________________
ಪೈಗಂಬರ ಮಹಮ್ಮದನು ಮುಖದಿಂದ ಶತ್ರುಗಳಾಗುವ ಉದ್ದೇಶದಿಂದ ಅವನಲ್ಲಿ ಶಿಷ್ಯ ವೃತ್ತಿಯ ನ್ನವಲಂಬಿಸಿದ ನಟನೆಯನ್ನು ಹೂಡಿದರು. ಯಾವ ಕ್ಷಣದಲ್ಲಿ ನೋಡಿ. ದರೂ ಮಹಮ್ಮದನ ರಾಷ್ಟ್ರದಲ್ಲಿ ಎಲ್ಲಿಯಾದರೂ ಒಂದು ಕಡೆ ಗಲಭೆ ಯುಂಟಾಗಿ ಶತ್ರುಗಳ ಬಾಧೆಯು ತಲೆದೋರುವ ಭಯವು ಇದ್ದೇ ಇದ್ದಿತು. ಈ ವಿಧದ ದುರವಸ್ಥೆಯಿಂದ ಮಹಮ್ಮದನ ಅನುಯಾಯಿ ಗಳು, ಕಾಡುಕಿಚ್ಚನ ಮಧ್ಯದಲ್ಲಿ ಸಿಕ್ಕಿದ ಜಿಂಕೆಗಳಂತೆ, ಕಾತರಪಡಬೇಕಾ ಯಿತು. ಯಾವ ಸಮಯದಲ್ಲಿ ಶತ್ರುಗಳು ಬಂದು ಮೇಲೆ ಬೀಳುವರೋ ಎಂಬ ಭೀತಿಯಿಂದ ಅವರು ಹಗಲಿರುಳೆನ್ನದೆ ಸರ್ವದಾ ಆಯುಧ ಪಾಣಿ ಗಳಾಗಿಯೇ ಇರಬೇಕಾಗಿದ್ದಿತು. ಈ ದುರವಸ್ಥೆಯನ್ನು ಸಹಿಸುವುದು ಸಾಧ್ಯವಿಲ್ಲವೆಂದು ಅವರೆಲ್ಲರೂ ಮೊರೆಯಿಡಲು, ಮಹಮ್ಮದನು ತಾಳ್ಮೆ ಯಿಂದ ಅವರನ್ನು ಸಮಾಧಾನಗೊಳಿಸಿದನು. ಆ ಬಳಿಕ ಕೆಲವು ದಿನಗ. ಇಲ್ಲಿಯೇ ನಡೆದ ಒಂದು ಘಟನೆಯಿಂದ ಅವರೆಲ್ಲರೂ ಉತ್ಸಾಹಗೊಂಡರು: ಒಂದು ದಿನ ಬೆಳಗಿನ ಜಾವದಲ್ಲಿ ಶತ್ರುಗಳು ಮೆದೀನಾ ನಗರವನ್ನು ಮುತ್ತುವರೆಂಬ ವದಂತಿಯು ಹುಟ್ಟಿ ಮಹಮ್ಮದನ ಕಡೆಯವರೆಲ್ಲರೂ ಕಳವಳಗೊಂಡು ಮುಂದಣ ಕರ್ತವ್ಯವನ್ನು ನಿರ್ಧರಿಸಲು ತಮ್ಮ ಗುರು ವಿನ ಬಳಿಗೆ ಹೋಗುವುದರಲ್ಲಿದ್ದರು. ಆ ವೇಳೆಗೆ ಸರಿಯಾಗಿ, ಬಹಳವಾಗಿ ಬಳಲಿಹೋಗಿದ್ದ ಕುದುರೆ ಸವಾರನೊಬ್ಬನು ಕುದುರೆಯನ್ನೊಡಿ ಸುತ್ತ ಅಲ್ಲಿಗೆ ಬಂದಿಳಿದನು ; ಮಹಮ್ಮದನೇ ಆ ಸವಾರನು, ತು)ಗಳು ನಗರವನ್ನು ಮುತ್ತುವರೆಂಬ ವದಂತಿಯು ತನ್ನ ಕಿವಿಗೆ ಬಿದ್ದೊಡನೆಯೇ ಮಹಮ್ಮದನು ಸಿಜ ಸ್ಥಿತಿಯನ್ನು ತಿಳಿದುಕೊಂಡು ಬರುವುದಕ್ಕಾಗಿ ಕುದುರೆಗೆ ತಡಿಯನ್ನು ಕೂಡ ಹಾಕದೆ ಅದನ್ನು ಹತ್ತಿ ಕೊ೦ಡು ಹೊರಟನು. ಅಪಾಯವು ಸಂಭವಿಸುವುದೆಂಬ ಹೆದರಿಕೆಯೇ ಇಲ್ಲದೆ ಅಂತಹ ಸಾಹಸ ಕಾರ್ಯವನ್ನು ಮಾಡಿದ ಮಹಮ್ಮದನನ್ನು ಕಂಡು ಅವರೆಲ್ಲರೂ ವಿಸ್ಮಿತರಾದರು. ಸದ್ಯದಲ್ಲಿ ಶತ್ರುಗಳ ಬಾಧೆಯು ಒದಗು ವಂತಿಲ್ಲವೆಂಬುದನ್ನು ಕೇಳಿ ಎಲ್ಲರೂ ಹರ್ಷಿತರಾದರು. ಅಲ್ಲಿಂದ ಮುಂದೆ ಮಹಮ್ಮದೀಯರಿಗೆ ದಿನ ದಿನವೂ ಒಂದಲ್ಲದಿದ್ದರೆ ಮತ್ತೊಂದು ವಿಧದ ತೊಂದರೆಗಳು ಇದ್ದೇ ಇದ್ದುವು. ಯುದ್ಯೋದ್ಯಮಕ್ಕೆ ಕೈಚಾಚಿ