ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಬ್ದ ಸೌಷ್ಟವ. ಳಿಗೂ ಒಂದೇ ರೀತಿಯಲ್ಲಿ ಸಲ್ಲುವ ಭಾಷಾಸರಣಿಯ ವಿಧಿಗಳು ಕೆಲವು ಉಂಟು, ಅವು ಯಾವುವೆಂದರೆ:- _I ಶಬ್ದ ಸೌಷ್ಠವ:- ವಾಕ್ಯ ರಚನೆ ಶುದ್ಧವಾಗಿರು ವುದು. II ಲಾಲಿತ್ಯ:-ಓದಿದೊಡನೆಯೇ ಅರ್ಥವು ತಿಳಿಯಬರುವಂತೆ ವಿಶ. ದವಾದ ರೀತಿಯಲ್ಲಿ ಬರೆವುದು. ಈ ವಿಷಯಗಳನ್ನು ಕುರಿತು ಹೊಸಗನ್ನಡಕ್ಕೆ ಸಂಬಂಧಿಸಿರುವಷ್ಟು ಇಲ್ಲಿ ವಿವರಿಸಿದೆ. [ ಶಬ್ದ ಸೌಷ್ಟವ:-(Purity in the use of words.) (1) ವ್ಯಾಕರಣಕ್ಕೆ ವಿರುದ್ಧವಾದ ಶಬ್ದ ಪ್ರಯೋಗಗಳನ್ನು ಮಾಡ ಕೂಡದು. ಉದಾ ಅಶುದ್ಧ. ಶುದ್ಧ. ಪ್ರೀತಿ ಇಂದ. ಪ್ರೀತಿಯಿಂದ, ನಗುಮುಖಳಾಗಿ ನಗೆಮೊಗದವಳಾಗಿ, ಭಯಶೂನ್ಯವಾದ ಹೃದಯಳಾಗಿ, ಭಯಶೂನ್ಯಹೃದಯೆಯಾಗಿ, ಗುರುವಿಗೋಸ್ಕರ ಭಕ್ತಿ, ಗುರುವಿನಲ್ಲಿ ಭಕ್ತಿ ಅವನು ನನ್ನನ್ನು ಕೋಪಮಾಡುತ್ತಾನೆ, ಅವನು ನನ್ನ ಮೇಲೆ ಕೋಪಮಾಡುತ್ತಾನೆ. ಧೀರರು ಕಷ್ಟದಿಂದ ಅಂಜುವುದಿಲ್ಲ, ಧೀರರು ಕಷ್ಟಕ್ಕೆ ಅಂಜುವುದಿಲ್ಲ, ಜನರು ವಿವೇಕವೆಂದು ಹೇಳುವುದ್ಯಾವುದು? ಜನರು ವಿವೇಕವೆಂದು ಹೇಳುವುದು ಯಾವುದು ? (2) ರೂಢಿಯಲ್ಲಿಲ್ಲದ ಶಬ್ದಗಳನ್ನು ಪ್ರಯೋಗಿಸಕೂಡದು. ಉದಾ- ಅಜ್ಜನನ್ನು ವಂದಿಸು ” 4 ತಾತನು ಬಂದನು. ಅಲ್ಲಿ ಒಕ್ಕಲಿಗನಾಗಿದ್ದನು ” ಇಲ್ಲಿ 4 ಅಜ ” ಎಂಬುದು - ಆರ್ಯ” ಎಂಬರ್ಥದಲ್ಲಿ ಯ, 4 ತಾತ” ಎಂಬುದು “ತಂದೆ” ಎಂಬರ್ಥದಲ್ಲಿ ಯ, 4 ಒಕ್ಕಲಿಗನಾಗಿದ್ದನು” ಎಂಬುದು “ಒಕ್ಕಲಿದ್ದನು” ಎಂಬರ್ಥದಲ್ಲಿ ರೂಢಿಯಲ್ಲಿಲ್ಲ. (3) ಗ್ರಾಮ್ಯ ಶಬ್ದಗಳನ್ನು ಪ್ರಯೋಗಿಸಬಾರದು. ಉದಾಗ್ರಾಮ, ಶುದ್ಧ, ಗ್ರಾಮ, ಶುದ್ದ. ಮ್ಯಾಗೆ. ಮೇಲೆ” ಏಸು. ಎಷ್ಟು ಹೆಂಗೆ ಹ್ಯಾಗೆ, ಹೇಗೆ ಈಸು. ಇಷ್ಟು, ಹಂಗೂ ಹಾಗೂ, ಕುಂತಿ, ಕುಳಿತಿರುವರು. ಹಿಂಗೆ. ಹೀಗೆ [ಹುಟ್ಟಿ, ಹೈದ. ಹುಡುಗ, ಹೊತ್ತನುಂಟೆ ಹೊತ್ತಿನಂತೆ, ಹೊತ್ತು ಹೊತ್ತಾರೆ. ಚಳಿಗೆ,