ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೪೨ ಪೈಗಂಬರ ಮಹಮ್ಮ ದನು ಮಹಮ್ಮದನಿಗೆ ಈ ವಿಧವಾದ ಸನ್ಮಾನವ ದೊರೆತು ಅವನ ಶಿಷ್ಯರು ಸಂಖ್ಯೆಯು ಹೆಚ್ಚದೆ ಹೋಗಿದ್ದರೆ ಅವನ ಮಾಹಾತ್ಮಿಯು ಅಷ್ಟೊಂದು ಶೋಭಿಸುತ್ತಿರಲಿಲ್ಲ. ಮಹಮ್ಮದನು ಯಾತ್ರಿಬ್ ನಗರವನ್ನು ಸೇರಿದುದು ಒಳ್ಳೆಯ ಸಂಧಿ ಸಮಯದಲ್ಲಿ. ಆ ನಗರದಲ್ಲಿ ವಾಸವಾಗಿದ್ದ ಔಸ್ ಮತ್ತು ಖಜಾಜ್ ಎಂಬ ಎರಡು ಬುಡಕಟ್ಟಿನವರಿಗೂ ಯಾತ್ರಿಬ್ ನಗರ ಮಹತ್ತರವಾದ ಪರಸ್ಪರ ದ್ವೇಷವು ನೆಲೆಗೊಂಡು ಅನರ್ಥಕ್ಕೆ ಕಾರಣವಾಗಿದ್ದಿತು. ಮಹಮ್ಮದನು ಅಲ್ಲಿಗೆ ಬರುವ ವೇಳೆಗೆ ಅವರ ಅಂತಃಕಲಹವು ಕೊನೆಗಂಡು ಅವರಿಗೆ ಸಮಾಧಾನವುಂಟಾಗಿದ್ದಿತು, ಆದಕಾರಣ, ಮಹಮ್ಮದನ ಬೋಧೆ ಯಿಂದ ಅವರ ಪರಸ್ಪರ ಸೌಹಾರ್ದ ಭಾವವು ಹೆಚ್ಚಿ ಯಾತ್ರಿ)ಬ್ ನಗರವೇ ತನ್ಮೂಲಕವಾಗಿ ಕಳ ಕಳಿಸುವಂತಾಯಿತು. ಅವೆರಡು ಬುಡಕಟ್ಟಿನವರೂ ಮಹಮ್ಮದನ ಶಿಷ್ಯರಾಗಿ ಗುರು ಭಕ್ತಿಯಿಂದ ಒಟ್ಟುಗೂಡಿ ಇಸ್ಲಾಂ ಮತವನ್ನು ಪ್ರಚುರಗೊಳಿಸಲು ಸೋಂಟ ಕಟ್ಟಿ ನಿಂತರು, ಮಹಮ್ಮದನು ಅವರ ಹೃದಯಗಳನ್ನು ಪ್ರೇಮ ಪಾಶದಿಂದ ಬಂಧಿಸಿ ಕಾರ್ಯ ಸಾಧನೆಗೆ ಅನುವಾದನು. ಅವರು ತಮ್ಮ ಊರಿಗೆ ಮದೀನತ್ - ಉನ್-ನಬೇ?' (ಗುರುವಿನ ನಗರ) ಎಂದು ಹೆಸರಿಟ್ಟರು. ಕಾಲ ಕ್ರಮದಲ್ಲಿ ಈ ಹೆಸರು ಚಿಕ್ಕದಾಗಿ, ಮೆದೀನಾ ಎಂಬ ರೂಪಕ್ಕಿಳಿಯಿತು. ಮೆದೀನಾ ನಗರವು ಮಹಮ್ಮದೀಯರ ಯಾತ್ರಾ ಸ್ಥಳವಾಗಿ ಇಂದಿಗೂ ಪ್ರಸಿದ್ದವಾಗಿದೆ. ಮಹಮ್ಮದನ ಶಿಷ್ಯರಿಗೆ ಆತನಲ್ಲಿ ದಿನ ದಿನವೂ ಪ್ರೀತಿ ಗೌರವಗಳು ಹೆಚ್ಚುತ್ತ ಬಂದುವು. ಅನೇಕರು ಹೊಸದಾಗಿ ಮಹಮ್ಮದನಲ್ಲಿ ಶಿಷ್ಯ ವೃತ್ತಿಯನ್ನು ಕೈಕೊಂಡು ಇಸ್ಲಾಂ ಮತಕ್ಕೆ ಸೇರಿ ಮಸೀದಿ ದರು. ಎಲ್ಲರೂ ಒಟ್ಟಿಗೆ ಸೇರಿ ದೇವತಾ ಪ್ರಾರ್ಥನೆ ಯನ್ನು ಮಾಡುವುದಕ್ಕಾಗಿ ಒಂದು ಮಸೀದಿಯನ್ನು ಕಟ್ಟಬೇಕೆಂಬ ಯೋಚನೆಯು ಕಾಲ ಕ್ರಮವಾಗಿ ಮಹಮ್ಮದನ ಮನಸ್ಸಿ ನಲ್ಲಿ ಹುಟ್ಟಿತು. ಅವನ ಶಿಷ್ಯರು ಅದನ್ನ ನುಮೋದಿಸಿ ಉತ್ಸಾಹಶಾಲಿ ಗಳಾಗಿ ಮುಂದೆ ನಿಂತರು. ಮಸೀದಿಗೆ ಬೇಕಾದ ನಿವೇಶನವನ್ನು ತಾಯಿ.