೧೧೩ ಒಳ್ಳೆಯ ನಡತೆ ಪುಣ್ಯವಂತನೆನಿಸಿಕೊಂಡು, ಜನರ ಪ್ರೀತಿಯನ್ನು ಸಂಪಾದಿಸಿ, ಅವರೂ ಸನ್ಮಾರ್ಗವನ್ನ ನುಸರಿಸುವಂತೆ ಮಾಡಿ, ಲೋಕಸೌಖ್ಯವನ್ನು ವೃದ್ಧಿಗೊಳಿಸಿ, ಬಹು ಶ್ರೇಯಸ್ಸನ್ನು ಪಡೆಯುತ್ತಾನೆ. ಈ ವಿಷಯವು ಅನೇಕರಿಗೆ ಗೊತ್ತಿದ್ದರೂ, ಅವರು ತಮ್ಮ ಕೆಟ್ಟ ನಡತೆಯನ್ನು ಬಿಟ್ಟಿಲ್ಲ. ಒಂದು ಕೆಲಸವನ್ನು ಮಾಡಿದುದರಿಂ 5ರಿಂದ ಒಳ್ಳೆಯದಾಗುವುದೋ ಕೆಟ್ಟುದಾಗುವುದೋ ಎರಡೂ ಅರಿಯದೆ ಅದಕ್ಕೆ ಪ್ರವರ್ತಿಸುವುದು ದಡ್ಡತನವು, ಅದರಿಂದಾಗುವ ಕೇಡನ್ನು ತಿಳಿದ ಮೇಲೆಯೂ, ಅದನ್ನೇ ಮಾಡಹತ್ತುವುದನ್ನೇ ನೆಂದು ಕರೆಯೋಣ ! ಪ್ರಪಂಚದಲ್ಲಿ ಇದನ್ನು ತಿಳಿದವರು ಬಹಳ, ತಿಳಿಯದವರು ಸ್ವಲ್ಪ, ಸನ್ಮಾರ್ಗದಲ್ಲಿ ನಡೆವವರು ಕೆಲವರು, ದುರ್ಮಾರ್ಗಪ್ರವೃತ್ತರು ಹಲವರು. ತಿಳಿದವರೆಲ್ಲ ಕೆಟ್ಟ ನಡತೆಯನ್ನು ಬಿಟ್ಟರೆ, ಅವರಿಗೆ ಯಾವ ಸೌಖ್ಯವೂ ಮರ್ಯಾದೆಯೂ ಉಂಟಾಗುವುದಸಾಧ್ಯ ? ಇವರೆಲ್ಲರೂ ಸನ್ಮಾರ್ಗದಲ್ಲಿ ನಡೆವುದನ್ನು ನೋಡಿ, ಮೂಢರಾದ ಉಳಿದವರು ತಮ್ಮನ್ನು ತಿದ್ದಿಕೊಂಡು, ತಾವೂ ಸನ್ಮಾರ್ಗವನ್ನೇ ಹಿಡಿಯುವರು ಈಯರ್ಥವನ್ನೆ ಶ್ರೀಮದ್ಭಗವದ್ಗೀತೆಯೂ ಬೋಧಿಸುವುದು:-
- ಯದ್ಯದಾಚತತಿ ಶ್ರೇಷ್ಠ ಸತ್ಯದೇವೇತರೋಜನಃ |
ಸ ಯಕ್ಷಮಾಣಂ ಕುರುತೇ ಲೋಕದನುವರ್ತತೇ || ಆಗ ಒಬ್ಬನಿಂದೊಬ್ಬನಿಗೆ ತೊಂದರೆಯೆನ್ನು ವುದು ಸಂಭವಿಸದು. ಇದು ರಿಂದ ತೊಂದರೆಮಾಡಿದವರನ್ನು ವಿಚಾರಿಸಿ ದಂಡಿಸುವುದಕ್ಕಾಗಿ ಏರ್ಪಟ್ಟಿರುವ ನ್ಯಾಯಸ್ಥಾನಗಳೂ ಅನಾವಶ್ಯಕಗಳಾಗಬಹುದು. - ಹಣವಂತನು ಎಂಥ ಕೆಟ್ಟ ಕೆಲಸಮಾಡಿದರೂ, ಅದನ್ನು ಯಾರೂ ಕೆಟ್ಟುದಾಗಿ ಎಣಿಸುವುದಿಲ್ಲವೆಂದು ಕೆಲವರು ತಿಳಿದಿರುವರು. ಇದು ಯುಕ್ತವಲ್ಲ. ಹೇಗೆಂದರೆ, ಒಬ್ಬ ದುರ್ಮಾರ್ಗಿಯಾದವನಲ್ಲಿ ಬೇಕಾದಷ್ಟು ಹಣವಿದ್ದರೂ ಅವನು ಅದನ್ನು ಸ್ವಚ್ಛೆಯಾಗಿ ವೆಚ್ಚ ಮಾಡಿ ಸ್ವಲ್ಪ ಕಾಲದಲ್ಲಿಯೇ ಮುಗಿಸಿಬಿಡುವನು. ಅವನು ಹಣವಂತನಾದುದರಿಂದ ಅವನೂರಿನವರಿಗೆ ಏನಾದರೂ ಪ್ರಯೋಜನವುಂಟೇ ? ಅವನ ನೆರೆಯವರಿಗೆ ಸುಖವುಂಟೇ? ಬಡವರಿಗೆ ಸಹಾಯವಾಗುತ್ತದೆಯೇ ? ಯಾವುದೂ ಇಲ್ಲ. ಆದುದರಿಂದ ಅವನು ಹಣ