ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

وو ಪೈಗಂಬರ ಮಹಮ್ಮದನು ಅವನನ್ನು ಹಾಸ್ಯ ಮಾಡುವುದಕ್ಕೂ ಅಣಕಿಸುವುದಕ್ಕೂ ಸಿದ್ಧವಾಗಿ ಸಾಲು ಸಾಲಾಗಿ ನಿಲ್ಲುವರು; ಅವನು ಧ್ಯಾನಕ್ಕೆ ಕುಳಿತುಕೊಳ್ಳುವ ಸ್ಥಳದಲ್ಲಿ ಮುಳ್ಳನ್ನು ಹರಡುವರು; ಅವನೂ ಅವನ ಶಿಷ್ಯರೂ ಧ್ಯಾನಕ್ಕೆ ಕುಳಿತಾಗಲೆಲ್ಲ ಅವರ ಮೇಲೆ ಕಸವನ್ನೂ ಕೊಟ್ಟೆಯನ್ನೂ ಕೊಚ್ಚನ್ನೂ ತಂದು ಸುರಿಯುವರು. ಅವರು ಮಹಮ್ಮದನಿಗೆ ಭೂತವು ಹಿಡಿದಿದೆ ಯೊಂದು ಪ್ರವಾದವನ್ನೆ ಬೈಸಿ ಹರಡತೊಡಗಿದರು. ಏ ತ ನ ಧೈ ಮತ್ತೊಂದು ವಿಚಿತ್ರವು ನಡೆಯಿತು: ವ್ಯಾಪಾರಕ್ಕಾಗಿಯ ಇತರ ಕೆಲಸ ಗಳಿಗಾಗಿಯ ಮಕ್ಕಾ ನಗರಕ್ಕೆ ಬರುತ್ತಿದ್ದವರಲ್ಲಿ ಅನೇಕರು ಮಹಮ್ಮ ದನು ಬೋಧಿಸುತ್ತಿದ್ದ ಭಗವತ್ಸಂದೇಶವನ್ನು ಆದರದಿಂದಲೂ ಆಸಕ್ತಿ ಯಿಂದಲೂ ಲಾಲಿಸತೊಡಗಿದರು. ಇದನ್ನು ಕಂಡ ಅವನ ಶತ್ರು) ಪಕ್ಷ ದವರ ದ್ವೇಷಾಸೂಯೆಗಳಿಗೆ ಪಾರವಿಲ್ಲದಂತಾಯಿತು. ಅವರು ಮಧ್ಯ ಮಾರ್ಗದಲ್ಲಿ ಅಲ್ಲಲ್ಲಿ ನಿಂತು, ತಮ್ಮ ನಗರದ ಕಡೆಗೆ ಬರುತ್ತಿದ್ದವರೆಲ್ಲರಿಗೂ, ಮಹಮ್ಮದನ ಮಾತುಗಳಿಗೆ ಕಿವಿಗೊಡಗೂಡದೆಂದು ಬೋಧಿಸತೊಡ ಗಿದರು. ಅವರ ಕಿರುಕುಳವೂ ಅಲ್ಲಿಗೇ ನಿಲ್ಲಲಿಲ್ಲ: ಅವರೆಲ್ಲರೂ ಮಹಮ್ಮದನ ಚಿಕ್ಕಪ್ಪನ ಬಳಿಗೆ ಹೋಗಿ ಆ ಹುಚ್ಚನ ವಿಗಡತನವನ್ನು ಅವನಾದರೂ ಬಿಡಿಸಬೇಕೆಂದು ಕೇಳಿಕೊಂಡರು. ಆ ವೃದ್ದ ವೀರೆಸಿಗೆ ಮಹಮ್ಮದನು ಬೋಧಿಸುತ್ತಿದ್ದ ಮತದಲ್ಲಿ ಶ್ರದ್ದೆಯಿರದಿದ್ದರೂ ಅವನನ್ನು ಅನ್ಯಾಯ ವಾಗಿ ಶತ ಪಕ್ಷದವರು ಕಾಡುತ್ತಿದ್ದುದನ್ನು ಕಂಡು ರೋಷವುಂಟಾ ಯಿತು. ಗುಣ ಪಕ್ಷಪಾತಿಯ, ಪರ ಮತ ಸಹಿಷ್ಣುತೆಯುಳ್ಳವನೂ ಆಗಿದ್ದ ಆ ಅಧರ್ಮ ಭೀರುವು ಕೊyಧ ಕಂಪಿತ ಕಳೇಬರನಾಗಿ ತನ್ನ ಬಳಿಗೆ ಬಂದಿದ್ದವರನ್ನು ಮುಖ ಮುರಿದು ಕಳುಹಿಸಿದನು. ಅಷ್ಟೇ ಅಲ್ಲ ; ಆಶು ಕವಿತೆಯಲ್ಲಿ ಪರಿಣತನಾಗಿದ್ದ ಆ ವೃದ್ವಸು ತನ್ನ ಧಮನಿಯಲ್ಲಿಯ ತನ್ನ ವಂಶದವರ ಧಮನಿಯಲ್ಲಿಯ ರಕ್ತದ ಶೇಷ ಬಂದುವು ಒಂದು ಉಳಿದಿರುವ ವರೆಗೂ ನಿರಪರಾಧಿಗಳಿಗೆ ಪರ ಪೀಡೆಯನ್ನು ತಪ್ಪಿಸುವುದ ರಲ್ಲಿ ತಾವೆಂದಿಗೂ ಅಲಸರಾಗಿರುವುದು ಸಾಧ್ಯವಿಲ್ಲವೆಂಬ ಪದ್ಯವೊಂದನ್ನು ರಚಿಸಿ, ಸಿಂಹ ಗರ್ಜನೆಯಿಂದ ಅದನ್ನು ಹೇಳಿ, ತನ್ನ ಬಳಿಗೆ ಬಂದಿದ್ದವರು ಅಚ್ಛೆಯಿಂದ ಓಡಿಹೋಗುವಂತೆ ಮಾಡಿದನು. ಕೋರೈಸ್ ಮನೆತನ