ܦܝܬ ಪ್ರಬಂಧಮಂಜರಿ-ಎರಡನೆಯ ಭಾಗ ಸ್ವಲ್ಪ ಬಿಳಿದಾಗಿದ್ದು ಆಮೇಲೆ ಹಸುರಾಗುತ್ತದೆ. ಎಲೆಗಳ ಕೆಳಭಾಗಗಳು ಒರೆಯಂತೆ ದಿಂಡನ್ನು ಮುಚ್ಚಿಕೊಂಡಿವೆ ಈ ಭಾಗಗಳಿಗೆ ಪಟ್ಟೆ ಗಳೆಂದು ಹೆಸರು. ಒಂದು ಗಿಡದಲ್ಲಿ ಒಂದು ಹೂವಿನ ಗೊಂಚಲು ಮಾತ್ರ ಬಿಡುವುದು. ಇದು ಊದಾ ಬಣ್ಣವಾಗಿರುವುದು. ಗೊಂಚಲಿನ ಹಿಂಭಾಗದಲ್ಲಿ ಚಿವ್ರಚಿಏಾಗಿ ಕಾಯಿಗಳಿರುವುವು. ಇವೆಲ್ಲಕ್ಕೂ ಗೊಲೆಯೆಂದು ಹೆಸರು ಒಂದು ಗೊಲೆಯಲ್ಲಿ ಹದಿನೈದರವರೆಗೆಚಿಪ್ಪುಗಳೂ ಒಂದುಚಿಪ್ಪಿನಲ್ಲಿ ಇಪ್ಪತ್ತರವರೆಗೆ ಕಾಯಿಗಳೂ ಇರುತ್ತವೆ ಕಾಯಿಗಳು ಉದ್ದವಾಗಿಯೂ ಹಸುರಾಗಿಯೂ ಗಟ್ಟಿಯಾಗಿಯೂ ಇರುವುವು. ಹಣ್ಣಾದಾಗ ಹೊಂಬಣ್ಣದಿಂದ ಕೂಡಿ ಮೆದುವಾಗುತ್ತವೆ. ಹಣ್ಣಿನ ಸಿಪ್ಪೆಯನ್ನು ಸುಲಭವಾಗಿ ಸುಲಿಯಬಹುದು, ಒಳಗೆ ಬಿಳಿದಾಗಿಯೂ ಸಿಹಿಯಾಗಿಯೂ ಇರುವತಿರುಳನ್ನು ಎಲ್ಲರೂ ತಿನ್ನು ವರು, ಬಾಳೆಗಿಡದ ಬುಡದಲ್ಲಿ ಗೆಡ್ಡೆಗಳು ಹೊರಡುವುವು. ಈ ಕಂದುಗಳು ಚಿಗುರಿ ಬೇರೆ ಬೇರೆ ಗಿಡಗಳಾಗುವುವು. ಬಾಳೆಯಲ್ಲಿ ನಾನಾ ಜಾತಿಗಳುಂಟು. ರಸಬಾಳೆ, ಕಾಡುಬಾಳೆ, ಬೂದುಬಾಳೆ, ರಾಜಬಾಳೆ, ಪಟ್ಟಬಾಳೆ, ಮದರಂಗಬಾಳೆ, ಏಲಕ್ಕಿ ಬಾಳೆ ಮುಂತಾದುವು. ಬಾಳೆಯನ್ನು ತೋಟಗಳಲ್ಲಿಯೂ ಗದ್ದೆಗಳಲ್ಲಿಯೂ ಹಾಕುತ್ತಾರೆ. ಭೂಮಿಯನ್ನು ಚೆನ್ನಾಗಿ ಉತ್ತು, ಸುಮಾರು ಎಂಟೆಂಟಡಿ ದೂರಕ್ಕೆ ಗುರಿ. ಡಿಗಳನ್ನು ತೋಡಿ, ಕಂದುಗಳನ್ನು ನೆಡುವರು. ಬಳಿಕ ಕ್ರಮವಾಗಿ ನೀರು ಕಟ್ಟಿ ಆಗಾಗ್ಗೆ ಕಳೆಕಿತ್ತು ಗೊಬ್ಬರ ಹಾಕಿ ಅಗತೆ ಮಾಡುವರು. ಸುಮಾರು ಒಂದು ವರ್ಷಕ್ಕೆ ಹೂಬಿಡುವುದು. ಹೂಬಿಟ್ಟ ನಾಲ್ಕು ತಿಂಗಳಿಗೆ ಕಾಯಿ ಚೆನ್ನಾಗಿ ಬಲಿವುದು, ಒಂದು ಗಿಡವು ಒಂದೇ ಗೊಲೆಯನ್ನು ಬಿಡುತ್ತದೆ, ಮತ್ತೆ ಫಲಿಸುವುದಿಲ್ಲ ಬಾಳೆಗಿಡದ ಪ್ರತಿಭಾಗವೂ ಇಂಡಿಯಾದೇಶದಲ್ಲಿ ಬಹಳ ಉಪಯೋಗಕರವಾಗಿದೆ ಇದರ ಎಲೆಯನ್ನು ಊಟಕ್ಕೆ ಉಪಯೋಗಿಸುವರು. ಸುಟ್ಟ ಗಾಯಗಳಿಗೆ ಎಳೆಯೆಲೆಯನ್ನು ಕಟ್ಟುವುದುಂಟು. ತರಗಿನಿಂದ ದೊನ್ನೆ ಹಚ್ಚುವರು ದಿಂಡು ಮತ್ತು ಹೂಗಳಿಂದ ಪಲ್ಯ ಮೊದಲಾದುವನ್ನೂ ಬಾಳೆ ಪಟ್ಟೆ - ಗಳಿಂದ ಊಟದ ಎಲೆಗಳನ್ನೂ ಮಾಡುವರು. ಪಟ್ಟೆಯು ಆನೆಗೆ ಒಳ್ಳೆಯ
ಪುಟ:ಪ್ರಬಂಧಮಂಜರಿ.djvu/೮೦
ಈ ಪುಟವನ್ನು ಪರಿಶೀಲಿಸಲಾಗಿಲ್ಲ.