೩ ವಾಗ್ಯೂಷಣ, tr * * * * * * * ** * • • ಆಘಾತವನ್ನು ಮಾಡಿದಳು. ಪರ್ಣಕುಟಿಯಲ್ಲಿ ಯಾರಾದರೂ ಇದ್ದರೋ ಇಲ್ಲವೋ ಯಾರಿಗೆ ಗೊತ್ತು ? ಬಾಗಿಲವನ್ನಂತೂ ಯಾರೂ ತೆರೆಯಲಿಲ್ಲ. ಸ್ವಲ್ಪ ಹೊತ್ತು ನಿಂತು ಲಲಿತೆಯು ಪುನಃ ಮೊದಲಿನಂತೆಯೇ ಸಪ್ಪಳವನ್ನು ಮಾಡಿದಳು. ಆಗ ಒಳಗಿನಿಂದ ಯಾರೋ ಗಂಭೀರಸ್ಕರದಿಂದ ಕೇಳಿದರು. ಈ ಯಾರ ವರು ? ಲಲಿತೆಯು ಆನಂದದಿಂದ ಉತ್ತರವಿತ್ತಳು. “ ನಾನು; ಲಲಿತೆ? ಅಮ್ಮನವರೇ ನಾನೇ ಬಂದಿದ್ದೇನೆ. ” (( ಮಗಳೇ ಒಳಗೆ ಬಾ ಅನುಜ್ಞೆಯು ದೊರೆತ ಕೂಡಲೇ ಲಲಿತೆಯು ಮೆಲ್ಲನೆ ಒಳಗೆ ಹೋದಳು. ಗುಡಿ ಸಲು ಚಿಕ್ಕದಾಗಿಯೇ ಇತ್ತು; ಆದರೂ ಅದರಲ್ಲಿ ಎರಡು ಭಾಗಗಳಿದ್ದುವು. ಒಳಗಿನ ಭಾಗದಲ್ಲಿ ಲಲಿತೆಯು ನೋಡದ ನೋಟವನ್ನು ಇನ್ನಾರಾದರೂ ಅಪರಿಚಿತರು ನೋಡಿ ದ್ದರೆ ಭಯದಿಂದ ಮೂರ್ಚ್ಛಿತರಾಗಿಯೇ ಹೋಗುತ್ತಿದ್ದರು. ಆದರೆ ಲಲಿತೆಗೆ ಈ ದೃಶ್ಯವು ಪರಿಚಿತವಾದುದೇ ಇದ್ದುದರಿಂದಲೋ, ಅಥವಾ ನಾನು ಒಳಹೊಕ್ಕ ಕೂಡಲೆ ಇಂತಹ ನೋಟವು ನನ್ನ ಕಣ್ಣಿಗೆ ಬಿದ್ದೇ ಬಿಳುವುದೆಂಬ ಕಲ್ಪನೆಯು ಅವಳಲ್ಲಿದ್ದುದರಿಂದಲೋ ಆಕೆಯು ಸ್ವಲ್ಪವೂ ಹೆದರಲಿಲ್ಲ. ಗುಡಿಸಲಿನ ಒಳ ಅಂಗಣದಲ್ಲಿ ಭಯಂಕರವಾದ ವನ್ಯಪಶುವಿನ ತರ್ಮದ ಮೇಲೆ ಪ್ರೌಢವಯಸ್ಸಿನ ಒಬ್ಬ ಭೈರವಿಯು ಕುಳಿತುಕೊಂಡಿದ್ದಳು. ಆಕೆಯ ಮುಖಮುದ್ರೆಯು ಮಾತ್ರ ಉಗ್ರವಾಗಿದ್ದಿಲ್ಲ. ಶಾಂತಿ ಮತ್ತು ವಿವೇಕಗಳು ಆಕೆಯ ಅಂಗದಲ್ಲಿ ವಾಸವಾಗಿ ದ್ದುವು. ಭೈರವಿಯ ಎದುರಿನಲ್ಲಿ ಕರಾಲವೇಷದ ಅಷ್ಟಭುಜಾದೇವಿಯ ಮೂರ್ತಿ ಹೊಂದಿದ್ದು ಅದು ಸಿಂದೂರದಿಂದ ವ್ಯಾಪ್ತವಾಗಿತ್ತು. ಆ ದೇವಿಯು ಭೈರವಿಯ ಉಪಾ ಸ್ಯದೇವತೆಯಾಗಿರಬಹುದೆಂಬಂತೆ ತೋರುತ್ತಿತ್ತು. ಭೈರವಿಯ ಒಂದು ಪಕ್ಕದಲ್ಲಿ ಸಿಂದೂ ರವನ್ನು ಬಳೆದ ಒಂದು ತ್ರಿಶೂಲವಿದ್ದು ಇನ್ನೊಂದು ಪಕ್ಕದಲ್ಲಿ ವಿದ್ರೂಪವಾದ ಒಂದೆರಡು ತಲೆಬುರುಡೆಗಳು ಬಿದ್ದಿದ್ದುವು. ಸಮೀಪದಲ್ಲಿಯೇ ಒಬ್ಬ ಹೆಂಗಸಿನ ಹೆಣವು ಬಿದ್ದಿತ್ತು, ಒಂದೆಡೆಯಲ್ಲಿ ದೊಡ್ಡದಾದ ಭಸ್ಮದ ರಾಶಿಯು ಬಿದ್ದಿತ್ತು. ಭೈರವಿಯ ಕೊರಳಲ್ಲಿ ದೊಡ್ಡ ದೊಡ್ಡ ರುದ್ರಾಕ್ಷಗಳ ಮಾಲೆಯಿದ್ದು ಹಣೆಯಲ್ಲಿ ಉದ್ದವಾದ ಸಿಂದೂರದ ನಾಮವನ್ನು ಹಚ್ಚಿಕೊಂಡಿದ್ದಳು; ಮತ್ತು ಅದರ ಮೇಲೆ ಬಿಳಿಯ ಚಂದನಗಂಧದ ಎಷ್ಟೋ ಟಿಕಳ ಗಳು ಕಾಣುತ್ತಿದ್ದುವು. ಆಕೆಯು ತನ್ನ ಮೈತುಂಬ ವಿಭೂತಿಯನ್ನು ಬಳಿದುಕೊಂಡಿದ್ದಳು. - ಲಲಿತೆಯು ಒಳಗೆ ಬಂದೊಡನೆಯೇ ಭೈರವಿಯು ಮಂದಹಾಸಮಾಡಿದಳು. ಆದರೆ ವಿಚಾರನಿಮಗ್ನ ಳಾದ ಲಲಿತೆಗೆ ಅದು ಲಕ್ಷದಲ್ಲಿ ಬರಲಿಲ್ಲ. ಅವಳು ಭೈರವಿಯ
ಪುಟ:ಪ್ರೇಮ ಮಂದಿರ.djvu/೪೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
![](http://upload.wikimedia.org/wikipedia/commons/thumb/c/c9/%E0%B2%AA%E0%B3%8D%E0%B2%B0%E0%B3%87%E0%B2%AE_%E0%B2%AE%E0%B2%82%E0%B2%A6%E0%B2%BF%E0%B2%B0.djvu/page43-1024px-%E0%B2%AA%E0%B3%8D%E0%B2%B0%E0%B3%87%E0%B2%AE_%E0%B2%AE%E0%B2%82%E0%B2%A6%E0%B2%BF%E0%B2%B0.djvu.jpg)