ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರಥನು ಮುದ್ರಣದ ಪೀಠಿಕೆ, ಮೈಸೂರು ದೇಶೀಯ ಪರೀಕ್ಷೆಗಳಿಗೆ ಗೊತ್ತು ಮಾಡಿರುವ ಮುಖ್ಯ ವಿಷಯಗಳಲ್ಲಿ ಪ್ರಬಂಧರಚನೆಯೊಂದಾಗಿದೆ. ಯನಿವರ್ಸಿಟಿ ಪರೀಕ್ಷೆಗಳಿಗೆ ಹೋಗುವ ವಿದ್ಯಾರ್ಥಿಗಳು ಇಂಗ್ಲಿಷಿನಲ್ಲಿ ಪ್ರಬಂಧಗಳನ್ನು ಹೇಗೆ ಬರೆಯಬೇಕಾಗಿರುವುದೋ, ಹಲಗೆಯ ಮೈಸೂರು ದೇಶೀಯ ಪರೀಕ್ಷೆಗಳಲ್ಲಿ ಯ ಕನ್ನಡದಲ್ಲಿ ಪ್ರಬಂಧವನ್ನು ಬರೆವಂತೆ ಕೇಳುತ್ತಾರೆ. ಇಂಗ್ಲಿಷಿನಲ್ಲಿ ಪ್ರಬಂಧರಚನೆಯನ್ನು ಬೋಧಿಸುವ ಪುಸ್ತಕಗಳು ಲೆಕ್ಕವಿಲ್ಲದಷ್ಟು ಇವೆ; ಆದರೆ ಹುಡುಗರಿಗೆ ಕನ್ನಡದಲ್ಲಿ ಪ್ರಬಂಧರಚನೆಯನ್ನು ಕಲಿಸುವ ಒಂದು ಪುಸ್ತಕವಾದರೂ ಇರುವಂತೆ ಕಾಣುವುದಿಲ್ಲ. ಈ ಕುಂದನ್ನು ಸ್ವಲ್ಪ ಮಟ್ಟಿಗೆ ಹೋಗಲಾಡಿಸಿ, ವಿಧಿ ಮತ್ತು ಉದಾಹರಣೆಗಳ ಮೂಲಕ ಬಾಲಕರಿಗೆ ಹೊಸಗನ್ನಡದಲ್ಲಿ ಪ್ರಬಂಧರಚನೆಯನ್ನು ಕಲಿಸಿಕೊಡುವುದಕ್ಕಾಗಿ ಈ ಪುಸ್ತಕವನ್ನು ಬರದಿದೆ. ಈ ಗ್ರಂಥವು ಎರಡು ಭಾಗಗಳಾಗಿದೆ. ಮೊದಲನೆಯ ಭಾಗವು ಹೊಸ ವಿಷಯಗಳನ್ನೊಳ. ಗೊಂಡಿದೆ. ಇದರಲ್ಲಿ ಭಾಷಾಶೈಲಿಯ ಸ್ವರೂಪವನ್ನೂ ಅದರ ಗುಣದೋಷಗಳನ್ನೂ ಸಂಕ್ಷೇಪ. ವಾಗಿ ವಿವರಿಸಿದೆ ಈಗಿನ ಕನ್ನಡದ ಬರವಣಿಗೆಯು ಸ್ವಲ್ಪವಾದರೂ ಒಂದೇ ವಿಧವಾಗಿಲ್ಲದಿರುವುದು ಬಲು ಬಾಧಕವಾಗಿದೆ. ಸಾಮಾನ್ಯ ಶಬ್ದ ಗಳನ್ನೂ ಬಗೆಬಗೆಯಾಗಿ ಮನಸ್ಸಿಗೆ ಬಂದಂತೆ ಬರೆಯುತಿರುವರು. ಕೆಲವು ವಿದ್ಯಾವಂತರೂ ಕೂಡ ಕನ್ನಡಮಾತುಗಳನ್ನು ತಪ್ಪಿಲ್ಲದೆ ಬರೆಯಲು ಯತ್ನಿಸುವುದೇ ಇಲ್ಲ ; ಇಂಗ್ಲಿಷನ್ನು ಬರೆದಾಗ ಮಾತ್ರ ಅಕ್ಷರಸಂಯೋಜನದಲ್ಲಿ ತಪ್ಪು ಮಾಡದಂತ ಎಚ್ಚರಿಕೆಯಿಂದಿರುವರು. ಇದಲ್ಲದೆ, ಅಚ್ಚಗನ್ನಡದ ಮಾತುಗಳನ್ನು ಬಿಟ್ಟು, ಅನ್ಯ - ದೇಶ್ಯ ಶಬ್ದಗಳನ್ನೂ ಸಂಸ್ಕೃತಶಬ್ದ ಗಳನ್ನೂ ಬೇಡವಾದ ಕಡೆಯಲ್ಲಿಯ ಬೇಕೆಂದು ಪ್ರಯೋಗಿಸುವುದು; ಆತಿದೀರ್ಘವಾದ ವಾಕ್ಯಗಳನ್ನು ಬರೆವುದು ಕನ್ನಡದ ಮರ್ಯಾದೆಯನ್ನು ಬಿಟ್ಟು, ಇಂಗ್ಲಿಷ್ ಪದ್ಧತಿಯನ್ನನುಸರಿಸಿ ಬರೆವುದು; ಇವು ಮೊದಲಾದ ತಪ್ಪುಗಳನ್ನು ವಾಕ್ಯ ರಚನೆಯಲ್ಲಿ ಮಾಡದಂತೆ ವಿದ್ಯಾರ್ಥಿಗಳಿಗೆ ತಕ್ಕಮಟ್ಟಿಗೆ ಎಚ್ಚರಕೊಟ್ಟಿದೆ. ವಾಕ್ಯ, ವಾಕ್ಯವೃಂದ ಇವುಗಳ ರಚನೆಗೆ ಸಂಬಂಧಿಸಿದ ಸಾಮಾನ್ಯವಿಧಿಗಳನ್ನು ಸಂಕ್ಷೇಪವಾಗಿ ವಿವರಿಸಿದೆ, ಅರ್ಥವು ಸುಲಭವಾಗಿ ತಿಳಿಯಲು ಇಂಗ್ಲಿಷಿನಲ್ಲಿ ಉಪಯೋಗಿಸುವ ಚಿಹ್ನೆ ಗಳು ಕನ್ನಡಕ್ಕೂ ಬಂದಿವೆಯಷ್ಟೆ:-ಇವು