ಮಾವಿನ ಮರ. ೫೯ ವರ್ಷಗಳವರೆಗೂ ಫಲಕೊಡುತ್ತಿರುವುವು. ಅಡಕೆಯ ಸಸಿಗೆ ತಂಪೂ ನೆರಳೂ ಆವಶ್ಯಕವಾದುದರಿಂದ, ಆ ತೋಟಗಳಲ್ಲಿ ತೆಂಗು ಹಲಸು ನಿಂಬೆ ಕಿತ್ತಳೆ ಹೇರಿಳೆ ಮುಂತಾದ ಮರಗಳನ್ನು ಬೆಳೆಯುತ್ತಾರೆ. ಕಾಯಿಗಳು ಬಲಿತಮೇಲೆ ಅವನ್ನು ಕೊಯ್ದು ಸಿಪ್ಪೆ ಸುಲಿದು ಅಡಕೆ ಯನ್ನು ನೀರಿನಲ್ಲಿ ಬೇಯಿಸುತ್ತಾರೆ. ಬಳಿಕ ಚೂರು ಚೂರಾಗಿ ಕತ್ತರಿಸಿ ಒಣಗಿಸಿ ಮಾರುತ್ತಾರೆ. ಅಡಕೆ ಮರವು ಬಹಳ ಕೆಲಸಕ್ಕೆ ಬರುತ್ತದೆ. ತಾಳಿನಿಂದ ಚಾವಣಿ ಚಪ್ಪರ ಮುಂತಾದುದನ್ನು ಕಟ್ಟುವುದಲ್ಲದೆ ನೀರುಹಾಯಿಸತಕ್ಕದೋಣಿಗಳನ್ನು ಮಾಡುವರು. ದಬ್ಬೆ ಬಹಳ ಉಪಯುಕ್ತವಾಗಿದೆ. ಹಾಳೆ ಊಟ ಮಾಡುವುದಕ್ಕೂ, ಪದಾರ್ಥಗಳನ್ನು ಕಟ್ಟುವುದಕ್ಕೂ ಆಗುವುದು ಗರಿಗಳನ್ನು ಗುಡಿಸಲು ಮುಂತಾದುದಕ್ಕೆ ಹೊದಿಸುವರು. ಅಡಕೆಯನ್ನು ಸುಣ್ಣ ಸವರಿದ ವೀಳೆಯದೆಲೆಯೊಡನೆ ಹಾಕಿಕೊಂಡು ಅಗಿವರು, ಇದು ಜೀರ್ಣಕಾರಿ. ಮದುವೆ ಮುಂಜಿ ಮೊದಲಾದ ಶುಭಕಾರ್ಯಗಳಲ್ಲಿಯೂ, ಶ್ರಾದ್ಧ ಮೊದ ಲಾದ ಅಶುಭಕಾರ್ಯಗಳಲ್ಲಿಯೂ ಮನೆಗೆ ಬಂದವರಿಗೆ ಮರ್ಯಾದಾರ್ಥವಾಗಿಯೂ ಎಲೆಯಡಕೆಯನ್ನು ಕೊಡುವುದು, ಹಿಂದೂ ಜನರಲ್ಲಿ ಪೂರ್ವಕಾಲದಿಂದಲೂ ವಾಡಿಕೆಯಾಗಿದೆ. ಅಡಕೆಯು ನಾಯಿಗೆ ಭೇದಿಯಷಧವು; ಹಾಲಿನಲ್ಲಿ ಅಡಕೆಯನ್ನು ತೇದು ಕೊಟ್ಟರೆ ಅದಕ್ಕೆ ಹೊಟ್ಟೆಯಲ್ಲಿ ಹುಳು ಸಾಯುವುದನ್ನು ವರು' ಅಡಕೆಯನ್ನು ಸುಟ್ಟು ಹಲ್ಲು ಪುಡಿ ಮಾಡುತ್ತಾರೆ. ಅಡಕೆ ಬೇಯಿಸಿದ ನೀರನ್ನು ಮರಕ್ಕೆ ವಾರ್ನಿ ಸಾಗಿಯೂ ಗಾಯಕ್ಕೆ ಮದ್ದಾಗಿಯೂ ಉಪಯೋಗಿಸುವರು. 8. ಮಾವಿನ ಮರ, ಮಾವಿನ ಮರವು ಇಂಡಿಯಾದಲ್ಲಿಯೂ ಏಷ್ಯಾ ಖಂಡದ ಪೂರ್ವದೇಶಗಳಲ್ಲಿಯೂ ಪೂರ್ವದ್ವೀಪ ಸ್ತೋಮದಲ್ಲಿಯೂ ಬೆಳೆಯುತ್ತದೆ. ಮಾವಿನ ಮರವು ನಾಲ್ವತ್ತು, ಐವತ್ತು ಅಡಿಗಳ ಎತ್ತರ ಬೆಳೆವುದು. ಕಸಿಯ ಗಿಡವು ಇಷ್ಟು ಎತ್ತರ ಬೆಳೆವುದಿಲ್ಲ. ಸಾಧಾರಣವಾಗಿ ಇಪ್ಪತ್ತಡಿ ಎತ್ತರದೊಳಗೆ ಇರುತ್ತದೆ. ಮರದ ಕೊಂಬೆಗಳು ನಾಲ್ಕು ಕಡೆಗೂ ಹರಡಿಕೊಳ್ಳುವುವು; ಆದರೆ ಬಲವಾದುವಲ್ಲ. ಇದು ಎಲೆಗಳಿಂದ ತುಂಬಿಕೊಂಡು
ಪುಟ:ಪ್ರಬಂಧಮಂಜರಿ.djvu/೭೭
ಈ ಪುಟವನ್ನು ಪರಿಶೀಲಿಸಲಾಗಿಲ್ಲ.