ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರೇಮಮಂದಿರ. ಮೂರನೆಯ ಪರಿಚ್ಛೇದ. ಚಿತ್ರದಮನ ! “ನಸ್ಸೇ, ಭವಾನೀಮಾತೆಯ ಆದೇಶವನ್ನೇ ನಾನು ನಿನಗೆ ಹೇಳುತ್ತಲಿದ್ದೇನೆ. ಭವಾ ನಿಯ ಕೃಪೆಯಿಂದ ನನಗೆ ತಿಳಿದುಬಂದುದನ್ನೇ ನಿನಗೆ ಸ್ಪಷ್ಟ ಪಡಿಸಿ ಹೇಳಹತ್ತಿದ್ದೇವೆ. ನಿಮ್ಮಿಬ್ಬರ ಮೇಲನವು ಎಂದೂ ಸುಖಪ್ರದವಾಗಲಾರದು. ನಿನ್ನಿನ ರಾತ್ರಿಯೆಲ್ಲ ಜಾಗ ರಣೆಮಾಡಿ, ನಿನಗೋಸ್ಕರವಾಗಿಯೇ ಗಣಿತವನ್ನು ಮಾಡುತ್ತ ಕುಳಿತುಕೊಂಡಿ ದ್ದೆನು. ” ( ತಮ್ಮ ಗಣಿತದಿಂದ ಏನು ಹೊರಟಿತು ? ” * ನಿಮ್ಮ ವಿವಾಹದಲ್ಲಿ ಅಡಿಗಡಿಗೆ ನಿಮ್ಮ ಗಳೇ ಬರುವವೆಂದು ಹೊರಟಿತು. ” ಆ ನಿರ್ಜನಪ್ರದೇಶದಲ್ಲಿ ಆ ಪರ್ಣಶಾಲೆಯಿಂದ ಸ್ವಲ್ಪ ಅ೦ತರದ ಮೇಲೆ .೦ದು ತಮಾಲವೃಕ್ಷದ ಬುಡದಲ್ಲಿ ನಿಂತುಕೊಂಡು ನಮ್ಮ ಪರಿಚಿತನಾದ ಯೋಗಿಯು ಮೇಲೆ ಹೇಳಿದಂತೆ ಲಲಿತೆಯೊಡನೆ ಸಂಭಾಷಣ ಮಾಡುತ್ತಿದ್ದನು; ಮತ್ತು ರಾಜನಂದಿನಿಯಾದ ಲಲಿತೆಯು ಮಸ್ತಕವನ್ನು ಬಗ್ಗಿಸಿಕೊಂಡು ವಿಷಣ್ಣ ಮಲಿನಮುಳಾಗಿ ಶುಷ್ಕ ತಮಾಲಪತ್ರವೊಂದನ್ನು ಕೈಯಿಂದ ಹರಿದು ಚೂರುಚೂರು ಮಾಡುತ್ತ ಆತನ ಆದೇಶ ವನ್ನು ಕೇಳುತ್ತಿದ್ದಳು.

  • ಹಿಂದಿನ ಪರಿಚ್ಛೇದದಲ್ಲಿ ಹೇಳಿದ ಸಂಗತಿಯು ಸಂಘಟಿಸಿದ ಬಳಿಕ ಆರೇಳುದಿನ ಸಗಳು ಕಳೆದು ಹೋಗಿದ್ದವು. ಕರುಣಸಿಂಹನಿಗೆ ಸಾಧಾರಣರೀತಿಯಿಂದ ವಾಸಿಯಾಗಿ ಆತನು ದಿಲ್ಲಿಗೆ ಹೊರಟುಹೋಗಿದ್ದನು. ಲಲಿತೆಯ ತಂದೆಯಾದ ದುರ್ಗಾಧಿಪತಿ ಭೀಮ ಸಿಂಹನಿಗೆ ಪತ್ರ ಬರೆದು ಆ ಯೋಗಿಯು ಸರ್ವವೃತ್ತಾಂತವನ್ನೂ ತಿಳಿಸಿದ್ದನು. ಮತ್ತು ಆತನ ಅನುಮತಿಯಿಂದಲೇ ಲಲಿತೆಯನ್ನು ಇನ್ನೂ ಎರಡುಮೂರು ದಿವಸಗಳವರೆಗೆ ತನ್ನಲ್ಲಿ ಇರಿಸಿಕೊಂಡಿದ್ದನು. ಆ ಯೋಗಿಯ ಹೆಸರು ಚಂದ್ರಚೂಡನೆಂಬುದು, ತೀಕ. ಬುದ್ದಿಯವನೂ ಅತ್ಯಂತಧೋರಣಿಯೂ ಆದ ಆ ಬೈರಾಗಿಯು ಮುಂದೆ ಒದಗಬಹುದಾ ದುದನ್ನು ತಿಳಿದಿದ್ದನು, ಲಲಿತಕರುಣಸಿಂಹರ ಹೃದಯದಲ್ಲಿ ಪರಸ್ಪರವಾಗಿ ಪ್ರಬಲವಾದ ಅನುರಾಗವು ಉತ್ಪನ್ನವಾಗಿದೆಯೆಂಬುದನ್ನು ಆತನು ಕಂಡು ಹಿಡಿದಿದ್ದನು. ಆದುದ ರಿಂದಲೇ ಕರುಣಸಿಂಹನು ಅಲ್ಪಮಟ್ಟಿಗೆ ಸ್ವಾಸ್ಥ್ಯವನ್ನು ಹೊಂದಿದ ಕೂಡಲೇ ಅವನನ್ನು ದಿಲ್ಲಿಗೆ ಕಳಿಸಿ ಬಿಟ್ಟಿದ್ದನು?

ಚಂದ್ರಚೂಡನ ಮುಖದ ಕಡೆಗೆ ನೋಡುತ್ತ ಲಲಿತೆಯು ಕರುಣಸ್ವರದಿಂದ ಪ್ರಶ್ನೆ ಮಾಡಿದಳು, “ ಸ್ವಾಮಿ, ಹಾಗಾದರೆ ಇದಕ್ಕೆ ಯಾವ ಉಪಾಯವೂ ಇಲ್ಲವೇ ಇಲ್ಲವೇನು?”