ಆಲದ ಮರ L8 II: ಆಲದ ಮರ. ಆಲದಮರವು ಇಂಡಿಯಾ ದೇಶದಲ್ಲಿ ಮಾತ್ರ ದೊರೆವುದು. ಇದು ಅತ್ಯಂತ ಶ್ರೇಷ್ಠವಾಗಿಯೂ ದೊಡ್ಡದಾಗಿಯೂ ಆಶ್ಚರ್ಯಕರವಾಗಿಯೂ ಇರುವ ವೃಕ್ಷಗಳಲ್ಲಿ ಒಂದಾಗಿದೆ. ಇದು ಎಪ್ಪತ್ತರಿಂದ ನೂರಡಿಗಳ ವರೆಗೆ ಎತ ರವಾಗುತ್ತದೆ. ಇದು ಒಂದು ಶತಮಾನದಮೇಲೆ ಜೀವಿಸುತ್ತದೆ. ಇದರ ಎಲೆ ಒಂದಡಿ ಉದ್ದವೂ ಅರ್ಧ ಅಡಿ ಅಗಲವೂ ಆಗುವುದುಂಟು. ಇದರ ಹಣ್ಣು ಸಣ್ಣಗೆ ಕೆಂಪಾಗಿರುವುದು, ಹಣ್ಣಿನೊಳಗೆ ರಾಗಿಕಾಳಿಗಿಂತ ಸಣ್ಣ ಬೀಜಗಳಿರುತ್ತವೆ. ಆಲದ ಮರಕ್ಕೆ ಬಹಳ ಕೊಂಬೆಗಳುಂಟು. ಇವು ಬಲು ಉದ್ದವಾಗಿ ಎಲ್ಲಾ ದಿಕ್ಕುಗಳಿಗೂ ಹರಡಿಕೊಳ್ಳುತ್ತವೆ. ಸುಮಾರು ಇಪ್ಪತ್ತು ವರ್ಷಗಳಾದಮೇಲೆ ಇದರ ಕೊಂಬೆಗಳಿಂದ ಬೀಳಲು ಇಳಿಯುವುದು ; ನೆಲವನ್ನು ಮುಟ್ಟಿದಾಗ ಒಂದೊಂದು ಬೀಳಲೂ ಬೇರು ಬಿಟ್ಟುಕೊಂಡು ಇನ್ನೊಂದು ಮರವಾಗಿ ಮೇಲಿನ ಕೊಂಬೆಗೆ ಆಧಾರವಾಗುತ್ತದೆ. ಬಳಿಕ ಆ ಕೊಂಬೆಯು ಬೀಳಲಮೇಲೆ ಒರಗಿಕೊಂಡು ಮುಂದುಮುಂದಕ್ಕೆ ಹರಡಿಕೊಳ್ಳುತ್ತದೆ. ಹೀಗೆ ಮರವು ದೊಡ್ಡದಾಗುತ್ತ ಬಂದು, ಭೂಮಿಯ ಬಹಳ ಭಾಗವನ್ನು ಆಕ್ರಮಿಸಿಕೊಳ್ಳುವುದು. ಒಂದು ಅತಿಮಹತ್ತಾದ ಆಲದ ಮರದ ಕೆಳಗೆ ಸಾವಿರಾರು ಜನರು ನಿಲ್ಲಬಹುದು; ಅದಕ್ಕೆ ಸಾವಿರಾರು ಬೀಳಲು ಗಳುಂಟು, ಬೀಳಲುಗಳೊಡನೆ ಕೂಡಿದ ದೊಡ್ಡ ಆಲದ ಮರವು ಪ್ರಾಯಶಃ ಒಂದು ತೋಪಿನ ಹಾಗೆ ಕಾಣಿಸುತ್ತದೆಯೇ ಹೊರತು ಒಂದು ಮರದಂತೆ ಕಾಣಿಸುವುದಿಲ್ಲ. ಕೆಲವರಿಗೆ ಆಲದ ಮರವು ಒಂದು ಗುಡಿ ಯಂತೆಯೂ ಅದರ ಬೀಳಲುಗಳು ಕಂಭಗಳ ಹಾಗೂ ತೋರುತ್ತದೆ. ಆಲದ ಮರವನ್ನು ಸಾಧಾರಣವಾಗಿ ತೋಪಿನಲ್ಲಿ ಬೆಳೆಸು ವದುಂಟು. ತೋಟಗಳಲ್ಲಿ ಬೆಳೆಸುವುದಿಲ್ಲ. ರಸ್ತೆಯ ಪಕ್ಕಗಳಲ್ಲಿ ಸರಕಾರದವರು ನೆರಳಿಗಾಗಿ ಬೆಳೆಸುತ್ತಾರೆ. ಈ ಮರವನ್ನು ಬಹಳ ಸುಲಭವಾಗಿ ಬೆಳೆಸಬಹುದು ಇದರ ಬೀಜವನ್ನು ಎಲ್ಲಿ ಬೇಕಾದರೂ ಪಾತಿಮಾಡಿ ಹಾಕಿದರೆ ಸಸಿಯಾಗುಇದೆ. ಇದು ತಡವಾಗುವುದರಿಂದ ಕೊಂಬೆಗಳನ್ನು ಕಡಿದುಕೊಂಡು ಸ್ವಲ್ಪ ಸ್ವಲ್ಪ ದೂರದಲ್ಲಿ ನಡುತ್ತಾರೆ. ಅವು ಚಿಗುರಿ ಬೆಳೆದು ಶೀಘ್ರದಲ್ಲಿಯೇ ಮರಗಳಾಗುತ್ತವೆ.
ಪುಟ:ಪ್ರಬಂಧಮಂಜರಿ.djvu/೮೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.