ಪುಟ:ಪ್ರಗತಿ ಅಥವಾ ದಾಸ್ಯ ವಿಮೋಚನ.djvu/೪೩

ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೨ ಜೈ ಆಗುವಂತೆ ಮನೋದಾರ್ಥ್ಯವಿಶೇಷದಿಂದ ಪ್ರಖ್ಯಾತನಾಗಿ ಪ್ರಗತಿಯನ್ನು ಹೊಂದುವನು. ಇಂಧ ಇಂಧ ಕಾರ್ಯವನ್ನು ಮಾಡಿದ ಮನುಷ್ಯನೇ ಪ್ರಗತಿ ಹೊಂದಬೇಕೆಂತಿಲ್ಲ ; ಇ೦ಧ ಇಂಧ ಜಾತಿಯ ಇವೆ ಇಂಧ ಇಂಧ ವರ್ಣದ ಜನರೇ ಪ್ರಗತಿಹೊಂದಬೇಕೆಂತಿಲ್ಲ; ಪ್ರಗತಿಹೊಂದುವ ವಿಷ ಯದಲ್ಲಿ ಬ್ರಾಹ್ಮಣನೂ ಅಷ್ಟೇ ಅಧಿಕಾರಿಯು ; ಚಾಂದಾಲನೂ ಅಷ್ಟೇ ಅಧಿಕಾರಿಯು ; ಬಡ ಕೂಲಿಕಾರನೂ ಆ ಅಧಿಕಾರಿಯು; ಪ್ರಗತಿಹೊಂದಲಿ ಸುವ ಮನುಷ್ಯನನ್ನು ಕಂಡು ಯಾರೂ ಅಸೂ ಮೆಪಡುವಕಾರಣವಿಲ್ಲ. ಒಂದುವೇಳೆ 'ನೆರೆಹೊರೆಯವರು ಪ್ರಗತಿಪರ ಮನುಷ್ಯನಿಗೆ ಕೇಡುಬಗೆಯಹತ್ತಿದರೂ ಸೃಷ್ಟಿಯು, ಈಶ್ವರನು ಅವನಿಗೆ ಸಂಪೂರ್ಣ ಸಹಾಯಕಾರಿಗಳಾಗಿರುವದರಿಂದ ಅವನ ಉಚ್ಚೆ ಯವು ದಿನೇದಿನೇ ಅಭಿವೃದ್ಧಿಯಾಗಹತ್ತುತ್ತದೆ. ಆದರೆ ಬರೆಯಲಿಕ್ಕೆ ಅತ್ಯಂತ ಖೇದವೆನಿಸುವ ಸಂಗತಿ ಯವದೆಂ ದರೆ, ನಮ್ಮಲ್ಲಿಯ ಬಹುಜನ ಮುದುವರು ಪ್ರಗತಿಮಾರ್ಗದಲ್ಲಿ ಬರುವ ಸಂಕಟಗಳಿಗೆ ಹೆದರಿ ನಮ್ಮ ಮಕ್ಕಳಿಗೆ ಯಾವ ಹೊಸ ಉದ್ಯೋಗ ವನ್ನೂ ಮಾಡುವ ಅವಶ್ಯವಿಲ್ಲ. ದೇವರ ದಯೆಯಿಂದಲೂ, ಪೂರ್ವ ಜರ ಪುಣ್ಯದಿಂದಲೂ ಅವರ ಹೊಟ್ಟೆ ಬಟ್ಟೆಗಳಿಗೆ ಕೊರತೆಯಿಲ್ಲ: ಅವರು ಕೂತು ತಿಂದರೂ ಚೆಟ್ಟ-ಬಕ್ಕರಿಗೆ ಕೊರತೆಯಾಗಲಿಕ್ಕಿಲ್ಲ. ಆದ್ದರಿಂದ ನಮ್ಮ ಮಕ್ಕಳು ಹೆಚ್ಚಿನ ನಾಹಸಕ್ಕೆ ಹೋಗದೆ ಇದ್ದ ದನ್ನು ಸಾಗಿಸಿಕೊಂಡು ಹೋದರೆ ಸಾಕು ಎಂದು ನಿರುತ್ಸಾಹದ ಹೇಡಿತನದ, ಕರ್ತವ್ಯ ಪರಖತೆಯ, ಹೇಯವೃತ್ತಿಯ ಉದ್ಧಾರಗೆ ಳನ್ನು ಬಾಲ್ಯದಿಂದಲೇ ತಮ್ಮ ಚಿಕ್ಕಮಕ್ಕಳ ಮನಸ್ಸಿನಲ್ಲಿ ಬಿಂಬಿಸು ವಂತೆ ಹೊರಗೆಡುವುತ್ತಿರುತ್ತಾರೆ. ಅವರ ಈ ಉದ್ಧಾರಗಳು ಸಾಮಾ ನ್ಯದೃಷ್ಟಿಯಿಂದ ಯೋಗ್ಯವಾಗಿ ತೋರಬಹುದಾಗಿದ್ದರೂ ಪ್ರಗತಿ ಗಾಮಿಯ ದೃಷ್ಟಿಯಿಂದ ಅವು ಬಹಳ ನಿಂದ್ಯವಾಗಿ ತೋರುವವು. ಪ್ರತಿಯೊಬ್ಬನ ಜನ್ಮವೂ, ರೂಪವೂ, ಬುದ್ಧಿಯ, ಧೈಯವೂ ಹಿಂದೆ