ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

IV. ಮಕ್ಕಾ ನಗರ ಪರಿತ್ಯಾಗ ಉತ್ತಮವೆ ಅಥವಾ, ಅವನನ್ನು ಯಾವಜೀವವೂ ಸೆರೆಯಲ್ಲಿಡುವುದು ಉತ್ತಮವೆ ಎಂಬ ಪ್ರಶ್ನೆಗಳು ಆ ಸಭೆಯಲ್ಲಿ ಹುಟ್ಟಿದುವ. ಇವೆರಡೂ ಸಭಿಕರಿಗೆ ಸೂಕ್ತ ತೋರದೆ ಮಹಮ್ಮದನನ್ನು ಕೊಲ್ಲುವುದೇ ಉತ್ತಮ ವೆಂದು ಕೊನೆಗೆ ನಿರ್ಧರಿಸಿದರು. ಆ ಬಳಿಕ ಅವನನ್ನು ಹೇಗೆ ಕೊಲ್ಲ ಬೇಕೆಂಬ ಚರ್ಚೆ ಹುಟ್ಟಿ, ತಮ್ಮಲ್ಲಿ ಯಾವನಾದರೂ ಒಬ್ಬನು ಅವನನ್ನು ಕೊಂದರೆ, ಅಪರಾಧಿಯು ಯಾವವೆಂಬುದು ಹೊರಬಿದ್ದು ಮಹಮ್ಮದನ ಕಡೆಯವರಿಂದ ಅವನಿಗೂ ಅವನ ಬಂಧುಗಳಿಗೂ ಅಪಾಯವು ಬಂದೊದಗ ಬಹುದು; ಆದರೆ, ಹಲವು ಮನೆತನಗಳವರು ಒಟ್ಟಿಗೆ ಸೇರಿ ಒಂದೊಂದು ಮನೆತನದವರೂ ಒಬ್ಬೊಬ್ಬ ಪ್ರತಿನಿಧಿಯನ್ನು ಕಳುಹಿಸಿ ಮಹಮ್ಮದನನ್ನು ಕೊಲ್ಲಿಸುವುದಾದರೆ ಇ೦ತಹ ಭಯಕ್ಕೆ ಅವಕಾಶವಿರದು. ಆದಕಾರಣ ಹೀಗೆ ಮಾಡುವುದೇ ಸರಿ ಎಂದು ಸಿದ್ಧಾಂತವಾಯಿತು. ಅವರೆಲ್ಲರೂ ಒಂದು ದಿನ ರಾತ್ರಿ ಮಹಮ್ಮದನ ಮನೆಯ ಮುಂಭಾಗದಲ್ಲಿ ಸಶಸ್ತ್ರ ರಾಗಿ ನಿಂತಿದ್ದು, ಮಹಮ್ಮದನು ಹೊರಗೆ ಬಂದೊಡನೆಯೇ ಅವನನ್ನು ಕೊಲ್ಲಬೇಕೆಂದು ಉದ್ದೇಶಿಸಿದ್ದರು. ಈ ಒಳ ಸಂಚನ್ನು ಅರಿತಿದ್ದ ಮಹಮ್ಮದನು ಹಸಿರು ಬಣ್ಣದ ತನ್ನ ಉಡುಪನ್ನು ಅಲೀಗೆ ತೊಡಿಸಿ ಅವನನ್ನು ತನ್ನ ಮಂಚದ ಮೇಲೆ ಮಲಗಿಸಿ ತಾನು ಮನೆಯ ಹಿಂಭಾಗ ದಿಂದ ಪಲಾಯನ ಮಾಡಿ ಅಬ್ದುಲ್ಲಾನ ಮನೆಯನ್ನು ಸೇರಿದನು. ಕೂಡಲೆ ಅವರಿಬ್ಬರೂ ತಲೆ ತಪ್ಪಿಸಿಕೊಂಡು ಮಕ್ಕಾ ನಗರವನ್ನು ಬಿಟ್ಟು ಹೊರಟು ಹೋದರು. ಬೇಟೆಯು ಹೀಗೆ ತಪ್ಪಿಸಿಕೊಂಡು ಹೋದ ವೃತ್ತಾಂತವನ್ನು ಕೇಳಿ ಶತ್ತು ಪಕ್ಷದವರೆಲ್ಲರೂ ರೋಷದಿಂದ ಉನ್ಮತ್ತರಾಗಿ ಮಹಮ್ಮದನಿಗೆ ತಕ್ಕ ಶಿಕ್ಷೆಯನ್ನು ಮಾಡಬೇಕೆಂದು ನಿಶ್ಚಯಿಸಿ, ಮಹಮ್ಮದನನ್ನು ಹಿಡಿದು ತಂದವರಿಗೆ ಬಹುಮಾನವನ್ನು ಕೊಡುವುದಾಗಿ ಪ್ರಕಟಿಸಿದರು. ಮಹಮ್ಮದನೂ ಅವನೊಡನಿದ್ದ ಅಬ್ದುಲ್ಲಾನೂ ಒಮ್ಮೆ ಶತ್ರುಗಳ ಕೈಗೆ ಸಿಕ್ಕುವಂತಹ ವಿಷಮ ಸ್ಥಿತಿಯ ಒದಗಿತು. ಆಗ ಅಬ್ದುಲ್ಲಾನು ಭಯ ದಿಂದ ನಡುಗುತ್ತ, “ಅಯ್ಯೋ! ನಾವು ಇಬ್ಬರೇ ಇದ್ದೇವಲ್ಲಾ!” ಎಂದು ಆರ್ತ ಸ್ವರದಿಂದ ಹೇಳಲು, ಮಹಮ್ಮದನು ಅಚಲವಾದ ದೈವ ಭಕ್ತಿ,