ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ಕ್ರಿಸ್ತ ಶಕ ೬೧೬ನೆಯ ಸಂವತ್ಸರದಲ್ಲಿ. ಅಲ್ಲಿಂದ ಮುಂದೆ ಮೂರು ವರುಷ ಗಳ ಕಾಲ ಮಹಮ್ಮದನ ಕಡೆಯವರು ಬಹಳ ಹಿಂಸೆಯನ್ನನುಭವಿಸ ಬೇಕಾಯಿತು. ಶತ್ತು, ಪಕ್ಷದವರು ಅವರೊಡನೆ ವಿವಾಹ ಮುಂತಾದ ವ್ಯವಹಾರಗಳನ್ನು ಬಿಟ್ಟು ಯಾವಾಗಲೂ ಅವರನ್ನು ಹಿಂಸಿಸುತ್ತಲೇ ಇದ್ದುದರಿಂದ ಮಹಮ್ಮದನ ಕಡೆಯವರು ಊರಿನಿಂದಾಚೆಗಿದ್ದ ಒಂದು 1ರಿದುರ್ಗವನ್ನು ಸೇರಿದರು. ಶತ್ರುಗಳು ಅದಕ್ಕೆ ಮುತ್ತಿಗೆ ಹಾಕಿ ದುರ್ಗದೊಳಗಿದ್ದ ಜನರನ್ನು ಅಸಾಧಾರಣವಾದ ಕಷ್ಟಕ್ಕೆ ಗುರಿಮಾಡಿ ಕ್ರಿಸ್ತ ಶಕ ೬೧೯ನೆಯ ಸಂವತ್ಸರದ ವರೆಗೂ ಮುತ್ತಿಗೆಯನ್ನು ತೆಗೆಯು ಲಿಲ್ಲ. ಕೊನೆಗೂ ಮಹಮ್ಮದನಾಗಲಿ ಅವನ ಅನುಯಾಯಿಗಳಾಗಲಿ ತಮ್ಮ ಮತವನ್ನು ಬಿಡಲು ಒಪ್ಪದೆ ಹೋಗಲು, ಶತ್ರುಗಳು ತಮ್ಮ ಘೋರ ಕೃತ್ಯಕ್ಕೆ ತಾವೇ ನಾಚಿಕೊಂಡರು. ಜುಬೈರನೆಂಬೊಬ್ಬ ಪುಣೆ ತ್ಮನೂ, ಹಿಷಾಮನೆಂಬೊಬ್ಬ ಆಪದ್ಬಾಂಧವನ ಮಹಮ್ಮದನ ಸಹಾ ಯಕ್ಕೆ ಬಂದು ಗಿರಿದುರ್ಗದಲ್ಲಿದ್ದವರೆಲ್ಲರೂ ಮಕ್ಕಾ ನಗರಕ್ಕೆ ಮತ್ತೆ ಬರಲು ಅವಕಾಶವನ್ನು ಕಲ್ಪಿಸಿದರು. ಮಾರನೆಯ ವರುಷವು (ಎಂದರೆ, ಕ್ರಿಸ್ತ ಶಕ ೬೨೦ನೆಯ ಸಂವತ್ಯ ರವು) ಮಹಮ್ಮದನಿಗೆ ಬಂಧು ವಿಯೋಗ ದುಃಖವನ್ನೊದಗಿಸಿತು : ಮಹ ಮೃದನನ್ನು ಬಾಲ್ಯದಿಂದಲೂ ಆದರದಿಂದ ಪೋಷಿಸಿ, ಬಂಧು ವಿಯೋಗ ಶತ್ರು ಬಾಧೆಯಿಂದ ಸಂರಕ್ಷಿಸಿ, ಕೇವಲ ಬೆಂಬಲ ವಾಗಿದ್ದ ಅವನ ಚಿಕ್ಕಪ್ಪನು ಮೃತನಾದನು. ಇದಾದ ಸ್ವಲ್ಪ ಕಾಲದಲ್ಲಿಯೇ ಖದೀಜಳೂ ಇಹಲೋಕವನ್ನು ಬಿಟ್ಟಳು. ಪತ್ನಿ ನಿಯೋಗವಂತೂ ಮಹಮ್ಮದನಿಗೆ ಅಪಾರವಾದ ಶೋಕವನ್ನುಂಟು ಮಾಡಿತು. ಇತರರೊಬ್ಬರೂ ಮಹಮ್ಮದ ಸಂದೇಶವನ್ನು ನಂಬದೆ ಇದ್ದಾಗ, ಅವನಿಗೆ ತಕ್ಕಷ್ಟು ಮನಸ್ಸೆ ರ್ದವೂ ಇಲ್ಲದೆ ಇದ್ದಾಗ, ಅವನಿಗೆ ಧೈರ್ಯ ಹೇಳಿ ಅವನ ಮೊಟ್ಟಮೊದಲನೆಯ ಶಿಷ್ಯಳಾದವಳೇ ಐದೀಜೆ. ಮಹಮ್ಮದನು ಧನಿಕನಾದುದು ತನ್ನಿಂದಲೇ ಎಂಬ ಜಿಂಕದಿಂದ ಖದೀಜೆಯು ಒಂದು ದಿನವೂ ಬೀಗಿದವಳಲ್ಲ. ಪತಿಯನ್ನು ಗೌರವಿಸಿ ಪ್ರೀತಿಯಿಂದ ಕಾಣುವುದು ತನ್ನ ಕರ್ತವ್ಯವೆಂದು ಆಕೆ