ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೭೪ ಪ್ರಬಂಧಮಂಜರಿ– ಎರಡನೆಯ ಭಾಗ ಹಾಗೆ ಭೂಮಿಯೊಳಗೆ ಮಣ್ಣು ಮುಂತಾದ ಕಲ್ಮಲಗಳೊಂದಿಗೆಸೇರಿರುತ್ತದೆ. ಇದನ್ನು ತುಂಡುತುಂಡಾಗಿ ಕತ್ತರಿಸಿ ನೀರಿನಲ್ಲಿ ಕರಗಿಸಿ, ಆ ಉಪ್ಪುನೀರನ್ನು ಯಂತ್ರದಿಂದ ಮೇಲಕ್ಕೆತ್ತಿ ಪಾತ್ರೆಗಳಲ್ಲಿ ಹಾಕಿ ಕಾಯಿಸಿ ಶೋಧಿಸುತ್ತಾರೆ. ಇದರಿಂದ ಕಲ್ಮಲಗಳು ಬೇರ್ಪಡುತ್ತವೆ. ಬಳಿಕ ಆ ನೀರನ್ನು ದೊಡ್ಡ ಪಾತ್ರೆಗಳಲ್ಲಿ ಕುದಿಸಿದರೆ ನೀರೆಲ್ಲಾ ಆವಿಯಾಗಿ ಹೋಗಿ ಶುದ್ಧವಾದ ಉ ಪ್ಪ ತಳದಲ್ಲಿ ಉಳಿವುದು, ಸಮುದ್ರತೀರದ ಸರಿಯಾದ ಸ್ಥಳದಲ್ಲಿ ಆಳವಿಲ್ಲದ ದೊಡ್ಡ ಪಾತೆಗಳನ್ನು ಮಾಡಿ, ಅವುಗಳಿಗೆ ಸಮುದ್ರದ ನೀರನ್ನು ಹಾಯಿಸುತ್ತಾರೆ. ಈ ನೀರು ಬಿಸಿಲಿಂದ ಇಂಗಿಹೋಗಿ ತಳದಲ್ಲಿ ಉಪ್ಪು ನಿಲ್ಲುತ್ತದೆ. ಕೆಲವು ಕಡೆ ಉಪ್ಪುನೀರಿನ ಚಿಲುಮೆಗಳಿವೆ. ಇವುಗಳ ನೀರಿನಿಂದಲೂ ಹೀಗೆಯೇ ಉಪ್ಪನ್ನು ಪಡೆವುದುಂಟು. ಮಣ್ಣಿನಿಂದ ಉಪ್ಪನ್ನು ಮಾಡುವಾಗ, ಮೊದಲು ಚೌಳುಮಣ್ಣನ್ನು ನೀರಿನಲ್ಲಿ ನೆನೆಯಿಸಿ, ಆ ನೀರೆಲ್ಲಾ ಒಂದು ಕೆರೆಗೆ ಹರಿವಂತೆ ಮಾಡಿ, ಅಲ್ಲಿಂದ ಸಣ್ಣ ಕೊಳಗಳಿಗೆ ಬಿಟ್ಟು ನೀರನ್ನು ಇಂಗಿಸಿ ಉಪ್ಪನ್ನು ತೆಗೆವರು. ಉಪ್ಪಿನ ಆವಶ್ಯಕತೆ ಅಷ್ಟಿಷ್ಟೆನ್ನಲು ಸಾಧ್ಯವಲ್ಲ. ಉಪ್ಪರಿಗೆ ಮನೆಯವನಾದರೂ ಉಪ್ಪಿಲ್ಲದೆ ಆಗದು ಎಂಬಂತೆ ಎಷ್ಟು ದೊಡ್ಡ ಹಣಗಾರರಾದರೂ ಉಪ್ಪಿಲ್ಲದೆ ಬದುಕಲಾರರು. ಮನುಷ್ಯರಿಗೂ ದನಕರುಗಳಿಗೂ ಉಪ್ಪುಆಹಾರದೊಡನೆ ಸೇರಬೇಕು. ಇದು ನಮ್ಮ ಆಹಾರಕ್ಕೆ ರುಚಿಕೊಡುಇದೆ. ನಮ್ಮ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದುದು, ಉಪ್ಪು ಒಳ್ಳೆಯ ಜೀರ್ಣಕಾರಿ.ತಕ್ಕಷ್ಟು ಉಪ್ಪನ್ನು ತಿನ್ನದಿದ್ದರೆ ದೇಹದಲ್ಲಿ ಮಾಂಸವು ಕ್ಷೀಣವಾಗುವುದು, ಹೆಚ್ಚಾಗಿ ತಿಂದರೆ ಮಾಂಸವು ದುರ್ಬಲವಾಗಿಕೊಹೆಚ್ಚುವುದು. ಹಡಗಿನಲ್ಲಿ ಪ್ರಯಾಣಮಾಡುವಾಗ ಆಹಾರಕ್ಕೆ ಮಾಂಸವು ಆಗಾಗ್ಗೆ ದೊರೆವುದಿಲ್ಲ. ಆದುದರಿಂದ ಉಪ್ಪು ಸವರಿದ ಮಾಂಸವು ಬಹುಕಾಲ ಕೆಡದಿರುವುದರಿಂದ ಇದನ್ನು ಜತೆಯಲ್ಲಿ ತೆಗೆದುಕೊಂಡು ಹೋಗಿ ಬಹಳ ದಿನಗಳ ವರೆಗೆ ಉಪಯೋಗಿಸುವರು. ನಿಂಬೆಕಾಯಿ, ಮಾವಿನಕಾಯಿ ಮೊದಲಾದುವು ಉಪ್ಪಿನ ಸಂಸರ್ಗದಿಂದಲೇ ವರ್ಷಾಂತರಗಳ ವರೆಗೆ ಹುಳು ಬೀಳದೆ ಇರುತ್ತವೆ. ಉಪ್ಪನ್ನು ಗೊಬ್ಬರವಾಗಿಯೂ ಹಾಕುವುದುಂಟು; ಬಹಳ ಹೆಚ್ಚಾಗಿ ಹಾಕಿದರೆ ಗಿಡಗಳು ಸತ್ತು ಹೋಗುವುವು, ಉಪ್ಪನ್ನು