ಉಪೋದ್ಘಾತ. ಕಾದಂಬರಿಗಳ ಮುಖ್ಯ ಉದ್ದೇಶವು ವಾಚಕರನ್ನು ಆನಂದಗೊಳಿಸುವುದೋ ಅಥವಾ ಅವರಿಗೆ ಒಳ್ಳಡೆಯನ್ನು ಕಲಿಸುವುದೋ? ಈ ಪ್ರಶ್ನೆಯನ್ನು ಕುರಿತು ಅನೇಕ ಆಂಗ್ಲವಿದಗ್ಧರೂ, ಜರ್ಮನ್ ವಿದ್ವಾಂಸರೂ ಅನೇಕ ವಿಧವಾಗಿ ಚರ್ಚಿಸಿದ್ದಾರೆ. ಆ ಎಲ್ಲ ಚರ್ಚೆಗಳ ಬಹುಮತದ ಸಾರಾಂಶವನ್ನು ಸಂಗ್ರಹಿಸಿ ಹೇಳಬೇಕಾದರೆ ಹೀಗೆ ಹೇಳ ಬಹುದು. * ಕಾದಂಬರಿಕಾರನಿಗೆ ನೈತಿಕೋದ್ದೇಶವು ಮುಖ್ಯವಾದ ಲಕ್ಷವಲ್ಲ; ವಾಚಕರ ಚಿತ್ತವನ್ನು ಸಂಪೂರ್ಣವಾಗಿ ಆಕರ್ಷಿಸುವಂತಹ ಸೌಂದರ್ಯಯುಕ್ತವಾದ ರೀತಿಯಲ್ಲಿ ತಾನು ಹೇಳತಕ್ಕುದನ್ನು ಹೇಳಿ, ವ್ಯಂಗ್ಯಮರ್ಯಾದೆಯಲ್ಲಿ ಗೋಚರವಾಗುವ ನೈತಿಕಭಾವಗಳಿಂದಲೇ ಆತನು ತೃಪ್ತನಾಗುತ್ತಾನೆ. ” ಕಾದಂಬರಿಯು ವಾಚಕರಲ್ಲಿ ಅಸ ಕೈಯನ್ನು ಹುಟ್ಟಿಸಬೇಕು; ಅವರನ್ನು ಆನಂದಗೊಳಿಸಬೇಕು; ಅವರ ನೀಚವಾದ ಮನೋವಿಕಾರಗಳನ್ನೂ, ಅಸಮಾಧಾನಕರವಾದ ತೊಂದರೆಗಳಿಂದುಂಟಾದ ಬೇಸರ ವನ್ನೂ ಹೋಗಲಾಡಿಸಿ ಲೀಲೆಯಿಂದಲೇ ಅವರನ್ನು ಉಚ್ಚವಿಚಾರಗಳಲ್ಲಿ ತಲ್ಲೀನರನ್ನಾಗಿ ಮಾಡಬೇಕು; ಅವರ ದಣಿವನ್ನೂ ಪೀಡೆಯನ್ನೂ ಮರೆಯಿಸಬೇಕು; ಮುಖ್ಯಪಾತ್ರದ ಪ್ರತಿಯೊಂದು ಚಲನವಲನೆಯ ವಿಷಯದಲ್ಲಿಯೂ ಸಹಾನುಭೂತಿಯುಕ್ತರಾಗಿರುವಂತೆ ಅವರ ಮನೋವಿಕಾರಗಳನ್ನು ಸ್ಪೂರ್ತಿಗೊಳಿಸಬೇಕು; ಅವರ ಆತ್ಮವು ಅಸಾಧಾರಣ ವಾದ ಮತ್ತು ಗಭೀರವಾದ ವಾತಾವರಣದಲ್ಲಿ ವಿಹರಿಸುವಂತೆ ಮಾಡಬೇಕು. ಈ ರೀತಿ ಯಲ್ಲಿ ಬರೆದ ಕಾದಂಬರಿಯು ನಿಶ್ಚಯವಾಗಿಯೂ ಅತ್ಯುತ್ತಮವಾದ ನೈತಿಕಪರಿಣಾಮ ವನ್ನು ಂಟುಮಾಡುವುದು. ನೀತಿಪರಿಣಾಮವನ್ನುಂಟುಮಾಡುವುದು ಅವಶ್ಯಕವೆಂಬುದೇ ಮೋ ನಿಜ; ಆದರೆ ಅದು ಕವಿಯ (Saasi ಹfa: ) ಮುಖ್ಯ ಕರ್ತವ್ಯವಲ್ಲ. ಕವಿಗೂ ಉಪನ್ಯಾಸಕನಿಗೂ, ಕಾವ್ಯಕ್ಕೂ ಉಪನ್ಯಾಸಕ್ಕೂ ಇರುವ ಭೇದವಿದೇ, ಸಾರಾಂಶ ವೇನಂದರೆ-ಕಾದಂಬರಿಗಳಲ್ಲಿ ವಾಚಕರ ಚಿತ್ತಾಕರ್ಷಣವು ಲೇಖಕನ ಆದ್ಯ ಕರ್ತ ವ್ಯವು; ನೀತಿಬೋಧೆಯು ವ್ಯಂಗ್ಯ ಮರ್ಯಾದೆಯಿಂದ ತೋರಬೇಕಲ್ಲದೆ ವಾಚ್ಯವಾಗಿ ರಕೂಡದು. ಈ ಉದ್ದೇಶದಿಂದಲೇ ನಾನು ಒಂದೆರಡು ಕಾದಂಬರಿಗಳನ್ನು ಬರೆದಿದ್ದೇನೆ. “ಉತ್ತಮೋತ್ತಮವಾದ ಸ್ವತಂತ್ರ ಗ್ರಂಥಗಳನ್ನು ಬರೆಯುವ ಯೋಗ್ಯತೆಯು ನನ್ನಲ್ಲಿ ಇಲ್ಲದೆ ಇದ್ದುದರಿಂದಲೂ, ಇದ್ದ ಯೋಗ್ಯತೆಗೆ ಅನುಗುಣವಾದ ಗ್ರಂಥಗಳನ್ನು ರಚಿಸು ವುದಕ್ಕೆ ಸಾಕಷ್ಟು ವೇಳೆಯು ದೊರೆಯದೆ ಇದ್ದುದರಿಂದಲೂ ನನಗೆ ತಿಳಿದ ಅನ್ಯ ಭಾಷೆಗಳೊಳಗಿನ ಪುಸ್ತಕಗಳನ್ನು ಕೂಡಿದ ವೇಳೆಯಲ್ಲಿ ಭಾಷಾಂತರಿಸಿ ಕೈಲಾದಮಟ್ಟಿಗೆ ಕನ್ನಡಿಗರ ಸೇವೆಯನ್ನು ಮಾಡುತ್ತಲಿದ್ದೇನೆ. ಈ ಪ್ರಕಾರದ ನನ್ನ ಅಲ್ಪ ಸೇವೆಯನ್ನೇ ಬಹುವಾಗಲಿಸಿ ( ಸುನಂದಿನೀ ಅಥವಾ ಪವಿತ್ರ ಪತಿಭಕ್ತಿ, ಶ್ರೀಯಃಸಾಧನ ಎಂಬ ಪುಸ್ತಕಗಳಿಗೆ ಕರ್ನಾಟಕ ವಿದ್ಯಾವರ್ಧಕಸಂಘದವರು ಬಹುಮಾನವನ್ನಿತ್ತು
ಪುಟ:ಪ್ರೇಮ ಮಂದಿರ.djvu/೮
ಈ ಪುಟವನ್ನು ಪರಿಶೀಲಿಸಲಾಗಿಲ್ಲ.