ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೨೪ ಪೈಗಂಬರ ಮಹಮ್ಮದನು ಒಣಗಿಹೋಗುವಂತೆ, ಹೊಸ ಮತದ ಅನುಯಾಯಿಗಳಿಗೆ ತಕ್ಕ ಶಿಕ್ಷೆ ಯನ್ನು ಮಾಡಿದಲ್ಲಿ ತಮ್ಮ ಉದ್ದೇಶವು ಈಡೇರುವುದೆಂದಾಲೋಚಿಸಿ ತಮ್ಮ ತಮ್ಮಲ್ಲಿಯೇ ಒಳಸಂಚು ಒಪ್ಪಂದಗಳನ್ನು ಮಾಡಿಕೊಂಡು ಅವರೆಲ್ಲರೂ ಒಕ್ಕಟ್ಟಾಗಿ ನಿಂತರು. ಮಹಮ್ಮದನ ಶಿಷ್ಯರಿಗೆ ಉಳಿ `ಗಾಲವಿಲ್ಲದಂತೆ ಹಿಂಸೆಗೆ ಪ್ರಾರಂಭವಾಯಿತು: ಕೆಲವರು ಕಾರಾಗೃಹದಲ್ಲಿ ಬಂಧನಕ್ಕೊಳಗಾದರು ; ಕೆಲವರು ಆಹಾರ ದೊರೆಯದಂತಾಗಿ ವ್ಯಥೆಗೆ ಸಿಕ್ಕಿದರು; ಮತ್ತೆ ಕೆಲವರಿಗೆ ಪ್ರಹಾರಗಳು ಓದುವು. ಕೆಲವರನ್ನು ಮರಳುಕಾಡಿಗೊಯ್ತು, ಅಲ್ಲಿ ಬಿಸಿಲಿನಿಂದ ಕಾದು ಕೆಂಡವನ್ನು ಗುಳು ವಂತಿದ್ದ ಮರಳಿನ ರಾಶಿಯ ಮೇಲೆ ಮಲಗಿಸಿ, ಹೊಸ ಮತವನ್ನು ಬಿಡದೆ ಹೋದರೆ ನೀರು ನೆರಳಿಲ್ಲದೆ ಅವರು ಸಾಯುವಂತೆ ಮಾಡುವೆವೆಂದು `ಹೆದರಿಸಿದರು; ಬಲಾಲ್ ಎಂಬವನನ್ನು ಕೆಂಡದಂತೆ ಕಾದುಹೋಗಿದ್ದ ಮರಳಿನ ಮೇಲೆ ಮಲಗಿಸಿ, ಅವನು ಮೇಲಕ್ಕೇಳದಂತೆ ಅವನ ಎದೆಯು ಮೇಲೆ ದೊಡ್ಡ ಕಲ್ಲನ್ನು ಹೇರಿ, “ ನೀನು ಸಾಯುವ ವರೆಗೂ ಅಥವಾ, ಇಸ್ಲಾಂ ಮತವನ್ನು ಒಟ್ಟಿನೆಂದು ಹೇಳುವ ವರೆಗೂ ಹೀಗೆಯೇ ಬಿದ್ದಿರ ಬೇಕು' ಎಂದು ಹೆದರಿಸಿದರು. ಆ ಶ್ರದ್ಧಾಳುವು ತನಗೊದಗಿದ ಆ ಚಿತ್ರ ಹಿಂಸೆಯನ್ನು ಸಹಿಸಿಕೊಂಡು, ತನಗೆ ಅಂತರ್ದಾಹವುಂಟಾಗಿ ನಾಲಗೆಯ ದ್ರವವೇ ಒಣಗಿಹೋದುದನ್ನೂ ಲಕ್ಷ್ಯ ಮಾಡದೆ, 'ದೇವರು ಒಬ್ಬನೇ, ದೇವರು ಒಬ್ಬನೇ ಎಂದು ಸಾರಿ ಸಾರಿ ಹೇಳುತ್ತಿದ್ದನು. ಅನೇಕ ದಿನಗಳು ಹೀಗೆ ಕಳೆದು, ಕೊನೆಗೆ ಅವನು ಮರಣೋನ್ಮುಖನಾದರೂ ತಾನು ಇಸ್ಲಾಂ ಮತವನ್ನು ಬಿಡುವುದಾಗಿ ಹೇಳದೆ ಅಹರ್ನಿಶಿಯಲ್ಲಿಯ ಭಗವಂತನನ್ನು ಧ್ಯಾನಿಸುತ್ತಿದ್ದನು. ಕೊನೆಗೆ, ಮಹಮ್ಮದನ ಶಿಷ್ಯ ನಾದ ಅಬ್ದುಲ್ಲಾನು ಅವನನ್ನು ಈ ಕಷ್ಟದಿಂದ ಬಿಡುಗಡೆ ಮಾಡಿದನು. ನಿರಪರಾಧಿಗಳಾದ ತನ್ನ ಶಿಷ್ಯರಿಗುಂಟಾಗುತ್ತಿದ್ದ ಚಿತ್ರ ಹಿಂಸೆಗಳನ್ನು ನೋಡಿ ನೋಡಿ ಮಹಮ್ಮದನು ವ್ಯಥೆಯಿಂದ ಕೊರಗು, ಕಷ್ಟ ಪಡು ತಿರುವವರಿಗೆ ಸಹಾಯ ಮಾಡಿ ಅವರನ್ನು ಕಷ್ಟದಿಂದ ಬಿಡಿಸಲು ಸಾಮರ್ಥ್ಯವಿಲ್ಲದೆ, ಆ ಕರುಣ ಹೃದಯನು ಇಹ ಲೋಕದಲ್ಲಿಯೇ ನರಕ ಯಾತನೆಯನ್ನನುಭವಿಸಿದನು.