________________
೧೮ ಪೈಗಂಬರ ಮಹಮ್ಮದನು ದಲ್ಲಿ ಯಾಗಲಿ ಎಂದೋ ಒಂದು ದಿನ ಕಳಚಿ ಬಿದ್ದೆ ಹೋಗುವುದು ; ಬಳಿಕ ಅವರು ಪೂರ್ಣ ಆಸ್ತಿಕರೇ ಆಗುತ್ತಾರೆ' ಎಂಬುದು ಹಿಂದೂಗಳ ನಂಬಿಕೆ. ಮೇಲೆ ಹೇಳಿದಂತೆ ಸಾಕ್ಷಾತ್ಕಾರವನ್ನು ಪಡೆದ ಬಳಿಕ ನಿಮಹ ಮೃದನು ಅನಿರ್ವಚನೀಯವಾದೊಂದು ಸ್ಥಿತಿಯನ್ನು ಹೊಂದಿ ಗುಹೆ ಯನ್ನು ಬಿಟ್ಟು ಮನೆಗೆ ಬಂದನು. ಖದೀಜಳು ಎಲ್ಲ ಮತ ಬೋಧೆ ಸಂಗತಿಗಳನ್ನೂ ಕೇಳಿ ತಿಳಿದುಕೊಂಡ ಸಂದಿ ನಂತೆಯೇ ಅವನನ್ನು ಆದರಿಸುತ್ತಿದ್ದಳು. ಆ ಬಳಿಕ ಮಹಮ್ಮದನು ದೈನಿಕ ಸಂದೇಶವನ್ನು ಜನರಿಗೆ ಬೋಧಿಸಿ ಅವರ ಅಜ್ಞಾನವನ್ನು ತೊಲಗಿಸಲು ಸೊಂಟಕಟ್ಟಿದನು ; ಜನಗಳ ಮೇಲೆಗಾಗಿ ಹೆಣಗಾಡುವ ದೀಕ್ಷೆಯನ್ನು ವಹಿಸಿ, ಅದಕೋಸುಗವೇ ಇದೆ ಮುಂದೆ ತನ್ನ ಜೀವನವನ್ನು ಕಾಣಿಕೆಯಾಗಿ ಸಮರ್ಪಿಸಿದನು. ಅವನ ಉಪದೇಶವನ್ನು ಕೇಳಿ ಅನೇಕರು ಅಪಹಾಸ್ಯ ಮಾರಲಾರಂಭಿಸಿದರು ; ಕೆಲವರು ಗಲಭೆ ಮಾಡಿ ಅವನನ್ನು ಹಿಂಸಿಸುತ್ತಿದ್ದರು. ಮಹಮ್ಮದನು ಇದೊಂದಕ್ಕೂ ಸಗ್ಗದೆ ತನ್ನ ಪ್ರಯತ್ನವನ್ನು ಮುಂದುವರಿಸಿ ಕಾಲಾನು ಕ್ರಮದಲ್ಲಿ ಪ್ರಬಲನಾದನು. ಅವನು ಬೋಧಿಸುತ್ತಿದ್ದ ಇಸ್ಲಾಂ ಮತಕ್ಕೆ ಪ್ರಾಶಸ್ಯವುಂಟಾಯಿತು. ಪೂರ್ವ ಸಂಪ್ರದಾಯ ಶರಣರಾಗಿದ್ದವರು ಕೆಲವರು, ಅವನು ಮತ ಬೋಧೆಯನ್ನು ನಿಲ್ಲಿಸುವುದಾದರೆ ಅವನನ್ನು ಮಕ್ಕಾ ನಗರಕ್ಕೆ ದೊರೆಯಾಗಿ ಮಾಡಿ, ದೇಶದಲ್ಲೆಲ್ಲ ಸ್ಪುರದ್ರೂಪಿಯೆಸಿ ಸಿದ ಕನೈಯನ್ನು ತಂದು ಅವನಿಗೆ ವಿವಾಹ ಮಾಡುವುದಾಗಿ ತಿಳಿಸಿದರು. ಪ್ರಬಲರಾದ ಆ ದೊಡ್ಡ ಮನುಷ್ಯರೊಡ್ಡಿದ ದುರಾಸೆಯ ಬಲೆಗೆ ಮಹ ಮೃದನು ಬೀಳದೆ ಹೋದುದನ್ನು ಕಂಡು ಜನರೆಲ್ಲರೂ ಅಚ್ಚರಿ ಗೊಂಡರು. ಮಹಮ್ಮದನು, “ಬಲಗೈಯಲ್ಲಿ ಹಿಡಿಯಲು ಸೂರ್ಯ ನನ್ನೂ , ಎಡಗೈಯಲ್ಲಿ ಹಿಡಿಯಲು ಚಂದ್ರನನ್ನೂ ನೀವು ಆಕಾಶದಿಂದ ಕಳಜಿ ತಂದು ನನಗೆ ಕೊಟ್ಟರೂ ನಾನೇನೊ ಭಗವಂತನ ಆಜ್ಞೆಯನ್ನು ಉಲ್ಲಂಘಿಸಿ ಮತ ಬೋಧೆಯನ್ನು ನಿಲ್ಲಿಸಲೊಲ್ಲೆನು ಎಂದು ಧೈರ್ಯ ವಾಗಿ ಉತ್ತರಕೊಟ್ಟನು.