ಈ ಪುಟವನ್ನು ಪರಿಶೀಲಿಸಲಾಗಿಲ್ಲ.

________________

೯೦ ಪೈಗಂಬರ ಮಹಮ್ಮದನು ಉದ್ದೇಶವನ್ನು ಅರಿಕೆಮಾಡಲು ಮಹಮ್ಮದನು, “ ನಾನು ಬರುವ ಮಾತು ಹಾಗಿರಲಿ ; ನಿಮ್ಮ ಚಕ್ರವರ್ತಿಯಾದ ಖುಸ್ತುವೇ ಬದುಕಿಲ್ಲ ವಲ್ಲಾ! ನಾನು ಯಾರ ಬಳಿಗೆ ಬರಬೇಕು ? ಎಂದನಂತೆ. ಅವರು ಬೆರಗಾಗಿ ಏನೂ ತೋರದೆ ಹಿಂದಕ್ಕೆ ಹೊರಟುಹೋದರಂತೆ. ಮಹ ಮೃದನು ಆ ನುಡಿಗಳನ್ನಾಡಿದ ರಾತ್ರಿಯೇ ಖುಸ್ರ ಚಕ್ರವರ್ತಿಯು ಆತನ ಮಗನ ಕೈಯಿಂದ ಮರಣಹೊಂದಿದನಂತೆ. ಈ ಅದ್ಭುತವಾದ ವರ್ತನೆಯನ್ನು ಕೇಳಿದೊಡನೆಯೇ ಬಜನನು ಇಸ್ಲಾಂ ಮತವನ್ನು ಸ್ವೀಕರಿಸಿ, ಚಕ್ರಾಧಿಪತ್ಯದ ದಾಸ್ಯವನ್ನು ಕೊಡಹಿಟ್ಟು, ಯಮನ್ ಪ್ರಾಂತಕ್ಕೆ ತಾನೇ ದೊರೆಯಾದನಂತೆ. ಅಬಿಸೀನಿಯಾ ದೇಶದ ಅರಸನಾದ ದೇಗುಸರು ಮಹಮ್ಮದನ ನಿರೂಪವನ್ನು ಆದರದಿಂದ ಸ್ವೀಕರಿಸಿ, ಇಸ್ಲಾಂ ಮತದ ತತ್ವಗಳು ಅತ್ಯುತ್ತಮವಾದವುಗಳೆಂದು ಆತನ ಮನಸ್ಸಿಗೆ ತೋರಲು, ಒಡನೆಯೇ ಇಸ್ಲಾಂ ಮತವನ್ನವಲಂಬಿಸಿ ಮಹಮ್ಮದನ ಶಿಷ್ಯನಾದನು. ಅರಬ್ಬಿ ದೇಶದ ಒಬ್ಬ ಪಾಳೆಯಗಾರನು ಮಾತ್ರ) ಮಹಮ್ಮದನ ನಿರೂಪದ ವಿಷಯದಲ್ಲಿ ಅಕ್ಷಮ್ಯವಾದ ಅತ್ಯಾಚಾರವನ್ನು ನಡೆಯಿಸಿದನು : ರಾಯಭಾರಿತನದ ನಿಯಮಗಳನ್ನೇ ಉಲ್ಲಂಘಿಸಿ, ತನ್ನಲ್ಲಿಗೆ ನಿರೂಪ ವನ್ನು ತಂದ ಮಹಮ್ಮದನ ದೂತನನ್ನು ಅವನು ಕೊಂದುಬಿಟ್ಟನು. ಅವನಿಗೆ ಬುದ್ದಿಯನ್ನು ಕಲಿಸಲೋಸುಗ ಮಾರನೆಯ ವರುಷ (ಎಂದರೆ, ೬೨೯ನೆಯ ಇಸವಿಯಲ್ಲಿ) ಮಹಮ್ಮದನು ಮೂರು ಸಾವಿರ ಮಂದಿ ಸೈನಿಕರನ್ನು ಕಳುಹಿಸಿ ಅವನೊಡನೆ ಯುದ್ದವನ್ನು ಹೂಡಿದನು. ಆ ಯುದ್ಧದಲ್ಲಿ ಮಹಮ್ಮದೀಯರಿಗೆ ಜಯವಾಯಿತು.