೯೨ ಪ್ರಬಂಧಮಂಜರಿ-ಎರಡನೆಯ ಭಾಗ ಇವೆ; ಅಥವಾ ನಾವು ಅವುಗಳ ವಿಷಯದಲ್ಲಿ ಕೂರರಾಗಿದ್ದರೆ ಅವೂ ನಮ್ಮ ವಿಷಯದಲ್ಲಿ ಹಾಗೆಯೇ ಇರುವುವು. ಪರದುಃಖವನ್ನು ಹೋಗಲಾಡಿಸಿ ಸುಖವನ್ನು ಹೆಚ್ಚಿಸುವುದು ನಮ್ಮ ಕರ್ತವ್ಯವು. ಇದನ್ನು ಮನುಷ್ಯರ ವಿಷ ಯದಲ್ಲಲ್ಲದೆ ಸುಖದುಃಖಗಳು ಪ್ರಾಣಿಸಾಮಾನ್ಯಕ್ಕೂ ಇರುವುದರಿಂದ ಎಲ್ಲಾ ಪ್ರಾಣಿಗಳ ವಿಷಯದಲ್ಲಿಯೂ ಆಚರಿಸಬೇಕೆಂದು ಅನೇಕ ನೀತಿಶಾಸ್ತ್ರಜ್ಞರು ಒಪ್ಪಿರುವರು. ಮಾಹಿ೦ಸ್ವಾತ್ಸರ್ವಭೂತಾನಿ' ಎಂದು ನಮ್ಮ ವೇದದಲ್ಲಿ ಹೇಳಿದೆ, ಮನುಷ್ಯರಿಗೆ ಸೌಖ್ಯವು ಹೆಚ್ಚಾಗದಿದ್ದರೂ ಪ್ರಾಣಿಗಳ ಸೌಖ್ಯವನ್ನು ನೋಡಿಕೊಳ್ಳುವುದು ಕರ್ತವ್ಯವೆಂದು ಎಲ್ಲರಿಗೂ ವ್ಯಕ್ತವಾಗಿಯೇ ಇರಬೇಕು, ಗಾಯಹೊಂದಿ ನೋವಿನಿಂದ ನರಳುತ್ತಿರುವ ಒಂದು ಚಿಕ್ಕ ಹುಳುವನ್ನು ನೋಡಿದರೂ, ಅದರ ನೋವನ್ನು ತೊಲಗಿಸುವುದಕ್ಕೆ ಯತ್ನಿ ಸುವುದು ಸಾಮಾನ್ಯವಾಗಿ ಎಲ್ಲರ ಸಮ್ಮತವಾಗಿದೆ ಆದರೂ ಇಂಥ ಕೆಲಸಮಾಡಲು ಎಲ್ಲರಿಗೂ ಮನಸ್ಸು ಒಂದೀತೆ? ಯಾವನು ಈ ಅಸಹ್ಯವಾದ ಕೆಲಸಮಾಡಿ, ಅದರಿಂದ ತನಗೆ ಒಂದು ವೇಳೆ ನೋವುಂಟಾದರೂ ಚಿಂತಿಸದಿರುವನೋ ಅವನೇ ಇದನ್ನು ಮಾಡತಕ್ಕವನು. ಯಾರು ನಿಷ್ಕಾರಣವಾಗಿ ಪ್ರಾಣಿಗಳನ್ನು ನೋಯಿಸುವರೋ ಅವರು ಹಾಗೆ ಮಾಡಿದುದರಿಂದ ಮನುಷ್ಯರಿಗೆ ಬಾಧೆಯಾಗಲಿ, ಆಗದಿರಲಿ, ಶಿಕ್ಷೆಗೆ ಅರ್ಹರು. ಮನುಷ್ಯರ ವಿಷಯದಲ್ಲಾಗಲಿ, ಇತರ ಪ್ರಾಣಿಗಳ ವಿಷಯದಲ್ಲಾಗಲಿ ಮಾಡಿದ ನೋವನ್ನು ಮರೆಮಾಡುವಷ್ಟು ಲೋಕಕ್ಕೆ ಒಳ್ಳೆಯದು ಉಂಟಾಗುವ ಪಕ್ಷದಲ್ಲಿ ಅಂಥ ನೋವು ದಂಡನೀಯವಲ್ಲವು ಆದುದರಿಂದ ಲೇ-ವೈದ್ಯರು ಪ್ರಾಣಿಗಳ ವಿಷಯದಲ್ಲಿ ಕತ್ತರಿಸುವುದು, ಕೊಯ್ಯುವುದು ಮುಂತಾದ ಕ್ರೂರಕೃತ್ಯಗಳನ್ನು ನಡೆಸುವುದರಿಂದ ವೈದ್ಯಶಾಸ್ತ್ರದಲ್ಲಿ ಎಷ್ಟೋ ಹೊಸ ವಿಷಯಗಳು ಕಂಡುಹಿಡಿಯಲ್ಪಡುವುವಲ್ಲದೆ, ಇವುಗಳಿಂದ ಅನೇಕ ಹೊಸಔಷಧಗಳುಂಟಾಗಿ ಜನರ ಹಲವುಬಗೆಯ ರೋಗಗಳು ತೊಲಗುವುವು. ಮನುಷ್ಯರು ಇತರಪ್ರಾಣಿಗಳಿಗಿಂತ ಮುಖ್ಯರಾದುದರಿಂದ ಮನುಪ್ಯರ ರೋಗಗಳನ್ನು ವಾಸಿಮಾಡುವ ಹೊಸ ಔಷಧಗಳನ್ನು ಕಂಡು ಹಿಡಿಯಲು, ನಾಯಿ, ಕಪ್ಪೆ, ಮುಂತಾದ ಜಂತುಗಳಿಗೆ ಹಿಂಸೆಕೊಟ್ಟರೂ ಚಿಂತೆಯಿಲ್ಲ, ಎಂದು ಕೆಲವರು ಹೇಳುತ್ತಾರೆ. ಹೀಗೆ ಹೇಳುವುದು ಎಲ್ಲರೂ
ಪುಟ:ಪ್ರಬಂಧಮಂಜರಿ.djvu/೧೧೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.