ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಉಪ್ಪು, ದೇಶದಲ್ಲಿ ಹಿತ್ತಾಳೆಯನ್ನು ಉಪಯೋಗಿಸುವಷ್ಟು ಮತ್ಯಾವ ಸೀಮೆಯಲ್ಲೂ ಇಲ್ಲ. ಹಿಂದೂಗಳು ಪ್ರತಿನಿತ್ಯವೂ ಬಳಸುವ ಕೊಡ, ತಪ್ಪಲೆ,ಚೆಂಬು, ಕೊಳ್ಳಗತಪ್ಪಲೆ ಮೊದಲಾದ ಪಾತ್ರೆಗಳೆಲ್ಲಾ ಹಿತ್ತಾಳೆಯವು. ದೀವಿಗೆ, ದೀಪದ ಕಂಬ, ಬೀಗ, ಬೀಗದ ಕೈ, ಸರಪಣಿ, ಗಡಿಯಾರದ ಚಕ್ರ, ಗುಂಡಿ, ಮೊಳೆ ಇವು ಮೊದಲಾದ ಹಲವು ವಸ್ತುಗಳನ್ನೂ ಹಿತ್ತಾಳೆಯಿಂದಲೇ ಮಾಡುವರು. ಹಿತ್ತಾಳೆಯತಂತಿಯ ಮೇಲೆ ತವರದಮುಲಾಮು ಮಾಡುವುದರಿಂದ ಕಾಗದಕ್ಕೆ ಚುಚ್ಚುವ ಗುಂಡುಸೂಜಿಗಳಾಗುವುವು. ಬೊಂಬಾಯಿ ಆಧಿಪತ್ಯದ ಹುಬ್ಬಳ್ಳಿಯಲ್ಲಿ ವಿಶೇಷವಾಗಿ ಹಿತ್ತಾಳೆಯ ಪಾತ್ರೆಗಳನ್ನು ಮಾಡುವರು. ಇವು ಬಲು ಮೇಲಾದುವೆಂದು ಹೆಸರುಗೊಂಡಿವೆ. 16, ಉಪ್ಪು, ಉಪಸಮುದ್ರದ ನೀರಿನಲ್ಲಭೂಮಿಯೊಳಗೂ ಧಾರಾಳವಾಗಿಸಿದ್ದು, ವುದು. ಖನಿಜಗಳಲ್ಲಿ ಉಿಂದ ಜನರು ಆಹಾರವಾಗಿ ಉಪಯೋಗಿಸುವರು. ಹರಳು ಹರಳಾಗಿಯೂ ಬೆಳ್ಳಗೂ ಇರುವ ಈ ವಸ್ತುವನ್ನು ಎಲ್ಲರೂ ಬಲ್ಲರು. ಇದಿಲ್ಲದಿರುವ ಮನೆಯೇ ಇಲ್ಲ. ಇಂಡಿಯಾ ದೇಶದಲ್ಲಿ ಸಮುದ್ರದ ಉಪ್ಪು, ಬಂಡೆಗಳಲ್ಲಿ ದೊರೆವ ಉಪ್ಪು, ಜೋಗು ಪ್ರದೇಶದ ಉಪ್ಪು, ಮಣ್ಣಿನಿಂದ ಮಾಡಿದ ಚಾಳುಪ್ಪು ಎಂದು ನಾಲ್ಕು ವಿಧವಾದ ಉಪ್ಪುದೊರೆವುದು, ಉಪ್ಪಿನ ಗಣಿಗಳು ಇಂಗ್ಲೆಂಡಿನ ಚಪೈರಿನಲ್ಲೂ, ಫ್ರಾನ್ಸ್, ಹಂಗೆರಿ, ಪೋಲೆಂಡ್, ಪ್ರಷ್ಯಾ, ಜರ್ಮನಿ ದೇಶಗಳಲ್ಲಿಯೂ ಇರುವುವು. ಆಫ್ರಿಕಾ ಖಂಡಡ ಸಹಾರಾ ಮರಳುಕಾಡಿನಲ್ಲಿ ಉಪ್ಪಿನ ಪ್ರದೇಶಗಳಿವೆ. ಇಂಡಿಯಾ ದೇಶದ ಪಂಜಾಬಿನಲ್ಲಿ ಉಪ್ಪಿನ ಬೆಟ್ಟವೂ ಉಪ್ಪಿನ ಪ್ರದೇಶಗಳೂ ಇರುವುವು. ಇಲ್ಲಿಯ ಸಮುದ್ರತೀರದ ಅನೇಕ ಸ್ಥಳಗಳಲ್ಲಿ ಸಮುದ್ರದ ನೀರಿನಿಂದಲೂ, ರಾಜಪುಟಾನ ದೇಶದ ಸಾಂಬರ್ ಮೊದಲಾದ ದೊಡ್ಡ ಸರೋವರಗಳನೀರಿನಿಂದಲೂ, ಗುಜರಾತಿನಲ್ಲಿ ಕೆಲವು ಭಾವಿಗಳ ನೀರಿನಿಂದಲೂ ಉಪ್ಪುಮಾಡುವರು, ಪಂಜಾಬಿಗೆ ಸೇರಿದ ಬೆಟ್ಟದ ಉಪ್ಪು ಅತ್ಯಂತ ನಿರ್ಮಲವಾದುದು. ಲೋಹಗಳನ್ನು ಗಣಿಗಳಿಂದ ತೆಗೆವಂತೆಯೇ ಉಪ್ಪನ್ನೂ ಅಗೆದು ತೆಗೆಯುತ್ತಾರೆ, ಹೀಗೆ ತೆಗೆದ ಉಪ್ಪನ್ನು ಕಲ್ಲು 4ಎನ್ನುವರು. ಇದು ಬಂಡೆಗಳ