ಈ ಪುಟವನ್ನು ಪರಿಶೀಲಿಸಲಾಗಿಲ್ಲ.

دوه ಪ್ರಬಂಧಮಂಜರಿ-ಎರಡನೆಯ ಭಾಗ ವರು, ಅಲ್ಲಿ ನ್ಯಾಯಾಧಿಪತಿ ಆ ಕಲಹವನ್ನು ತೀರಿಸುತ್ತಾನೆ. ಎರಡು ಸೀಮೆ ಗಳಿಗೆ ಉಂಟಾದ ಕಲಹವನ್ನೂ ಹೀಗೆಯೇ ನ್ಯಾಯರೀತಿಯಲ್ಲಿ ವಿಚಾರಿಸಿ ತೀರ್ಪು ಕೊಡುವ ಪದ್ದತಿಯನ್ನು ಕೆಲವು ವೇಳೆ ಅನುಸರಿಸುವುದುಂಟು. ಆದರೂ ಒಂದು ಜನಾಂಗಕ್ಕೆ ಇನ್ನೊಂದರೊಡನೆ ವ್ಯಾಜ್ಯವು ಹತ್ತಿದರೆ, ಅದನ್ನು ಯುದ್ಧ ಮಾಡಿ ತೀರ್ಮಾನಮಾಡಿಕೊಳ್ಳುವುದು ಬಲು ವಾಡಿಕೆಯ ಇದೆ. ಇಬ್ಬರಿಗೆ ಜಗಳ ಬಿದ್ದಾಗ, ಬಲಿಷ್ಠನಿಗೇ ಜಯವಾಗಬೇಕೆಂಬ ನಿರ್ಬಂಧವೇನೂ ಇಲ್ಲ. ಆದರೆ ಒಂದು ಜನಾಂಗವು ಮತ್ತೊಂದರೊಡನೆ ಜಗಳವಾಡುವಾಗ, ಯಾವುದಕ್ಕೆ ಶಕ್ತಿ ಹೆಚ್ಚೇ ಅದರ ಕಡೆ ಜಯವಾಗುವುದು ಸಹಜವೆಂಬುದನ್ನು ಅಂಗೀಕರಿಸಿ ಯುದ್ದಕ್ಕೆ ಪ್ರಾರಂಭಿಸುವರು. ಯುದ್ದವು ಹಿಂದೆ ಪಾಮರರು ಒರಟುತನದಿಂದ ಮಾಡುತ್ತಿದ್ದ ಕ್ರೂರ ಕೃತ್ಯಗಳಲ್ಲಿ ಒಂದು ಭಯಂಕರವಾದ ಕೃತ್ಯವು. ಇದು ನಮ್ಮ ಕಾಲಕ್ಕೂ ಬಂದಿದೆ. ಇಂಥ ನಾಗರಿಕತೆಯುಳ್ಳ ಕಾಲದಲ್ಲಿಯೂ ಈ ಅಸಹ್ಯವಾದ ಯು. ದ್ದವಿರುವುದು ಅತಿಸುಂದರವಾದ ಒಂದು ಚಿತ್ರದ ಮೇಲೆ ಮಶಿಯಲ್ಲಿ ಗೀಚಿದ ಹಾಗಾಗಿದೆ. ಈಗ ಶಾಸ್ತ್ರ ಪರಿಚಯವು ಹೆಚ್ಚಿದ ಹಾಗೆಲ್ಲಾ ಮನು. ಪ್ಯರ ಪ್ರಾಣಗಳನ್ನು ಸುಲಭವಾಗಿ ತೆಗೆಯುವುದಕ್ಕನುಕೂಲವಾದ ಆಯು ಧಗಳನ್ನೂ ಉಪಾಯಗಳನ್ನೂ ಕಂಡುಹಿಡಿಯಲವಕಾಶವಾಗಿದೆ ಆದರೆ ಕನಿಕರವೂ ಪರಸ್ಪರ ಹಿತಚಿಂತೆಯ ನಾಗರಿಕತೆಯೊಡನೆ ಹೆಚ್ಚಿ, ಯುದ್ದದಿಂದುಂಟಾಗುವ ಭೀತಿಯನ್ನು ಸ್ವಲ್ಪ ಮಟ್ಟಿಗೆ ಕಡಮೆಮಾಡಿವೆ. ಹಿಂದೆ ಅಸ್ಥಿರಿ. ಯಾ ದೇಶದವರು ಯುದ್ಧದಲ್ಲಿ ಸೆರೆಹಿಡಿದವರನ್ನು ಶೂಲಕ್ಕೆ ಹಾಕಿಸುತ್ತಿದ್ದರು. ಗ್ರೀಕರೂ ರೋರ್ಮ ಜನರೂ ಅವರನ್ನು ಗುಲಾಮರನ್ನು ಮಾಡಿಕೊಳ್ಳುತಿದ್ದರು. ಇನ್ನು ಕೆಲವು ಕ್ರೂರರಾದವರು ಮುತ್ತಿಗೆ ಹಾಕಿದ ಪಟ್ಟಣಗಳಲ್ಲಿದ್ದ ಗಂಡಸರನ್ನೂ ಹೆಂಗಸರನ್ನೂ ಮಕ್ಕಳನ್ನೂ ಕೊಂದು ಆ ಪಟ್ಟಣಗಳನ್ನು ನೆಲ ಸಮನಾಗಿ ಮಾಡುತ್ತಿದ್ದರು. ಇದಕ್ಕೆ ಘಜನಿಯ ಮಹಮೂದನು ಔರಂಗಸೇಬನ್ನು, ಅಲ್ಪಾವದಿನ್ ಖಿಲ್ಲಿ ಇವರಿಗಿಂತ ಬೇರೆ ಉದಾಹರಣೆಗಳು ಬೇಕೆ? ಇಂಗ್ಲೆಂಡಿನ ಚರಿತ್ರೆಯಲ್ಲಿಯೂ ಇದಕ್ಕೆ ಹಲವು ನಿದರ್ಶನಗಳುಂಟು. ಇಂಥ ಭಯಂಕರವಾದ ಕೊರಕೃತ್ಯಗಳು ಈಗಿನ ನಾಗರಿಕರ ಯುದ್ಧಗಳಲ್ಲಿ ವಿಶೇಷ