್ಯವಿಲ್ಲದೆ ಇರಬಹುದು. ಪ್ರಪಂಚದಲ್ಲಿ ಒಬ್ಬೊಬ್ಬ ಪುತ್ರ ಶೋಕ ರಿಗೆ ಒಂದೊಂದು ವಿಧದಲ್ಲಿ ದುಃಖವನ್ನೊದಗಿಸು