೬೮ ಪ್ರಬಂಧಮಂಜರಿ-ಎರಡನೆಯ ಭಾಗ ಔಷಧಕ್ಕೆ ಉಪಯೋಗಿಸುತ್ತಾರೆ. ದೇವಸ್ಥಾನಗಳಲ್ಲಿಯೂ ಹಣವಂತರ ಮನೆಗಳಲ್ಲಿಯೂ ಬೆಳ್ಳಿಯ ಪಾತ್ರೆಗಳನ್ನು ವಿಶೇಷ ಬಳಸುವರು. ಬೆಳ್ಳಿ ಸೇರಿ ರುವ ಒಂದು ವಸ್ತುವನ್ನು ಭಾವಚಿತ್ರ ತೆಗೆವುದರಲ್ಲಿಯೂ, ಅಳಿಸಿ ಹೋಗದಿ ರುವ ಮಸಿ, ಕೂದಲಿಗೆ ಕಪ್ಪು ರಂಗು ಇವುಗಳನ್ನು ಮಾಡುವುದರಲ್ಲಿಯೂ ಹೆಚ್ಚಾಗಿ ಉಪಯೋಗಿಸುವರು. ಬೆಳ್ಳಿ ಕರಗಿರುವ ನೀರನ್ನೇ ಆಸ್ಪತ್ರೆಗಳಲ್ಲಿ ಕಣೋವಿಗೆ ಹಾಕುವರು. 13. ಕಬ್ಬಿಣ, ಕಬ್ಬಿಣವು ನಿಜರೂಪದಲ್ಲಿ ಸಿಕ್ಕುವುದು ಅಪೂರ್ವ ಬಳಕೆಯ ಕಬ್ಬಿಣವು ಅದು ರುಗಳಿಂದ ತೆಗೆದುದು, ಕಬ್ಬಿಣದ ಅದುರು ಸಾಮಾನ್ಯವಾಗಿ ನಾಲ್ಕು ಬಗೆಯೆಂದು ಹೇಳಬಹುದು. ಅವು ಯಾವುವೆಂದರೆ:-ಅಯಸ್ಕಾಂತ, ಕೆಂಪು ಬಣ್ಣದ ಕಬ್ಬಿಣ, ಕಂದುಬಣ್ಣದ್ದು, ಕರಿಯಬಣ್ಣದ್ದು. ಇದರ ಅದುರು ಯೂರೋಪಿನಲ್ಲಿ ನಾರ್ವೆ, ಸ್ವೀಡನ್, ರಷ್ಯಾ, ಇಂಗ್ಲೆಂಡ್, ವೇಲ್ಸ್, ಸ್ವಾಟೈಂಡ್, ಬೆಲ್ಸಿಯಮ್, ಈ ದೇಶಗಳಲ್ಲಿಯೂ; ಉತ್ತರ ಅಮೆರಿಕದಲ್ಲಿಯೂ; ಹಿಂದೂದೇಶದಲ್ಲಿ ಹೈದರಾಬಾದ್, ಮಧ್ಯಪ್ರಾಂತ್ಯಗಳು, ಬೊಂಬಾಯಿ, ರಾಜಪಟಾನ, ಬಂಗಾಳ, ಆಸಾಂ, ಮದ್ರಾಸು ಪ್ರಾಂತ್ಯಗಳಲ್ಲಿಯೂ ಹೇರಳವಾಗಿ ದೊರೆವುದು. ಮೈಸೂರು ಸೀಮೆಯಲ್ಲಿ ಮಿತವಾಗಿ ಸಿಕ್ಕುವುದು. * ಕಬ್ಬಿಣದ ಅದುರನ್ನು ಕುಲಿಮೆಗೆ ಹಾಕಿ ಚೆನ್ನಾಗಿ ಕರಗಿಸಿ ಯಂತ್ರಗಳ ಸಹಾಯದಿಂದ ಕಲ್ಯ ಷಗಳನ್ನು ವಿಂಗಡಿಸಿ ಗಟ್ಟಿಗಳನ್ನು ಮಾಡುವರು ಇದಕ್ಕೆ ಎರಕದ ಕಬ್ಬಿಣವೆಂದು ಹೆಸರು. ಎರಕದ ಕಬ್ಬಿಣದ ಗಟ್ಟಿಗಳನ್ನು ಒಲೆಯಮೇಲಿಟ್ಟು , ಬಹಳಹೆಚ್ಚಾಗಿಉರಿಹಾಕುವುದರಿಂದ, ಆಗಟ್ಟಿಗಳಲ್ಲಿರುವ ಇಂಗಾಲವೆಲ್ಲ ಸುಟ್ಟು ಹೋಗಿ ಕಬ್ಬಿಣವ್ರ ಮೃದುವಾಗುತ್ತದೆ. ಈ ತರದ ಕಬ್ಬಿಣಕ್ಕೆ ನಾಡುಕಬ್ಬಿಣವೆಂದು ಹೆಸರು. ಅಚ್ಚ ಇದ್ದಲಿಗೂ ಕಬ್ಬಿಣಕ್ಕೂ ಸಂಯೋಗವುಂಟುಮಾಡಿದರೆ, ಮತ್ತೊಂದು ವಸ್ತು ದೊರೆವುದು. ಇದನ್ನು ಉಕ್ಕೆ ನ್ನು ವರು. ಇಂಗ್ಲೆಂಡಿನಲ್ಲಿ ಕಬ್ಬಿಣವನ್ನು ಮಾಡುವಂತೆ ಇಂಡಿಯಾದಲ್ಲಿಯೂ ರಾಡುವುದಕ್ಕೆ ಹಲವು ಬಾರಿ ಪ್ರಯತ್ನ ಪಟ್ಟರು; ಆದರೆ ಆ ಪ್ರಯತ್ನ ಗಳೆಲ್ಲ ಪ್ರಲಗಳಾಗಿ ಪರಿಣಮಿಸಿದುವು; ಏಕೆಂದರೆ, ಮೇಲೆ ಸೂಚಿಸಿದಂತೆ, ಅದುಗಳಿಂದ ಕಬ್ಬಿಣವನ್ನು ವಿಂಗಡಿಸಬೇಕಾದರೆ ಅನೇಕ ಯಂತ್ರಗಳ ಸಹಾಯ
ಪುಟ:ಪ್ರಬಂಧಮಂಜರಿ.djvu/೮೬
ಈ ಪುಟವನ್ನು ಪರಿಶೀಲಿಸಲಾಗಿಲ್ಲ.