ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ರಜಾದಿನಗಳು ೧೨೯ ಯಾವ ವಿಧವಾದ ಕೆಲಸವನ್ನೇ ಆಗಲಿ ಕಷ್ಟ ಪಟ್ಟು ಮಾಡಿದ ಮೇಲೆ ವಿಶಾಂತಿ ಬೇಕು ಶ್ರಮಕ್ಕೆ ತಕ್ಕ ಫಲವು ವಿಶ್ರಾಂತಿ. ಕೆಲಸಮಾಡುವ ದಿನಗಳಲ್ಲಿ ಪ್ರತಿದಿನವೂ ಒಂದೆರಡು ಘಂಟೆಯ ಕಾಲ ವಿರಾಮ ಬೇಕಾಗಿರುವುದಲ್ಲದೆ, ಅವು ಮುಗಿದ ಮೇಲೆ ಪ್ರತಿದಿನವೂ ವಿನೋದದಿಂದ ಕಾಲವನ್ನು ಕಳೆಯಲು ಅದಕಿಂತಲೂ ಹೆಚ್ಚು ವಿರಾಮ ಬೇಕು, ಕೆಲಸಮಾಡುವ ಕಾಲವು ಹೆಚಿ - ದಷ್ಟೂ ಫಲವೂಹೆಚ್ಚುವುದೆಂದು ಕೆಲವರು ತಿಳಿದಿರುವರು. ಯಾವ ಬಗೆಯ ಕೆಲಸದ ವಿಷಯದಲ್ಲಿಯೂ ಇದು ಸರಿಯಲ್ಲ; ಬುದ್ದಿ ಕಾರ್ಯದ ವಿಷಯದಲ್ಲಂತು ಬರೀ ಸುಳ್ಳು. ಒಬ್ಬ ವಿದ್ಯಾರ್ಥಿ ಸ್ಕೂಲಿದ್ದ ದಿನಗಳಲ್ಲಿ ಚೆನ್ನಾಗಿ ಕಷ್ಟ ಪಟ್ಟೋದುತ್ತಿದ್ದು, ರಜಾ ಬಂದಾಗ ಮಿದುಳಿಗೆ ವಿಶೇಷ ಕೆಲಸಕೊಡದೆ ವಿನೋದವಾಗಿ ಹೊತ್ತು ಕಳೆಯಬಹುದು. ಮತ್ತೊಬ್ಬನುಆ ವರ್ಷದಲ್ಲಿ ಒಂದು ದಿನವನ್ನೂ ಬಿಡದೆ ಮೊದಲಿಂದ ಕೊನೆವರೆಗೂ ಒಂದೇ ವಿಧವಾಗಿ ದುಡಿಯ ಬಹುದು. ಇವರಿಬ್ಬರಲ್ಲಿ ಮೊದಲನೆಯವನೇ ಹೆಚ್ಚಾಗಿ ಕಲಿಯತಕ್ಕವನು. ಅವನು ಎರಡನೆಯವನಷ್ಟು ಹೊತ್ತು ಓದದಿದ್ದರೂ, ಆಗಾಗ್ಗೆ ಹೊಂದುತ್ತಿದ್ದ ವಿಶ್ರಾಂತಿಯಿಂದ ಅವನಿಗೆ ಉಲ್ಲಾಸವುಂಟಾಗಿ, ಅವನ ಕೆಲಸವು ತುಂಬಾ ಫಲದಾಯಕವಾಗುವುದು, ಇದರಿಂದ ಕೆಲಸವು ಪರಿಮಾಣದಲ್ಲಿ ಕಡಮೆಯಾದುದಕ್ಕೂ, ಫಲಕಾರಿಯಾಗುವುದರಲ್ಲಿ ಹೆಚ್ಚಿದುದಕ್ಕೂ ಸರಿಹೋಗುತ್ತದೆ. ಈಗಿನ ಕಾಲದಲ್ಲಿ ಪರೀಕ್ಷೆ ಗಳಲ್ಲಿ ತೇರ್ಗಡೆಯನ್ನು ಹೊಂದಬೇಕೆಂದಿರುವೆ ವವರು ವರ್ಷಾಂತರಗಳವರೆಗೂ ಒಟ್ಟಿಗೆ ಓದಬೇಕಾಗಿದೆ. ಇಂಥವರಿಗೆ ರಜಾದಿನಗಳು ತುಂಬಾ ಆವಶ್ಯಕ. ಒಬ್ಬನು ಒಂದು ವರ್ಷವೆಲ್ಲ ಎಡೆಬಿಡದೆ ಓದುತಿದ್ದರೆ, ಮುಂದಲವರ್ಷದಲ್ಲಿ ಪ್ರಯೋಜನವಾಗುವಂತೆ ಕೆಲಸಮಾಡಲು, ಅವನ ಮಿದುಳಿಗೆ ಶಕ್ತಿಯೇ ಇರುವುದಿಲ್ಲ. ಹೇಗೆಂದರೆ ವಿದ್ಯಾರ್ಥಿಗಳು ವರ್ಷಾಂತರಗಳ ವರೆಗೆ ವ್ಯಾಸಂಗಮಾಡಿ ಪರೀಕ್ಷೆಗಳಲ್ಲಿ ಮೇಲೆ ಯಿಂದ ತೇರ್ಗಡೆಯನ್ನು ಹೊಂದಬಹುದು. ಆದರೆ ಆಗಾಗ್ಗೆ ಬಂದ ರಜಾದಲ್ಲಿ, ಅವರು ತಮ್ಮ ಮನಸ್ಸುಗಳಿಗೆ ವಿಶ್ರಾಂತಿಕೊಡದೆ ಹೋಗಿದ್ದರೆ, ಸ್ವತಂತ್ರವಾಗಿ ಬಾಳುವಾಗ ಅವರ ಮಿದುಳುಗಳು ಬಲುರ್ದಣಿದು ಯಾವ ಕೆಲಸವನ್ನು ಮಾ. ಡುವುದಕ್ಕೂ ಓಡದೆ, ಅವರು ನಿರ್ಬಲರೂ ರೋಗಪೀಡಿತರೂ ಆಗುವರು. ಮತ್ತೆ ಕೆಲವರುಪರೀಕ್ಷೆಗಳಲ್ಲಿ ಕೀಳುತರಗತಿಗಳಲ್ಲಿ ಉತ್ತೀರ್ಣರಾಗಿರಬಹುದು ಆದರೂ ಇವರು ಮಿದುಳಿಗೆ ದಣಿವಷ್ಟು ಕೆಲಸಕೊಡದೆ, ಬಂದ ರಜಾವನ್ನು