fo ಪ್ರಬಂಧಮಂಜರಿ-ಎರಡನೆಯ ಭಾಗ, 25. ದೊಡ್ಡ ಪಟ್ಟಣಗಳಲ್ಲಿ ವಾಸಮಾಡುವುದರ ಪ್ರಯೋಜನ. (ಕಟ್ಟು ಪಟ್ಟಣಸೇರು ಎಂಬ ಗಾದೆಯಂತೆ ದೊಡ್ಡ ಪಟ್ಟಣಗಳಲ್ಲಿ ವಾಸಮಾಡುವುದರಿಂದ ಅನೇಕ ಪ್ರಯೋಜನಗಳಾಗುತ್ತವೆ, ಕಲ್ಕತೆಬೊಂಬಾಯಿ, ಮದ್ರಾಸು ಮುಂತಾದ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ವಾಸಮಾಡುವುದರಿಂದಾಗುವ ಪ್ರಯೋಜನಗಳು ಮುಖ್ಯವಾಗಿ ವಿದ್ಯಾಭ್ಯಾಸಕ್ಕೆ ಸಂಬಂ ಧಪಟ್ಟು ವು. ಹಳ್ಳಿಗಳಲ್ಲಿ ಚಿಕ್ಕಶಾಲೆಗಳೇ ಹೊರತು ಕಾಲೇಜುಗಳಿರುವುದಿಲ್ಲ. ದೊಡ್ಡ ಪಟ್ಟಣಗಳಲ್ಲಿ ಆಯಾ ವಿದ್ಯಾಭಾಗಗಳಲ್ಲಿ ಪ್ರವೀಣರಾದ ಉಪಾಧ್ಯಾಯರುಳ್ಳ ಅನೇಕ ಶಾಲೆಗಳೂ ಕಾಲೇಜುಗಳೂ ಇರುವುವು. ನ್ಯಾಯವಿಚಾರವನ್ನು ತಿಳಿಯಬೇಕಾದರೆ ಆ ಕಾಲೇಜಿನಲ್ಲಿ ಓದಬಹುದು. ವೈದ್ಯಶಾಸ್ತ್ರ, ಶಿಲ್ಪ ಶಾಸ್ತ್ರ, ಇಂಜಿನಿಯರಿಂಗ್ ಮೊದಲಾದ ಯಾವ ವಿಧವಾದ ಶಾಸ್ತ್ರವೆ. ನ್ಯಾ ಗಲಿ ಆಯಾ ಕಾಲೇಜುಗಳಲ್ಲಿ ಅಭ್ಯಾಸಮಾಡಬಹುದು. ಈ ಕಾಲೇಜು ಗಳಲ್ಲಿ ಕಷ್ಟ ಪಟ್ಟು ಓದುವ ಕೆಲವರಿಗೆ ವಿದ್ಯಾರ್ಥಿವೇತನಗಳು ದೊರೆವುದರಿಂದ ಬಡ ವಿದ್ಯಾರ್ಥಿಗಳು ಓದಲು ತುಂಬಾ ಪ್ರೋತ್ಸಾಹವುಂಟು. ದೊಡ್ಡ ಪಟ್ಟಣಗಳಲ್ಲಿ ಶಾಲೆಗಳನ್ನೂ ಕಾಲೇಜುಗಳನ್ನೂ ಸೇರುವುದರಿಂದುಂಟಾಗುವ ಉಪಯೋಗಗಳನ್ನು ಪಡೆವುದಲ್ಲದೆ ದೊಡ್ಡ ದೊಡ್ಡ ಪುಸ್ತಕಭಂಡಾರಗಳಿಗೆ ಹೋಗಿ ಉತ್ತಮವಾದ ನಾನಾ ಗ್ರಂಥಗಳನ್ನು ಓದಿ ಜ್ಞಾನಾಭಿವೃದ್ಧಿಯನ್ನು ಮಾಡಿಕೊಳ್ಳಬಹುದು; ಮತ್ತು ಲೋಕದಲ್ಲಿ ನಡೆದ ಅನೇಕ ವಿಷ ಯಗಳನ್ನು ವೃತ್ತಾಂತಪತ್ರಿಕೆಗಳ ಮೂಲಕ ತಿಳಿಯಬಹುದು. - ವಿದ್ಯಾಭ್ಯಾಸವೆಂದರೆ ಪುಸ್ತಕಗಳನ್ನೊದುವುದೆಂದರ್ಥವಲ್ಲ. ಸ್ಕೂಲುಗಳಲ್ಲಿಯೂ, ಕಾಲೇಜುಗಳಲ್ಲಿಯೂ, ಪುಸ್ತಕಭಂಡಾರಗಳಲ್ಲಿಯೂ ಪಡೆದ ಜ್ಞಾನದಿಂದಲೇ ನಮ್ಮ ವಿದ್ಯಾಭ್ಯಾಸವು ಸಂಪೂರ್ಣವಾಯಿತೆಂದು ತಿಳಿಯಕೂಡದು, ಈ ಜ್ಞಾನವನ್ನು ಪ್ರಪಂಚದ ಅಪೂರ್ವವಸ್ತುಗಳನ್ನು ಪರೀಕ್ಷಿಸುವ ವುದರಿಂದಲೂ, ವಿದ್ವಾಂಸರ ಸಹವಾಸದಿಂದಲೂ ವೃದ್ಧಿ ಪಡಿಸಬೇಕು. ಇಂಥ ಜ್ಞಾನಾಭಿವೃದ್ಧಿಗೆ ದೊಡ್ಡ ದೊಡ್ಡ ಪಟ್ಟಣಗಳಲ್ಲಿ ತುಂಬಾ ಅವಕಾಶವುಂಟು. ನಾಗರಿಕತೆಯು ಮೊದಲು ನಗರಗಳಲ್ಲಿ ನೆಲೆಗೊಂಡು ಅಲ್ಲಿಂದ ಎಲ್ಲಾ ಕಡೆಗೂ ಹಬ್ಬುವುದು, ನೋಟಕ್ಕೆ ಅತ್ಯಾಶ್ಚರ್ಯಕರವಾದ ಕಟ್ಟಡ ಗಳೂ ವಸ್ತುಗಳೂ ಸಕಲಶಾಸ್ತ್ರಗಳಲ್ಲಿಯೂ ಪಾರಂಗತರಾದ ವಿದ್ವಾಂಸರೂ
ಪುಟ:ಪ್ರಬಂಧಮಂಜರಿ.djvu/೧೦೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.