ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪ್ರೇಮಮಂದಿರ.

  • * *

ಈ ಸಂಗತಿಯು ನಡೆದ ಮಾರನೇ ದಿವಸವೇ ಕೃಷ್ಣಾ ಕುಮಾರಿಯು ಎಲ್ಲಿರುವ ಳೆಂಬದುಚಂದ್ರ ಚೂಡನಿಗೆ ಗೊತ್ತಾಗಲೇ ಇಲ್ಲ. !! ನಾಲ್ಕನೆಯ ಪರಿಚ್ಛೇದ --- ಗುಪ್ತ ಸಂದರ್ಶನ ! ಸಂಧ್ಯಾಕಾಲವಾಯಿತು. ಆಕಾಶದಲ್ಲಿ ಒಂದು ಪ್ರಕಾರದ ಉದಾಸವೂ ಕ್ಷೀಣವೂ ಆದ ಕೆಂಬಣ್ಣದ ಕಳೆಯು ಪಸರಿಸಿತ್ತು. ಬಿಳಿದು, ಕರಿದು, ಕೆಂಪದು, ಹಳದಿ, ಮಿಶ್ರ ಮೊದಲಾದ ವಿಚಿತ್ರವರ್ಣದ ಮೇಘಗಳು ಒಂದರ ಮೇಲೊಂದು ಎಸೆಯುತ್ತಿದ್ದವು. ಆ ಮೇಘಗಳಲ್ಲಿ ಎಷ್ಟೊಂದು ಬಣ್ಣಗಳಿದ್ದುವು! ಎಷ್ಟೊಂದು ವೈಚಿತ್ರ್ಯವಿತ್ತು ! ಈ ಪ್ರಕಾರ ಮೇಘವಡಂಬರದಿಂದ ವ್ಯಾಪ್ತವಾದ ಆಕಾಶವು ಎಷ್ಟೇ ವಿಶಾಲವಾಗಿ ದ್ದರೂ ಮುಕ್ತಾವಲೀ ನದಿಯ ಚಿಕ್ಕ ಪಾತ್ರದಲ್ಲಿಯೇ ಪ್ರತಿಬಿಂಬಿತವಾಗಿತ್ತು. ಅಹಹಾ | ಆಕಾಶಕ್ಕಾದರೂ ದುಃಖವಿದೆಯಲ್ಲವೇ ? ಸಂಧ್ಯಾಕಾಲದ ಆ ಸೃಷ್ಟಿಸ್ವರೂಪವನ್ನು ನೋಡಿ ಪ್ರೇಮಿಕಜನರ ಮನಸ್ಸಿನಲ್ಲಿ ಅನೇಕ ಪ್ರಕಾರದ ಕಲ್ಪನೆಗಳು ಉದ್ಭವಿಸುವುದು ಸಾಹಜಿಕವಾಗಿತ್ತು. ಮುಕ್ತಾವಲೀ ನದಿಯ ತೀರದಲ್ಲಿ ಒಂದು ಮಧ್ಯಮಾಕೃತಿಯ ದುರ್ಗವು ಆಕಾಶದಲ್ಲಿ ತಲೆಯನ್ನೆತ್ತಿ ಆದ್ಯತೆಯಿಂದ ಸೆಟೆದು ನಿಂತುಕೊಂಡಿತ್ತು. ಎಲ್ಲಕ್ಕೂ ಎತ್ತರವಾದ ಆ ದುರ್ಗದ ಶಿಖರ ದಲ್ಲಿ ಹದಿನಾರು ವರುಷದ ಒಬ್ಬ ತರುಣಿಯು ಕುಳಿತುಕೊಂಡಿದ್ದಳು. ಕ್ಷಣಕ್ಷಣಕ್ಕೆ ಬದ ಲಿಸುತ್ತಿರುವ ಪ್ರಕೃತಿಯ ಮಧುರವೂ ವಿಚಿತ್ರವೂ ಆದ ನೋಟವನ್ನು ನೋಡುವುದರಲ್ಲಿ ಅವಳ ಮನಸ್ಸು ಲೀನವಾಗಿತ್ತು. ಆಕೆಯ ಹೃದಯದಲ್ಲಿ ಯಾವ ಪ್ರಕಾರದ ವಿಚಾರತ ರಂಗಗಳು ಉದ್ಭವಿಸುತ್ತಿದ್ದುವೆಂಬುದನ್ನು ಯಾರು ಹೇಳಬಲ್ಲರು ? ಸಂಧ್ಯಾಕಾಲದ ಗಗನಶೋಭೆಯನ್ನು ನೋಡುವದಕ್ಕಾಗಿ ಅರಮನೆಯ ಶಿಖರವ ನೇರಿ ಸಂಗಮರವರೀ ಕಲ್ಲಿನ ಆಸನದ ಮೇಲೆ ಕುಳಿತು ಹೃದಯದ ಉರಿಯನ್ನು ಶಾಂತ ಮಾಡಿಕೊಳ್ಳಲಪೇಕ್ಷಿಸುತ್ತಿದ್ದ ಆ ತರುಣಿಯು ಇನ್ನಾರೂ ಆಗಿರದೆ ದುರ್ಗಾಧಿಪತಿಯಾದ ಭೀಮಸಿಂಹನ ಮಗಳೂ ನಮ್ಮ ಪೂರ್ವ ಪರಿಚಿತಳೂ ಆದ ಲಲಿತೆಯೇ ಆಗಿದ್ದಳು. * ನಮ್ಮ ಕಥಾನಾಯಿಕೆಯಾದ ಲಲಿತೆಯು ದೇವದರ್ಶನಕ್ಕೆ ಹೋದಾಗ ದಾರಿ ಯಲ್ಲಿ ಬೋರರ ಕೈಯಲ್ಲಿ ಸಿಕ್ಕಳೆಂಬುದೂ ಕುಮಾರ ಕರುಣಸಿಂಹನು ಅವಳನ್ನು ಹೇಗೆ ರಕ್ಷಿಸಿದನೆಂಬುದೂ ಗಾಯ ಹೊಂದಿದ ಕರುಣಸಿಂಹನಿಗೆ ಚಂದ್ರಚೂಡನ ಪ್ರಯತ್ನಗ ಳಿಂದ ಹೇಗೆ ವಾಸಿಯಾಯಿತೆಂಬುದೂ ನಮ್ಮ ವಾಚಕರಿಗೆ ಗೊತ್ತೇ ಇದೆ,