ಈ ಪುಟವನ್ನು ಪ್ರಕಟಿಸಲಾಗಿದೆ

ಪೊನ್ನಮ್ಮ

ದೂರ ಹೋಗುವಾಗ ದಾರಿಯಲ್ಲಿ ಒಬ್ಬ ಹಣ್ಣು-ಹಣ್ಣು ಮುದುಕನು ಕೂತಿದ್ದನು. ಅವನನ್ನು ನೋಡಿ ಪೊನ್ನಮ್ಮನು "ಅಜ್ಜಯ್ಯಾ ಇಲ್ಲಿ ಏಕೆ ಕೂತಿದ್ದಿರಿ ?” ಎಂದು ಕೇಳಿದಳು.ಅದಕ್ಕೆ ಆ ಮುದುಕ "ಮಗೂ ಇಲ್ಲಿ ಹತ್ತಿರವೇ ನನ್ನ ಮನೆ ಇದೆ. ಆದರೆ ನನಗೆ ನಡೆಯಲು ಶಕ್ತಿಯೇ ಇಲ್ಲ" ಎಂದನು. ಅದನ್ನು ಕೇಳಿ ಕನಿಕರದಿಂದ ಪೊನ್ನಮ್ಮ, ಆತನನ್ನು ಮೆಲ್ಲನೆ ಕೈ ಹಿಡಿದು ಎಬ್ಬಿಸಿ ಅವನ ಮನೆಗೆ ಕರೆದುಕೊಂಡು ಹೋದಳು.

ಆ ಮುದುಕನಿಗೆ ಬಹಳ ಸಂತೋಷವಾಯಿತು. ಅವನು ಪೊನ್ನಮ್ಮನಿಂದ ಅವಳ ಕತೆಯನ್ನೆಲ್ಲಾ ಕೇಳಿ ತಿಳಿದುಕೊಂಡನು. ಅವನಿಗೆ ವ್ಯಸನವಾಯಿತು. ಅವಳಿಗೆ ಒಂದು ಸೇರು ನುಚ್ಚನ್ನೂ ಒಂದು ಪೆಟ್ಟಿಗೆ ತುಂಬ ಚಿನ್ನವನ್ನೂ ಕೊಟ್ಟನು. ಪೊನ್ನಮ್ಮ ಆತನಿಗೆ ನಮಸ್ಕರಿಸಿ ಪೆಟ್ಟಗೆಯನ್ನು ಹೊತ್ತು ಕೊಂಡು ಮನೆಗೆ ಹೊರಟಳು. ದಾರಿಯಲ್ಲಿ ಪೊನ್ನಮ್ಮ ನೀರು ಕುಡಿಸಿದ್ದ ದನವು ಅವಳ ಜೊತೆಯಲ್ಲಿಯೇ ಹೊರಟಿತು. ಪೊನ್ನಮ್ಮ ಪೆಟ್ಟಿಗೆಯನ್ನು ತೆಗೆದುಕೊಂಡು ದನದ ಜೊತೆಯಲ್ಲಿ ಸಾಯಂಕಾಲದ ಹೊತ್ತಿಗೆ ಮನೆಗೆ ತಲುಪಿದಳು. ಚಿಕ್ಕ ತಾಯಿಯು ಹೊಟ್ಟೆ ಕಿಚ್ಚಿನಿಂದ ಪೊನ್ನಮ್ಮನನ್ನು ಅಟ್ಟಿದ್ದರೂ ಪೊನ್ನಮ್ಮ ಒಳ್ಳೆಯವಳಾದುದರಿಂದ ಅವಳಿಗೆ ದೇವರು ಒಳ್ಳೆಯದನ್ನೇ