ಪ್ರಬಂಧಮಂಜರಿ ಮೊದಲನೆಯ ಭಾಗ “ಸಮಸ್ತ ಪ್ರದೇಶಗಳಲ್ಲಿ ಯ ಹಿಂದೂಗಳ ಪ್ರಾಧಾನ್ಯವು ವಿಸ್ತಾರವಾಯಿತು.” “ಭರತಖಂಡದಲ್ಲಿ ಪುನಃ ಪುನಃ ಉಂಟಾದ ರಾಜ್ಯ ವಿಪ್ಲವಗಳಿಂದ ಜೀವನ ಸಂಗಾ. ನವು ಹೆಚ್ಚಾಗುತ ಬಂತು.” ಆದರೆ ಅನ್ಯ ದೇಶದಿಂದ ಹೊಸದಾಗಿಬಂದ ಅನೇಕ ದಾರ್ಥಗಳಿಗೆ ನಮ್ಮ ಭಾಷೆಯಲ್ಲಿ ಹೆಸರು ಇಲ್ಲದಿರುವುದರಿಂದ, ಆ ವಸ್ತುಗಳನ್ನು ಕರೆಯಬೇಕಾದರೆ, ಅನ್ಯದೇಶೀಯ ಶಬ್ದಗಳನ್ನೇ ಉಪಯೋಗಿಸಬಹುದು. ಉದಾ ಅಲುಮಿನಿಯಂ, ಕೋಕೊ,ಕಾಫಿ, ಟೀ, ಸೋಡಾ,ಲೆಮನೆಡ್, ರಬ್ಬರ್, ಫನಲ್, ರೈಲು, ಇಂಜಿನ್, ಪ್ಲೇಗು ಮೊದಲಾದ ಇಂಗ್ಲಿಷು ಶಬ್ದಗಳು; ಅತ್ತರ್, ಜವಾಜಿ ಮೊದಲಾದ ಹಿಂದುಸ್ನಾನಿ ಮಾತುಗಳು, ಇನ್ನು ಕೆಲವು ಅನ್ಯದೇಶ್ಯ ಶಬ್ದಗಳಿಗೆ ಕನ್ನಡದಲ್ಲಿ ಪ್ರತಿಪದಗಳಿಲ್ಲದಿರುವುದರಿಂದ ಅವು ರೂಢಿಯಲ್ಲಿವೆ. ಉದಾ. 1 ಸಮನ್, ವಾರಂಟು, ಪೋಲೀಸು,ಹಿರಂಗು,ಛಾರ್ಜು, ಲಾಯರು, ರಿಕಾಡು೯, ರಿಪೋರ್ಟು,ಸರ್ಕಿಟು, ಕಂಟ್ರಾಕ್ಕು, ಮೆಂಬರು, ಓರ್ವ,ಇಂಜಿನೀರು, ಮುನಿಸಿಪಾಲಿಟಿ ಕಾಲೇಜು, 2 ಶಿಫಾರಸು, ಖಾಯಂ, ಅಂದಾಜು, ಖಾಲಿ, ದಾಮಾಷ ಸಿ,ಇಲಾಖೆ, ಮೊಕದ್ದ ಮ, ವಾಯಿದೆ, ಖಾನೇಷ್ಯಾರಿ, ಆಮದು, ರಫ್ತು, ತರ್ಕಾರಿ, ಸರ್ಕಾರ, ಕಚ್ಚೇರಿ, II ಲಾಲಿತ್ಯ (Simplicity). ಶಬ್ದ ಸೌಷ್ಠವದ ಜತೆಗೆ ಲಾಲಿತ್ಯವು ಭಾಷಾಶೈಲಿಯ ಮುಖ್ಯ ಗುಣವು, ನಮ್ಮ ಗ್ರಂಥವು ಒಳ್ಳೆಯದೆನಿಸಿಕೊಳ್ಳಬೇಕಾದರೆ, ಓದಿದವರಿಗೆ ಏನೋ ಒಂದರ್ಥವನ್ನು ಕೊಡುವ ಹಾಗಿದ್ದರೆ ಸಾಲದು; ನಮ್ಮ ಮನಸ್ಸಿನಲ್ಲಿರುವ ಅಭಿಪ್ರಾಯವನ್ನು ಸ್ವಲ್ಪವೂ ಹೆಚ್ಚು ಕಡಮೆಯಿಲ್ಲದಂತೆ ವಿಶದವಾಗಿ ತಿಳಿಯಪಡಿಸುತ್ತಿರಬೇಕು. ವಾಚಕರು. ನಿಜವಾದ ಅರ್ಥವನ್ನು ತಿಳಿಯಲಾರದ ಹಾಗೆ ಕೇವಲ ಶಬ್ದಾಡಂಬರವಿರಬಾರದು; ಅಥವಾ ಎರಡರ್ಥಗಳು ತೋರಿ ಅವರಿಗೆ ಇದೋ ಅದೋ ಎಂಬ ಸಂಶಯವುಂಟಾಗಬಾರದು. ಓದುವವರು ಅರ್ಥವನ್ನು ಬಹಳ ವಿಚಾರಮಾಡಿ ತಿಳಿದುಕೊಳ್ಳುವಂತೆಯೂ ಬರೆಯಬಾರದು, ಓದಿದೊಡನೆಯೇ ಅರ್ಥವು ಚೆನ್ನಾಗಿ ಹೊಳೆವಂತೆ ಬರೆಯಬೇಕು.
ಪುಟ:ಪ್ರಬಂಧಮಂಜರಿ.djvu/೨೪
ಈ ಪುಟವನ್ನು ಪರಿಶೀಲಿಸಲಾಗಿಲ್ಲ.