ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

V, ಉನ್ನತಿಯ ಅಂಕುರ ಶಿಗಿ ದುವು. ಭಗವಂತನೇ ತನಗೆ ದಿಕ್ಕೆಂದು ಮಹಮ್ಮದನು ಎಷ್ಟು ದೃಢವಾದ ನಂಬಿಕೆಯನ್ನಿಟ್ಟುಕೊಂಡಿದ್ದನೆಂಬುದಕ್ಕೆ ಘನವಾದ ಒಂದು ನಿದರ್ಶನವುಂಟು : ಬದರ್ ಕದನವು ನಡೆಯುವ ಸಂದರ್ಭದಲ್ಲಿ ಒಂದು ದಿನ ಮಹಮ್ಮದನು ತನ್ನ ಗುಡಾರದಲ್ಲಿ ಮಲಗಿ ನಿದ್ದೆ ಹೋಗುತ್ತಿದ್ದವನು ತಟ್ಟನೆ ಎಚ್ಚತ್ತು ನೋಡುವಲ್ಲಿ, ಶತ್ರುಪಕ್ಷದ ವೀರ ನೊ ಬ್ಬ ನು ಖಡ್ಗ ಹಸ್ತನಾಗಿ ಅವನ ಬಳಿಯಲ್ಲಿ ನಿಂತಿದ್ದುದನ್ನು ಕಂಡನು. ನಿರಾ ಯುಧನಾಗಿ ಮಲಗಿದ್ದ ಮಹಮ್ಮದನನ್ನು ಕಂಡು ಆ ವೀರನು, * ಮಹಮ್ಮದ್ ! ಈಗ ಹೇಳು-ಒರೆಯಿಂದ ಹಿರಿದ ಕತ್ತಿಯು ನನ್ನ ಕೈಯಲ್ಲಿದೆ. ನಿನ್ನನ್ನು ಈ ಅವಸ್ಥೆಯಲ್ಲಿ ಯಾವನು ರಕ್ಷಿಸಿ ನನ್ನ ಕೈಯಿಂದ ಬಿಡಿಸಿಕೊಳ್ಳುವವನು ? ಬೇಗ ಹೇಳು " ಎಂದನು. ಅದಕ್ಕೆ ಮಹಮ್ಮದನು ತಡೆಯಿಲ್ಲದೆ, “ ಭಗವಂತನು ” ಎಂದು ದಿಟ್ಟತನದ ಉತ್ತರವನ್ನು ಹೇಳಲು, ಅವನನ್ನು ಕೊಲ್ಲಲುದ್ಯುಕ್ತನಾಗಿ ಕತ್ತಿಯನ್ನು ಹಿರಿದು ನಿಂತಿದ್ದ ಆ ನರ ಘಾತುಕನ ಹೃದಯವೂ ಕೂಡ ಆ ಉತ್ತರ ದಿಂದ ಅನಿರ್ವಚನೀಯವಾದೊಂದು ಪರಿಣಾಮವನ್ನು ಹೊಂದಿತು. ಅವನು ಅಪ್ರತಿಭನಾಗಿ ಶಿಲಾ ಪ್ರತಿಮೆಯಂತೆ ನಿಂತನು; ಕತ್ತಿಯು ಅವನ ಕೈಯಿಂದ ಜಾರಿ ಕೆಳಗೆ ಬಿದ್ದು ಹೋಯಿತು. ಮಹಮ್ಮದನು ಮಿಂಚಿನ ವೇಗದಲ್ಲಿ ಮೇಲಕ್ಕೆದ್ದು ಆ ಕತ್ತಿಯನ್ನು ತೆಗೆದುಕೊಂಡು ಝಳಪಿಸುತ್ತ ಎದುರಾಳಿಯನ್ನು ನೋಡಿ, “ ಈಗ ನಿನ್ನನ್ನು ರಕ್ಷಿಸು ವವರು ಯಾರು ? ಎಂದು ಕೇಳಿದನು. ಯೋಧನು ಭಯದಿಂದ ನಡುಗುತ್ತ, “ ನನ್ನನ್ನು ಯಾರು ರಕ್ಷಿಸುವರು ? ಅಯ್ಯೋ ! ನನ್ನನ್ನು ಬಿಡಿಸಿಕೊಳ್ಳುವವರು ಯಾರೂ ಇಲ್ಲವಲ್ಲಾ! ಎಂದು ಗೋಳಾಡಿದನು. ಮೃತ್ಯುವು ಆಸನ್ನ ವಾಗಿರುವಾಗಲೂ ಭಗವಂತನೇ ಶರಣೆಂದು ತಿಕರಣ ಶುದ್ದಿಯಾಗಿ ನಂಬಿದ್ದ ಮಹಾ ಪುರುಷನಾದ ಮಹಮ್ಮದನಿಗೂ, ತನ್ನ ಎದುರಿನಲ್ಲಿಯೇ ನಡೆದುದರ ಒಳಮರ್ಮವನ್ನರಿಯದೆ, ತಾನು ಕೊಲ್ಲ ಬೇಕೆಂದು ಬಂದವನ ಎದುರಿಗೆ ತಲೆ ಬಗ್ಗಿಸಿ, ತನಗೆ ರಕ್ಷಕರಾರೂ ಇಲ್ಲ ವೆಂದು ಮೊರೆಯಿಟ್ಟ ಕಾಪುರುಷನಿಗೂ ಎಲ್ಲಿಯ ಸಾಮ್ಯ ? ಮಹ ಮ್ಮದನು ಮನಸ್ಸು ಮಾಡಿದ್ದರೆ ಕೂಡಲೆ ಶತ್ರುವಿನ ರುಂಡವನ್ನು