M ಪಾಗ್ಯೂಷಣ, ಯಾದ ಭೀಮಸಿಂಹನು ಒಬ್ಬ ಅಬಲೆಯ ಮೇಲೆ ಖಡ್ಗವನ್ನೆತ್ತಬಹುದೆಂದು ನಾನು ತಿಳಿದಿಲ್ಲ” ಖಡ್ಡಧಾರಿಯಾದ ಭೀಮಸಿಂಹನ ಹಸ್ತವು ಆಶ್ಚರ್ಯದಿಂದ ಮುಗ್ಧವಾಯಿತು. ಕ್ರೋಧದ ಬದಲು ಆಶ್ಚರ್ಯಾತಿಶಯವು ಭೀಮಸಿಂಹನ ಹೃದಯವನ್ನು ವ್ಯಾಪಿಸಿತು. ಆತನು ಮತ್ತೆ ಪ್ರಶ್ನೆ ಮಾಡಿದನು. ' ನೀನು ಹೆಂಗಸೇನು ? ಇಂತಹ ವೇಳೆಯಲ್ಲಿ, ಈ ಘೋರವಾದ ಅಂಧಕಾರದಲ್ಲಿ ಇಂತಹ ನಿರ್ಜನವಾದ ಕಾಡಿನಲ್ಲಿ ನಿರ್ಭಯದಿಂದ ಏಕಾಕಿನಿಯಾಗಿ ಸಂಚಾರ ಮಾಡುವ ವಿಲಕ್ಷಣ ಸ್ತ್ರೀಯು ನೀನು ಯಾರು ? ೨೨ ( ಭೀಮಸಿಂಹಮಹಾರಾಜರೇ, ನಾನು ನಿಜವಾಗಿಯೂ ಹೆಂಗಸು. ನಾನು ತಮ್ಮ ಮೇಲೆ ಒಂದು ಮಹದುಪಕಾರವನ್ನು ಮಾಡುವುದಕ್ಕೋಸ್ಕರ ಇಲ್ಲಿಗೆ ಬಂದಿದ್ದೇನೆ, ಇದಕ್ಕಿಂತಲೂ ಹೆಚ್ಚಾಗಿ ನನ್ನ ಪರಿಚಯವನ್ನು ತಕ್ಕೊಂಡು ನೀವೇನು ಮಾಡುತ್ತೀರಿ?” ಭೀಮಸಿಂಹನು ಸ್ವಲ್ಪ ಹೊತ್ತಿನವರೆಗೆ ಸ್ತಬ್ಬನಾಗಿದ್ದನು. ಆ ಮೇಲೆ ಅವಳನ್ನು ಕುರಿತು ಮತ್ತೆ ಮಾತನಾಡಿದನು. (( ಒಳ್ಳೇದು. ಆಗಲಿ. ನೀನು ಯಾರೆಂಬದನ್ನು ನಾನು ಕೇಳುವುದಿಲ್ಲ. ಆದರೆ ಈ ಕುದುರೆಯು ಯಾರದೆಂಬುದನ್ನಾದರೂ ಹೇಳು ತ್ತೀಯಾ? ” (ಮಹಾರಾಜರೇ, ಈ ಕುದುರೆಯು ಕುಮಾರ ಕರುಣಸಿಂಹರದು. ೨೫ (( ಕುಮಾರ ಕರುಣಸಿಂಹ-ಕರುಣಸಿಂಹನಾರು? ೨೨ < ಕರುಣಸಿಂಹರಾರೆಂದರೇನು ಮಹಾರಾಜರೇ? ಅವರೇ ! ಅವರ ಪರಿಚಯವ ನಿಮಗೆ ಇಲ್ಲವೇ ? ಸ್ವರ್ಗಲೋಕವಾಸಿಗಳಾದ ವಿಮಲಸಿಂಹಮಹಾರಾಜರ ಒಬ್ಬರೇ ಒಬ್ಬ ಚಿರಂಜೀವರಾದ ಕರುಣಸಿಂಹರು ! ದಿಲೀಪತಿಯಾದ ಅಕಬರಬಾದಶಹನು ನೂತನವಾಗಿ ಗೆದ್ದು ಕೊಂಡಿರುವ ರಜಪೂತಸ್ಥಾನದೊಳಗಿನ ಪ್ರದೇಶಕ್ಕೆ ಮುಖ್ಯ ಸೇನಾಪತಿಗಳಾದ ಕರುಣಸಿಂಹರು ! ಯಾರ ದುರ್ಗವನ್ನೂ ಜಹಾಗೀರವನ್ನೂ ನುಂಗಿ ಕೊಂಡು ನೀವೀಗ - ಭೀಮಸಿಂಹಮಹಾರಾಜ ' ರಾಗಿರುವಿರೋ, ಆ ಕರುಣಸಿಂಹರು ! ಭೀಮಸಿಂಹಮಹಾರಾಜರೇ, ಈಗಾದರೂ ನಿಮಗೆ ಕರುಣಸಿಂಹರ ನಿಜವಾದ ಪರಿಚಯ ವುಂಟಾಯಿತೇ ಆ ಸ್ತ್ರೀಯ ತಿರಸ್ಕಾರಪೂರ್ಣವಾದ ಈ ಭಾಷಣವು ಭೀಮಸಿಂಹನಿಗೆ ಕೇಳಿ ಸಿತೋ ಇಲ್ಲವೋ ಯಾರಿಗೆ ಗೊತ್ತು ! ಆದರೆ ಸಂತಾಪದಿಂದ ಆತನ ಮಸ್ತಕವು ಭ್ರಮ ಣಮಾಡಹತ್ತಿತು; ಆತನ ಶರೀರವು ' ಥರಥರ ' ನಡುಗಹತ್ತಿತು. ಆತನ ಕ್ರೋಧ ಪ್ರದೀಪ್ತ ನೇತ್ರಗಳು ಮದವೇರಿದ ಹುಲಿಯ ಕಣ್ಣುಗಳಂತೆ ಅಂಧಕಾರದಲ್ಲಿ ಪ್ರಕಾಶಿಸ ಹತ್ತಿದುವು. ತನ್ನ ಗುಪ್ತ ವೃತ್ತಾಂತವೆಲ್ಲ ಆ ಸ್ತ್ರೀಗೆ ಹೇಗೆ ತಿಳಿಯಿತಂಬುದು ಭೀಮಸಿಂಹ
ಪುಟ:ಪ್ರೇಮ ಮಂದಿರ.djvu/೫೩
ಈ ಪುಟವನ್ನು ಪರಿಶೀಲಿಸಲಾಗಿಲ್ಲ.