14 > ತಿ ಕ. ಸುವ ಸಂದರ್ಭದಲ್ಲೇ ಆವಿಷಯಸ್ ಪರತವು ತನ್ನ ಜ್ವಾಲಾವದನ ದಲ್ಲಿ ಆ ಸಾಮತಿಯನ್ನು ಘರ್ಜನಂಗೈಯುತಿರುವದು. ಆದರೆ ವಿಷಯವಿಚಾರಗಳು ಸಮೃದ್ಧಿಯಾಗಿಯೂ ಹಲವು ಬಗೆ ಯಾಗಿಯೂ, ಕಾಲಾನುಗುಣವಾಗಿಯೂ, ಇರುವ ಗ್ರಂಥಗಳನ್ನು ಭಾ ಷಾಂತರಿಸುವಾಗ ಪ್ರತಿಬಂಧಕಗಳು ವಿಶೇಷವಾಗಿರುವದಿಲ್ಲ. ಅವು ಫಲ ವತ್ತಾಗಿರದೆ ಬರೀ ಕವಿತಾಭಾಂಯಿಂದಲೂ, ಶಬ್ಬಚಮತ್ಕಾರದಿಂದಲೂ ಕೂಡಿರುವ ಗ್ರಂಥಗಳನ್ನು ಕನ್ನಡಿಸುವಾಗ ವಿಷಯದಲ್ಲಿ ವಿಶೇಷವಿಲ್ಲದೆ ಪದೇಪದೆ ಎಳದಾಡಿ ಬೇಜಾರಾಗಿರುವ ಸಂಗತಿಗಳನ್ನು ಗೊತ್ತಾಗುವಂತೆ ಹೇಳಿದರೆ ; ಅಯ್ಯೋ ! ಇದೇನು, ಹೇಳಿಕೇಳಿದ ಕಿಸುಬಾಯಿದಾಸನೆಂದು ಬಿಡುವರು. ಅದನ್ನು ತಪ್ಪಿಸುವದಕ್ಕೆನೆ, ಇರುವ ಕನ್ನಡ, ಇದ್ದ ಕನ್ನಡ, ಇಲ್ಲದೇ ಇದ್ದ ಕನ್ನಡ, ಇರಬಾರದ ಕನ್ನಡವೂ ಸಾಲದೆ ಕನ್ನಡದ ಜೊತೆಗೆ ಸಂಸ್ಕೃತವನ್ನು ಕರಪಲವಾಡಿಸುತ್ತ ಶಬ್ಯಾಟೋಪ ಪಟಾಟೋಪಗಳಲ್ಲಿ ವಿಷಯವನ್ನು ಔಸದಿದ್ದರೆ ಮನುಳಿಯುವದಿಲ್ಲ. ಇಂಗ್ಲೀದು ಗ್ರಂಥಗಳಿ ರತಕ್ಕ ಪುಸ್ತಕದ ಅನೇಕ ಮಾಡಗಳಲ್ಲಿ ಒಂದು ಮಾಡದ ಒಂದು ಸಾಲಿಗೂ ಸಂಸ್ಕೃತ ಗ್ರಂಥಗಳೆಲ್ಲ ಸಮನಾಗುವದಿಲ್ಲವೆಂದು ಲಾರ್ಡ ಮಕಾಲೆ ಹೇಳು ವದರಲ್ಲಿ ಉತ್ಪಕ್ಷೆಯ ಅಹಂಬ್ರಹ್ಮತ್ವವೂ ಇರುವದೇನೋ ನಿಜ. ಆದರೆ ಇಂಗ್ಲೀಷು ಗ್ರಂಥಗಳಲ್ಲಿರುವಷ್ಟು ಸ್ವಾರಸ್ಯ ಸಂಸ್ಕೃತ ಗ್ರಂಥ ಗಳಲ್ಲಿಲ್ಲ; ಷೇಕ್ಸ್ಪೀರಿನಲ್ಲಿರತಕ್ಕೆ ಸ್ವಾರಸ್ಯ ಕಾಳಿದಾಸನಲ್ಲಿಲ್ಲವೆಂದಾದರೂ ಒಪ್ಪಬೇಕು. ಸಂಸ್ಕೃತ ಗ್ರಂಥಗಳಆ ಮಹತ್ತರವಾದ ಬ್ರಹ್ಮಾಸ್ತ್ರ ವಿಮಾನ ತಪ್ಪ ಶಕ್ತಿಗಳು ಈ ಪಾಪಿ ಮದ್ದು ಗುಂಡು, ರೈಲ್, ವಿದ್ಯುಚ್ಛಕ್ತಿಗಳಕಾಲದಲ್ಲಿ, ಅದ್ಭುತ ಭಾ೦ತಿಗಳಾಗಿ ರುಚಿಸದಿರುವವು. ಇನ್ನೂ ಅವುಗಳ ಕಟ್ಟಿ ಕೊಂಡು ಹೆಣಗಾಡದೆ ಕಾಲಾನುಗುಣವಾದ ಗ್ರಂಧಗಳಿಂದಲೂ, ಅವುಗಳ ರೀತಿಯಿಂದಲೂ, ಕನ್ನಡದ ಗ್ರಂಥಗಳನ್ನು ಪ್ರಚುರತೆಗೆ ತರಲು ಆಂಗ್ಲೆಯ ಕರ್ಣಾಟಕ ವಿದ್ಯಾವಂತರು " ಸಿರಿಗನ್ನಡಂಗೆ ” ಅಂದರೇನೆ ಕನ್ನಡ ವು ಮುಂದೆ ವೃದ್ಧಿಯಾಗುವರು. ಆದರವರು ಕೆಲವು ಮಾತಿನ ಗಿಳಿಗಳು
ಪುಟ:ಪ್ರತಾಪರುದ್ರದೇವ.djvu/೨೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.