ಈ ಪುಟವನ್ನು ಪ್ರಕಟಿಸಲಾಗಿದೆ
ಪೌರಾಣಿಕವೊ, ಕಲೋಚಿತವೊ?

ಭಾರತಗಳು ಕಾವ್ಯಗಳು, ಎಪಿಕ್‌ಗಳು, ಪುರಾಣ ವಸ್ತು-ಯಕ್ಷಗಾನ ಕಲೆ ಈ ಸಂಬಂಧವು, ಅಷ್ಟರಲ್ಲೆ ಬಿದ್ದು ಹೋಗುತ್ತದೆ. ಎಂತಿದ್ದರೂ ಭಾರತ, ರಾಮಾಯಣ ಗಳು ಒಂದು ರೀತಿಯಿಂದ ಪೌರಾಣಿಕ ಪರಂಪರೆಗೆ ಸೇರಿ ಹೋಗಿವೆ. ಅವು ಪುರಾಣ ಗಳೆಂದೇ ಸಾಮಾನ್ಯ ಗ್ರಹಿಕೆ-ಎಂದು ಇಲ್ಲಿ ಪ್ರತಿವಾದ. ಇದನ್ನು ಒಪ್ಪಿಕೊಂಡರೂ ಪುರಾಣ ಎಂಬ ಶಬ್ದವು ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತ ಬಂದಿದೆ. ಪುರಾಣೇತರವು ಪುರಾಣವೆಂಬುದರಲ್ಲಿ ಸೇರಿಕೊಂಡಿದೆ ಎಂದಹಾಗಾಯಿತಷ್ಟೆ? ಹಾಗಾದರೂ ಸರಿಯೇ. ಪೌರಾಣಿಕವೆಂಬುದು ಇನ್ನಷ್ಟು ಸೇರ್ಪಡೆಗಳನ್ನು ಸ್ವೀಕರಿ ಸುತ್ತದೆ ಎಂದಾಯಿತು. ಇರಲಿ.

ಯಕ್ಷಗಾನ ಪ್ರದರ್ಶನ ಪರಂಪರೆಯಲ್ಲಿ ಪೌರಾಣಿಕ ಕಥೆಗಳು ಪ್ರಮುಖ ಸ್ಥಾನ ಗಳಿಸಿವೆ ಎಂಬುದು ನಿಜ. ಆದರೆ, ಒಂದು ಪ್ರಸಂಗವು ಪೌರಾಣಿಕ ವಸ್ತುವಿ ನದ್ದು ಎಂಬಷ್ಟರಿಂದಲೇ ಅದರ ಪ್ರದರ್ಶನವು ಸಾಂಪ್ರದಾಯಿಕವಾಗಿದೆ ಎಂದು ಹೇಳುವಂತಿಲ್ಲ. ಉದಾಹರಣೆಗೆ ನಳದಮಯಂತಿ ಪ್ರಸಂಗವನ್ನು ತೆಗೆದುಕೊಳ್ಳ ಬಹುದು. ಇದು ಪ್ರಸಿದ್ಧವಾದೊಂದು ಹಳೆಯ ಪ್ರಸಂಗ. ಆದರೆ ಅದರ ಪ್ರದರ್ಶನ ಸ್ವರೂಪದಲ್ಲಿ ಅದು ಯಕ್ಷಗಾನೀಯ ಮತ್ತು ಅರ್ವಾಚೀನ ನಾಟಕೀಯ ಪದ್ಧತಿಗಳ ಮಿಶ್ರಣವಾಗಿದೆ. ವನವಾಸದ ನಳ, ದಮಯಂತಿಯರ, ಆ ಬಳಿಕ ಬಾಹುಕನ ವೇಷ ವಿಧಾನಗಳಲ್ಲಿ ಗೊಂದಲವಿದೆ. ಇಂತಹದೇ ತೊಂದರೆಗಳನ್ನು ಬೇರೆ ಪ್ರಸಂಗಗಳ ಪ್ರದರ್ಶನಗಳಲ್ಲೂ ಕಾಣಬಹುದು. ಎಂದರೆ, ಇಲ್ಲಿ ಗಮನಿಸಬೇಕಾದದ್ದು, ಪ್ರಸಂಗ ಎಂಬುದು ಒಂದು ಹಂತ, ಅದರ ಪ್ರದರ್ಶನವೆಂಬುದು ಇನ್ನೊಂದು “ಪರಂಪರೆ”, “ಶೈಲಿ”, “ಸಂಪ್ರದಾಯಗಳು ಮುಖ್ಯವಾಗುವುದು ಪ್ರದರ್ಶನದಲ್ಲೆ ಹೊರತು ಪ್ರಸಂಗದಲ್ಲಿ ಅಲ್ಲ. ಪೌರಾಣಿಕ ಪ್ರಸಂಗದ ಪ್ರದರ್ಶನ, ಅರ್ಥಾತ್ ಯಕ್ಷಗಾನ ಪರಂಪರೆಗೆ ಅನುಗುಣ. ಯಕ್ಷಗಾನ ಅಂದರೆ ಪುರಾಣ ವಸ್ತು ಎಂಬ ಸರಳ ಸಮೀ ಕರಣವೇ ತಪ್ಪು.

ಪುರಾಣೇತರ ವಸ್ತುವಿನ ಪ್ರಸಂಗಳು ಬಹು ಹಿಂದೆಯೇ ರಂಗಕ್ಕೆ ಬಂದು, ಕಲಾ ಸಂಪ್ರದಾಯ ಸಮ್ಮತವಾಗಿ ಪ್ರದರ್ಶನಗೊಂಡಿವೆ. “ರತ್ನಾವತಿ ಕಲ್ಯಾಣ” ಇದು ಪ್ರಸಿದ್ಧ ದೃಷ್ಟಾಂತ. ಇದರ ಕಥೆ, ಪುರಾಣದ್ದಲ್ಲ. ಬೃಹತ್ಕಥೆಯಿದು. ಭಾಸವತಿ, ಪ್ರತಾಪನ ಸಾಹಸ, ನಾಗಶ್ರೀ, ಗುಣ ಸುಂದರಿ ಇವು ಇದೇ ರೀತಿಯಲ್ಲಿ ಭಿನ್ನ ಭಿನ್ನ ಮೂಲಗಳಿಂದ ಬಂದಿರುವ ಕಥೆಗಳು. ಇವುಗಳನ್ನು ಯಕ್ಷಗಾನ ಕಲಾ ರೂಪಕ್ಕೆ ಸಲೀಸಾಗಿ ಅಳವಡಿಸಬಹುದು. ಅಂದರೆ ಇದು ಪುರಾಣೇತರ ವಸ್ತು. ಆದರೆ ಯಕ್ಷಗಾನ ಸ್ವರೂಪಕ್ಕೆ ಅನುಕೂಲವಾದದ್ದು. ಯಕ್ಷಗಾನದ ಶೈಲೀಕೃತ (stylised) ಮತ್ತು ಶೈಲಿಬದ್ಧ (style bound) ಇಂತಹ ಅಳವಡಿಕೆಯ