ಹೇಮಚಂದ್ರರಾಜ'ವಿಲಾಸ, [೫ನೇ ೬೦ಕ, ನಾನು ಪಟ್ಟ ಕಷ್ಟ್ಯವನ್ನೂ ಅಲೆದ ಅಲೆತವನ್ನೂ ಅವರಿಗೆ ಹೇಳಿದೆ. ಆದ ರೇನುಪ್ರಯೋಜನ ? ಅವರಿಗೆ ತಲ್ಲಣವನ್ನು ತಂದಿಟ್ಟೆ: ದುಃಖವೂ ಸಂತೋ ಪವೂ ಎರಡೂಸೇರಿ ನಾನುತಾನೆಂದು ಅವರ ಮನಸ್ಸಿನಲ್ಲಿ ಸೆಣಸಾಡಲು ಆ ಎಳ ದಾಟವನ್ನು ತಡೆಯಲು ಶಕ್ತಿಸಾಲದೆ, ಅವರ ಯುದೆ ಒಡೆದುಹೋಯಿತು, ಕುಮಂತ್ರ-ನೀನು ಹೇಳಿದ್ದನ್ನು ಕೇಳಿ ನನಗೂ ದುಃಖಬರುತ್ತಿದೆ. ಒಂದುವೇಳೆ ಇದರಿಂದ ಒಳ್ಳೇದಾದರೂ ಆಗಬಹುದು. ಮುಂದಕ್ಕೆ ಹೇಳು, ಇನ್ನೂ ಎಷ್ಟೋ ಹೇಳಬೇಕಾದ್ದು ಇರುವಹಾಗೆ ಕಾಣಿಸಿಕೊಳ್ಳುತ್ತೀಯ, ಭದ್ರ. ಇನ್ನೆಷ್ಟು ಹೇಳಿದರೂ, ಅಷ್ಟೂ ಅಷ್ಟು ದುಃಖಕರವಾಗಿದೆ; ಹೇಳಬೇಡ, ಇದನ್ನು ಕೇಳಿ ನನ್ನ ಕಣ್ಣಿನಲ್ಲಿ ಆಗಲೇ ನೀರುಬರುತಾಇದೆ. ಕುಕ್ಷ-ದುಃಖವನ್ನು ಸಹಿಸಲಾರದವರಿಗೆ ಇಲ್ಲಿಗೆ ಬಂದು ಘಟ್ಟ ಕಳೆಯಿತೆಂದು ತೋರಬಹುದು. ಆದರೆ ಇನ್ನು ಸ್ವಲ್ಪ ಹೆಚ್ಚಾಗಿ ಹೇಳಿದ ಪಕ್ಷದಲ್ಲಿ ದುಃಖವು ಉಕ್ಕಿ ಮೇರೆದಪ್ಪಿ ಹೋಗುವುದು. ಹೀಗೆ ನಾನು ಗಟ್ಟಿಯಾಗಿ ಗೋಳಾಡುತಿರು ವಾಗ, ನನ್ನ ಸವಿಾಪಕ್ಕೆ ಒಬ್ಬ ಮನುಷ್ಯ ಎಂದು ನನ್ನ ದುರವಸ್ಥೆಯನ್ನು ನೋಡಿ, ನನ್ನ ಹೀನವಾದ ಸಹವಾಸದಲ್ಲಿ ನಿಲ್ಲಲಾರದೆ ಹೋದ. ಆದರೆ ಹೀಗೆ ದುಃಖಪಡುತಿರುವವನು ಇಂಥವನೆಂದ ತಿಳಿದಕೂಡಲೆ ಬಲವಾದ ಆತನ ಕೈಗೆ ೪ಂದ ನನ್ನ ಕತ್ತನ್ನು ಬಿಮ್ಮನೆ ಕಟ್ಟಿಕೊಂಡು ದಿಕ್ಕಟಗಳೇ ಒಡೆದುಹೋಗುವ ಹಾಗೆ ಅತ್ತು, ನಮ್ಮ ಪ್ರಾಜೆಯಮೇಲೆ ಬಿದ್ದು ಹೊರಳಾಡಿ ಗೋಳಿಡುತ್ತಾ, ಅತ್ಯಂತ ವ್ಯಾಕುಲವನ್ನು ಂಟುಮಾಡುವಂಥಾ ಮತ್ತು ಈ ಕಿವಿ ಎಂದಿಗೂ ಕೆಳ ಬಾರದಂಥಾ ವಿಪತ್ತು ತನಗೂ ಧೋರೆಗೂ ಸಂಭವಿಸಿದ್ದನ್ನು ಹೇಳಿದನು, ಇದು ಜ್ಞಾಪಕಕ್ಕೆ ಬಂದಹಾಗೆಲ್ಲಾ ಆತನ ದುಃಖ ಬಲವಾಯಿತು ; ಎದೆ ಒಡೆಯುತ ಬಂತು, ಪ್ರಜ್ಞೆ ತಪ್ಪಿತು, ಆಗ ಎರಡುಸಾರಿ ತುರಿಯ ಶಬ್ದವಾಯಿತು, ಮರ್ಧೆ ಹೋಗಿ ಬಿದ್ದಿದ್ದ ಆತನನ್ನು ಅಲ್ಲಿಯೇ ಬಿಟ್ಟು ಹೊರಟುಬಂದೆ. ಭದ). ಆದರೆ ಆತ ಯಾರು ? ಕುಕ್ಕನಿಷ್ಕಂಟಕ ಸ್ವಾಮಿ, ದೇಶಭ್ರಹ್ಮನಾಗಿಹೋದ ನಿಷ್ಮೆಂಟಕ. ಈತನು ರೂಪು ಮರಿಸಿಕೊಂಡು, ತನ್ನ ಕತ್ರುವೆನಿಸಿಕೊಂಡಿದ್ದ ದೊರೆಯ ಹಿಂದೆ ಹಿಂದೆ ಸುತ್ತಿ ಗುಲಾಮರಿಗೂ ಅನುಚಿತವಾದ ಸೇವೆಯನ್ನೆಲ್ಲಾ ಮಾಡಿದನು. ಪ್ರವೇಶ.-ದೊಡ್ಡ ಮನುಷ್ಯ ರಕ್ಷ ತೊಟ್ಟಿಕ್ಕುವ ಚೂರಿಯನ್ನು ಹಿಡಿದು ತರುತ್ತಾ, ದೊಡ್ಡ-ಅಯ್ಯೋ! ದಿಕ್ಕಿಲ್ಲ, ದಿಕ್ಕಿಲ್ಲವೆ ! ಏನುಗತಿ ! ಶುಕ್ರ-ಏನೋ ! ಎಂಘ ದಿಕ್ಕು?
ಪುಟ:ಪ್ರೇಮಚಂದ್ರ ರಾಜವಿಲಾಸ .djvu/೧೨೯
ಈ ಪುಟವನ್ನು ಪರಿಶೀಲಿಸಲಾಗಿಲ್ಲ.