ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಪ್ರತಾಪರುದ್ರದೇವ. ಪದಾತಿ -ಕಂದ || ಪಡಗೊಡವ ಚಂಡಮಾರುತ | ಪೊಡವಿಯೊಳುರೆ ಸುಳಿಯುವಂತೆ ರಣದೊಳಕಲಿತ || ಮೃಡರಲ್ಲಡಗಡನರಿಗಳ | ನಡುಗಿದರಾ ವೀರಸೇನನ ಗತಿಗೆ ಹತಿಗೆ || ೩ || ಜಯಸಿರಿಯಂ ಮುಂದಲೆಯಿಂ | ಭಯಪಡದೆಳವುದನು ನೋಡುತೋಡಿದರಾಳ್ಳೆ || ಹಯಲಕ್ಷದಿಂ ಮೆರವತ | ನಯಪೊಸ ಬಲವಂ ವಿದರ್ಭ ಮುನ್ನೂಂಕಿದನೈ || ೪ ವಿಜಯಧ್ವಜ- ಹಾಹಾ ! ಇದನ್ನು ಕಂಡು ನನ್ನ ದಳಪತಿಗಳಾದ ವೀರಸೇನ ಶೂರಸೇನರು ಭಯಭಾಂತರಾಗಿ ಬೆದರಲಿಲ್ಲವೆ? ಪದಾತಿ -ಕಂದ || ಅಗಸನೆ ಕೇಳ್ಳನ್ನಿರಥಿ || ಕರಿದಕೆ ಬೆದರಿದರು ಗುಬ್ಬಿಗಾಗೃಧ್ರನುಮೇಣ || ಮರಿಫುಲೈಗೆ ಕಡುನಿಂಗಬೆ || ದರುವಂತಿವರಿರರಾರಣಾಂಗಣದತ್ತಲೆ || ೫ || ದಂಡೊಳಗೊಂದು ಪಿರಂಗಿಗೆ | ಗುಂಡೆರಡನ್ನಿಟ್ಟುಪೊಡೆದರದಿವರೀರ್ವ6 || ಚಂಡಗದೆವಿಡಿದರಿಸಿರವ | ಚಂಡಾಡಿದರರರೆ ! ಪಗೆಯ ಪಾಳಯದತ್ತಂ || ೬ || ಇನ್ನು ನಾನು ಮಾತನಾಡಲಾರೆ. ನನಗೆ ಚೈತನ್ಯ ಕಮ್ಮಿಯಾಗು