ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಿತವ್ಯಯ. ೧೧ ಅದು ಮನಸ್ಸಿಗೆ ಚನ್ನಾಗಿ ಹತ್ತುವುದು. ಆದುದರಿಂದ ನಾಟಕಗಳು ದುರ್ಗುಣಗಳನ್ನು ತೂಲಗಿಸಿ ಸುಗುಣಗಳನ್ನು ಜನರಲ್ಲಿ ಉಂಟುಮಾಡಬಹುದು. 5, ಈಗಿನ ಕಾಲದ ನಾಟಕಗಳು ಈ ಕೆಲಸವನ್ನು ಮಾಡುತ್ತಿಲ್ಲ, 6. ನಾಟಕ ಆಡುವುದು ಈಗ ಒಂದು ಜೀವನೋಪಾಯ, ಇದರಲ್ಲಿ ಸೇರಿರುವವರ ಚಾಲು ಬಹಳ ಕೆಟ್ಟದ್ದು. ಇದರಿಂದ ನಾಟಕಕ್ಕೆ ಕೆಟ್ಟ ಹೆಸರು ಬಂದಿದೆ. 21. ಮಾತಾಪಿತೃ ಗಳಲ್ಲಿ ವಿಧೇಯತ, 1. ಇದು ಚಿಕ್ಕವರು ಕಲಿಯಬೇಕಾದ ಪ್ರಥಮ ಗುಣ, ಇದನ್ನು ಮೊಟ್ಟಮೊದಲಿಂದಲೂ ಮಕ್ಕಳಲ್ಲಿ ಏಕೆ ಉಂಟುಮಾಡಬೇಕು? ಎಲ್ಲಾ ಮತಗಳೂ ಈ ಗುಣಕ ಪ್ರಾಮುಖ್ಯವನ್ನು ಏಕ ಕೊನೆ ? 2 ಬಲಾತ್ಕಾರಕ್ಕೆ ಹೇಳಿದಂತೆ ಕೇಳುವುದು ನಿಜವಾದ ವಿಧೇಯತೆಯಲ್ಲ, ತಾಯ್ತಂದೆಗಳಿಗೆ ಮಕ್ಕಳ ಮೇಲಿರುವ ಅಧಿಕಾರ, ಮಕ್ಕಳನ್ನು ಶಿಕ್ಷೆಯಲ್ಲಿಟ್ಟಿರುವುದರ ಪ್ರಯೋಜನ, ವಿಧೇಯತೆಯನ್ನು ಕಲಿತ ಹೊರತು ಆಜ್ಞೆ ಮಾಡಲು ಅರ್ಹತೆ ಯಾರಿಗೂ ಬಾರದು. 3, ವಿವೇಕವಿಲ್ಲದ ವಿಧೇಯತೆ ಸರಿಯಾದುದೇ? ಮಕ್ಕಳು ಯಾವಾಗಲಾದರ ತಾಯದೆಗಳ ಮಾತಿಗೆ ಮಾರಿ ನಡೆವುದು ಯುಕ್ತವೆ ? 4. ಹಿಂದೂ ಬಾಲಕರಿಗೆ ತಮ್ಮ ತಾಯ್ತಂದೆಗಳಲ್ಲಿರುವ ಭಕ್ತಿ. 5, ಸಮಾಪ್ತಿ, 22, ಮಿತವ್ಯಯ, 1, ಅರ್ಥ, ತನ್ನಲ್ಲಿರುವ ಪದಾರ್ಥಗಳನ್ನು ಕಾಲದೇಶಗಳನ್ನರಿತು ಜಾಗರೂಕತೆಯಿಂದ ಉಪಯೋಗಿಸುವುದು, ಕಾಲದಂತಹ ಇತರ ವಿಷಯಗಳಲ್ಲಿ ಮಿತವ್ಯಯವನ್ನು ಅನುಸರಿಸಬಹುದೆ? 2 ಇದಕ್ಕೆ ಸಹಕಾರಿಗಳು: -ಮಾಡಿದ ಖರ್ಚಿಗೆಲ್ಲಾ ಲೆಕ್ಕವನ್ನು ಇಡುವುದು, ಏನನ್ನೂ ವ್ಯರ್ಥವಾಗಿ ಹಾಳು ಮಾಡಬಾರದು, ಎಷ್ಟೇ ಸುಲಭ ಕ್ರಯದ್ದಾಗಲಿ, ಒಂದು ಪದಾರ್ಥನ ನಮಗೆ ಅತ್ಯಾವಶ್ಯಕವಾಗಿದ್ದ ಹೊರತು, ಅದನ್ನು ಕೊಳ್ಳಬಾರದು, ಆದಾಯಕ್ಕೆ ಮಾರಿ ಎಂದಿಗೂ ಖರ್ಚುಮಾಡಬಾರದು, ಆದಾಯದಲ್ಲಿ ಸ್ವಲ್ಪ ವನ್ನು ಉಳಿಸುತ್ತಾ ಬರಬೇಕು, ಅನ್ನವಸ್ತ್ರಗಳಲ್ಲಿ ಮಿತಿ, ಆದರೆ ಮಿತವ್ಯಯವು ಕಾರ್ಪಣ್ಯದಲ್ಲಿ ಪರಿಣಮಿಸಕೂಡದು. - 3, ಇದರ ಆವಶ್ಯಕತೆ-ಒಂದಾನೊಂದು ಕಾಲದಲ್ಲಿ ಜೀವನೋಪಾಯಕ್ಕೆ ಭಂಗಬರಬಹುದು, ಆರೋಗ್ಯ ಕಡಬಹುದು, ಯಾವ ವಿಧದಲ್ಲಾದರೂ ಕಷ್ಟಪ್ರಾಪ್ತಿಯಾದಾಗ ಉಪಯೋಗಿಸುವಂತೆ ಸ್ವಲ್ಪ ಹಣ ಕೂತಳು ಇದ್ದೇ ಇರಬೇಕು ಕೈಮೇಲೆ ಹಣವಿರುವುದು ಎಷ್ಟು ಒಳ್ಳೆಯದು? ಧೈರ್ಯಕ್ಕೂ, ಸ್ವಾತಂತ್ರ , ಸುಖಕ್ಕೂ ಆಸ್ಪದ. 4, ಉಳಿಸಿದ ಹಣದಿಂದ ಆದಾಯವನ್ನು ಪಡೆವುದು:- ಬ್ಯಾಂಕಿನಲ್ಲಿ ಹಾಕುವುದು; ಲೈಫ್ ಇನ್‌ಕ್ಯೂರೆನ್ಸ್; ಜಾನು ಮೊದಲಾದುವನ್ನು ಕೊಳ್ಳುವುದು, ಇತರ ಲಾಭಕರವಾದ ಕಾರ್ಯಗಳಲ್ಲಿ ಹಣಹಾಕುವುದು,