ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಆರನೆಯ ಅಧ್ಯಾಯ ಮಹಮ್ಮದನ ಅಧಿನಾಯಕತ್ವದ ಒಳಗುಟ್ಟು ಬದರ್ ಕದನದಲ್ಲಿ ಮಹಮ್ಮದನು ಜಯಶಾಲಿಯಾಗದೆ ಸೋತು ಹೋಗಿದ್ದ ಪಕ್ಷದಲ್ಲಿ ಇಸ್ಲಾಂ ಮತಕ್ಕೆ ಸರ್ವನಾಶವೇ ಒದಗುತ್ತಿದ್ದಿತು. ಈ ಅಂಶವು ಮಹಮ್ಮದನಿಗೆ ಸ್ಪಷ್ಟವಾಗಿ ಗೊತ್ತಾ ಬದರ್ ಕದನದ ಗಿದ್ದುದರಿಂದಲೇ ಯುದ್ದಕ್ಕೆ ಸ್ವಲ್ಪ ಮುಂಚಿತವಾಗಿ ಫಲಿತಾಂಶ ಅವನು ಏಕಾಂತವಾಗಿ ಒಂದು ಗುಡಿಸಿಲಿನಲ್ಲಿ ಕುಳಿತು ಕಣ್ಣೀರನ್ನು ಸುರಿಸುತ್ರ ಶೋಕ ಸಂತಪ್ತನಾಗಿ, * ಸರ್ವಶಕ್ತನಾದ ಜಗದೀಶ್ವರ ! ನನ್ನಲ್ಲಿ ದಯೆತೋರಿಸು. ಆಸ್ತಿಕ ರಾದವರು ಕೆಲವು ಮಂದಿ ಮಾತ್ರವೇ ಇಂದು ಯುದ್ದದಲ್ಲಿ ಉದ್ಯುಕ್ತ ರಾಗಿದ್ದೇವೆ. ಇದರಲ್ಲಿ ನಾವು ಸೋತುಹೋಗುವುದಾದರೆ ಇಸ್ಕಾಂ ಮತವೇ ಮುಳುಗಿಹೋಗುತ್ತದೆ. ಆ ಬಳಿಕ ನಿಶ್ಚಲ ಭಕ್ತಿಯಿಂದ ನಿನ್ನನ್ನು ಆರಾಧಿಸುವುದಕ್ಕೂ ನಿನ್ನ ಸಂದೇಶವನ್ನು ಹರಡುವುದಕ್ಕೂ ನಮ್ಮಲ್ಲಿ ಒಬ್ಬರೂ ಉಳಿದಿರುವುದಿಲ್ಲ. ಆದುದರಿಂದ ಇಂದಿನ ಕಾಳಗದಲ್ಲಿ ನಮಗೆ ಜಯವಾಗುವಂತೆ ಅನುಗ್ರಹಿಸು' ಎಂದು ಬೇಡಿಕೊ೦ಡ ನು . ಭಗವಂತನು ಅವನ ಪ್ರಾರ್ಥನೆಯನ್ನು ಲಾಲಿಸಿ ಅವನ ಕೋರಿಕೆಯನ್ನು ಸಲ್ಲಿಸಿದನು. ಅಂತು, ಬದರ್ ಕದನದ ಫಲಿತಾಂಶವಾಗಿ ಮಹಮ್ಮದನ ಪ್ರಾಬಲ್ಯವು ಹೆಚ್ಚಿತು; ಅದರೊಡನೆ ಶತ್ರು ಬಾಧೆಯ ಮೊದಲಿಗಿಮ್ಮಡಿ ಯಾಯಿತು. ಯುದ್ಧದಲ್ಲಿ ಜಯಶಾಲಿಯಾದುದರಿಂದ, ಮೆದೀನಾ ನಗರಕ್ಕೂ ಅದರ ಸುತ್ತಮುತ್ತಲಿನ ಪ್ರದೇಶಕ್ಕೂ ಮಹಮ್ಮದನು ನಾಯಕನಾದನು; ಕದನದಲ್ಲಿ ಸೆರೆಸಿಕ್ಕಿದವರಿಗೆ ಕರುಣೆಯನ್ನು ತೋರಿಸಿ, ಶತು) ಪಕ್ಷದವರಾದ ಅನೇಕ ಮಂದಿಯನ್ನು ತನ್ನ ಮಿತ್ರರನ್ನಾಗಿ ಮಾರ್ಪಡಿಸಿದನು ; ಸೆರೆಯಾಳುಗಳಲ್ಲಿ ಕೆಲವರ ಪೋಷಣೆಯನ್ನು ತಾನೇ ಸ್ವತಃ ಕೈಕೊಂಡು ತನ್ನ ಮನೆಯಿಂದ ಅತ್ಯುತ್ತಮವಾದ ಆಹಾರ ವಸ್ತು ಗಳನ್ನು ತರಿಸಿ ಅವರಿಗೆ ಕೊಟ್ಟು, ತಾನು ಖರ್ಜೂರ ಮೊದಲಾದ ಸಾಮಾನ್ಯ ವಸ್ತುಗಳನ್ನು ತಿಂದು ತೃಪ್ತನಾಗುತ್ತಿದ್ದನು, ಯುದ್ದದಲ್ಲಿ