ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

ಪೈಗಂಬರ ಮಹಮ್ಮದನು ಸಾಧ್ಯವಿಲ್ಲವೆಂದೂ ಸಿರಿಯಾ ರಾಜ್ಯದೊಡನೆ ವ್ಯಾಪಾರ ಮಾಡಬೇಕಾದರೆ ತಾವು ಮಹಮ್ಮದನ ರಾಷ್ಟ್ರ ದ ಮೇಲೆ ಪ್ರಯಾಣ ಮಾಡಬೇಕಾಗಿರುವ ಕಾರಣ, ಮಹಮ್ಮದನೊಡನೆ ಒಪ್ಪಂದ ಮಾಡಿಕೊಂಡರೆ, ಅದಕ್ಕೂ ಅನು ಕೂಲವಾಗುವುದಲ್ಲದೆ, ನಿಂತು ಹೋಗಿದ್ದ ವ್ಯಾಪಾರ ಮತ್ತೆ ತಮ್ಮ ಹಸ್ತಗತವಾಗುವುದೆಂದೂ ಅವರಿಗೆ ತೋರಿತು. ಒಪ್ಪಂದದ ಕರಾರು ಗಳನ್ನು ಚರ್ಚಿಸಿ ಗೊತ್ತುಮಾಡಿಕೊಂಡು ಬರುವಂತೆ ಅವರು ಉರ್ವ ನೆಂಬವನನ್ನು ಕಳುಹಿಸಿದರು. ಅವನು ಮಹಮ್ಮದನೊಡನೆ ಚರ್ಚೆಗೆ ಪ್ರಾರಂಭಿಸಿ, ಅಯಾ ! ನೀನು ನಿನ್ನ ಅನುಯಾಯಿಗಳನ್ನು ನಂಬದೆ ಇರುವುದೇ ವಿವೇಕ ; ನಿನಗೇನಾದರೂ ಕಷ್ಟವೂ ಅಪಾಯವೊ ಸಂಭವಿಸಿ ದಲ್ಲಿ ಅವರೆಲ್ಲರೂ ಎಲ್ಲಿದ್ದವರು ಅಲ್ಲಿಯೇ ಮಾಯವಾಗಿ ಹೋಗು ವರು ಎಂದನು. ಇದನ್ನು ಮಹಮ್ಮದನ ಬಳಿಯಲ್ಲಿ ಅಬೂ ಬಕರನು ಕೇಳಿ, ರೋಷದಿಂದ ಉರ್ವನನ್ನು ಚೆನ್ನಾ ಭಂಗಿಸಿ ಮಾತ ನಾಡಲು, ಉರ್ವನು ಮಕ್ಕಾ ನಗರಕ್ಕೆ ಹೊರಟುಹೋದನು. ಆ ಬಳಿಕ ಮಹಮ್ಮದನು ಒಬ್ಬರು ತನ್ನ ರಾಯಭಾರಿಗಳನ್ನು ಕಳುಹಿಸಲು, ಶತ್ತುಗಳು ಅವರೊಡನೆ ಧೂರ್ತತೆಯಿಂದ ವ್ಯವಹರಿಸಿ ಅವರನ್ನು ಸೆರೆ ಯಲ್ಲಿಟ್ಟರು. ಕೂಡಲೆ, ಮಹಮ್ಮದೀಯರನ್ನು ನಿಪಾತಗೊಳಿಸಲು ಒಂದು ದಂಡು ಬಂದಿತು. ಮಹಮ್ಮದನ ಕಡೆಯವರು ಆ ಸೈನಿಕ ರೆಲ್ಲರನ್ನೂ ಸೆರೆಹಿಡಿದರಾದರೂ, ಯುದ್ಧ ಮಾಡುವುದಕ್ಕಾಗಿ ತಾವ್ರ ಅಲ್ಲಿಗೆ ಬಂದಿರಲಿಲ್ಲವಾದ ಕಾರಣ, ಮಹಮ್ಮದನ ಅಪ್ಪಣೆಯ ಮೇರೆಗೆ ಅವರನ್ನು ಸೆರೆಯಿಂದ ಬಿಡುಗಡೆ ಮಾಡಿ ಮಕ್ಕಾ ನಗರಕ್ಕೆ ಕಳುಹಿಸಿದರು. ಇಷ್ಟಾ ದರೂ ಕ್ರೈಮ್' ಮನೆತನದವರು ಯುದ್ಧ ಸನ್ನದ್ದರಾಗುತ್ತಲೇ ಇದ್ದುದ ರಿಂದ, ತಾವು ನಿರಾಯುಧರಾಗಿ ಬಂದುದು ತಪ್ಪು ಕೆಲಸವಾಯಿತೆಂದು ಮಹಮ್ಮದನಿಗೆ ಆಗ ಗೋಚರವಾಯಿತು. ಪರಿಣಾಮದಲ್ಲಿ ಕದನವೇ ಕೈಗಟ್ಟುವಂತೆ ತೋರಿಬಂದುದರಿಂದ, ಮಹಮ್ಮದನು ಮುಂದಣ ಕರ್ತವ್ಯವನ್ನು ನಿರ್ಧರಿಸಿ, ಒಬ್ಬ ಮಹಮ್ಮದೀಯನು ಉಳಿದಿರುವ ವರೆಗೂ ತಾವು ಯುದ್ಧ ಮಾಡತಕ್ಕುದೆಂಬುದಾಗಿ ಎಲ್ಲರೂ ಒಂದು ಮರದ ಕೆಳಗೆ ಪ್ರಮಾಣ ವಚನಗಳನ್ನಾಡಿ ಪ್ರತಿಜ್ಞೆ ಮಾಡಿದರು. ನಿರಾಯುಧರಾಗಿ