ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮಾಗೂ ಷಣ. ww.v2. • ••••• vvvvvvvvvvvvvvk ಭನ ಪ್ರೇಮಪೂರ್ಣವಾದ ಸಂಬೋಧನದಿಂದ ಆಕೆಯ ಹೃದಯದಲ್ಲಿಯೂ , ಮುಖಚ ರ್ಯೆಯಲ್ಲಿಯೂ ತುಂಬಿಕೊಂಡಿದ್ದ ವಿಷಣ್ಣತೆಯು ಕ್ಷಣಾರ್ಧದಲ್ಲಿ ನಷ್ಟವಾಯಿತು. ದುಷ್ಟ ರಾದ ಸರತನಸಿಂಹಾದಿ ಜನರು ಸಮೀಪಕ್ಕೆ ಬರುತ್ತಿರುವುದನ್ನು ನೋಡಿದೊಡನೆಯೇ ಲಲಿಣೆಯು ಕುಮಾರನ ನಡುಕಟ್ಟಿನಲ್ಲಿದ್ದ ತೀಕವಾದ ಕತ್ತಿಯನ್ನು ಹೊರಗೆ ಹಿರಿದಳು. ಮತ್ತು ಕರುಣಸಿಂಹನ ಎದೆಯ ಮೇಲೆ ತಲೆಯನ್ನಿಟ್ಟು “ ಪ್ರಾಣಪ್ರಿಯಾ ! ಇಗೋ ಬಂದೆನು ! ” ಎನ್ನುತ್ತ ಕತ್ತಿಯನ್ನು ಎದೆಯಲ್ಲಿ ಚುಚ್ಚಿಕೊಂಡಳು ! ಕ್ಷಣಾರ್ಧದಲ್ಲಿಯೇ ಕುಮರನ ರಕ್ತಪ್ರವಾಹದಲ್ಲಿ ಲಲಿತೆಯ ಪವಿತ್ರವಾದ ರಕ್ತಪ್ರವಾಹವ ಕೂರಿ ಹೋಯಿತು ! ರಜನಂದಿನಿಯಾದ ಲಲಿತೆಯು ಎಲ್ಲರ ಸಮಕ್ಷದಲ್ಲಿಯೇ ನಗನಗುತ್ತ ಸ್ವರ್ಗದಲ್ಲಿ ತನ್ನ ಹೃದಯವಲ್ಲಭನ ಕಡೆಗೆ ಹೊರಟು ಹೋದಳು ! ಅಲ್ಪಾವಧಿಯಲ್ಲಿಯೇ ಭೀಮಸಿಂಹಾದಿ ಜನರು ಅಲ್ಲಿಗೆ ಬಂದು ಮುಟ್ಟಿದರು. ಆ ಹೃದಯಭೇದಕವಾದ ದೃಶ್ಯವನ್ನು ನೋಡಿ ಭೀಮಸಿಂಹನ ಹೃದಯವು ನಿದೀರ್ಣವಾ ಯಿತು. ಶೋಕದಿಂದ ಶಂಖವಾದ್ಯ ಮಾಡುತ್ತ ಆತನು ಲಲಿತೆಯ ಮೈಮೇಲೆ ಬಿದ್ದನು. ತೀವ್ರವಾದ ಪಶ್ಚಾತ್ತಾಪದಿಂದ ಆತನ ಪಾಪಹೃದಯವು ಚೂರ್ಣವಿಚೂರ್ಣವಾಯಿತು. ನೋಡುನೋಡುವರಷ್ಟರಲ್ಲಿ ಆತನ ಪ್ರೀತಿಯಮಗಳಾದ ಲಲಿತೆಯು ಆತನನ್ನು ತಿರಸ್ಕರಿಸಿ ಸ್ವರ್ಗಕ್ಕೆ ಹೊರಟು ಹೋದಳು ! ಲಲಿತೆಯ ಮೇಲಿದ್ದಷ್ಟು ಭೀಮಸಿಂಹನ ಪ್ರೀತಿಯು ಇನ್ನಾರ ಮೇಲೂ ಇದ್ದಿಲ್ಲ. ಅವಳು ಆತನ ಸುಖಸರ್ವಸ್ವವಾಗಿದ್ದಳು. ಆ ಸರ್ವಸ್ವವು ಈ ಪ್ರಕಾರ ಬಯಲಾಗಲು ಭೀಮಸಿಂಹನು ಭ್ರಮಿಷ್ಯನಂತಾದನು! ಆತನ ತಲೆ ತಿರುಗಿತು. ತನ್ನ ಹತ್ತರದಲ್ಲಿ ನಿಂತುಕೊಂಡಿದ್ದ ಇಬ್ಬರು ಶರೀರರಕ್ಷಕರನ್ನು ಉದ್ದೇಶಿಸಿ ಆತನು ಕಠೋರಸ್ವರದಿಂದ ಮಾತನಾಡಿದನು. * ಫತೇಸಿಂಹ, ಮಾಧವ ಸಿಂಗ ಈ ಪಾಪಿಯಾದ ಸರತಾನಸಿಂಹನನ್ನೂ ಆತನ ಮಗನಾದ ಈ ಚಾಂಡಾಲ ದುರ್ಜ ಯಸಿಂಹನನ್ನೂ ಈಗಲೇ ಸೆರೆಹಿಡಿದು ಇಲ್ಲಿಂದ ತೆಗೆದುಕೊಂಡು ಹೋಗಿರಿ. ನಾಳಿನ ದಿವಸ ಅವರನ್ನು ಕಡಿದು ಚೂರು ಚೂರು ಮಾಡಿರಿ! ಈ ದುರಾತ್ಮರ ಕಪಟ ಪಾಶದಲ್ಲಿ ಸಿಕ್ಕು ಬಿದ್ದು ನಾನು ನನ್ನ ಜೀವನಸರ್ವಸ್ವವಾದ ಪ್ರಿಯಲಲಿತೆಯನ್ನು ಕಳೆದುಕೊಂಡು ಕೂಡ್ರಬೇಕಾಯಿತು. ಲಲಿತೇ, ಮಗೂ ಲಲಿತೇ ? ಹಾ !” ದುರ್ಗಪತಿಯ ಅಪ್ಪಣೆಯಂತೆ ಹತಭಾಗಿಗಳಾದ ಸರತಾನಸಿಂಹನೂ ದುರ್ಜಯ ಸಿಂಹನೂ ಸೆರೆ ಹಿಡಿಯಲ್ಪಟ್ಟರು. ದೂಳಿಯಲ್ಲಿ ಬಿದ್ದು, ನಿಶ್ಚಲವೂ ನಿಷ್ಪಂದವೂ ರಕ್ತ ಮಲಿನವೂ ಆದ ಆ ಪ್ರಣಯಿಯುಗದ ದೇಹಗಳನ್ನು ಭೀಮಸಿಂಹನು ಅನಿಮಿಷನೇತ ಗಳಿದ ಜೋಡುತ್ತ ಅಶ್ರುವರ್ಷವವನ್ನು ಮಾಡಹತ್ತಿದನು. ಆತನ ದೃಷ್ಟಿಯು ಲಲಿ ತಯ ಶಾಂತವೂ ತೇಜೋಮಯವೂ ಆದ ಮುಖವನ್ನು ನೋಡುವದರಲ್ಲಿ ಮಗ್ನವಾಯಿತು.