ಈ ಪುಟವನ್ನು ಪರಿಶೀಲಿಸಲಾಗಿಲ್ಲ.

fr ಟಿ M ಬತ್ತೀಸಪುತ್ಥಳಿ ಕಥೆ, ನಿಕೊಂಡು ಆಬಳಿಕ ರಾಯ ತನ್ನ ಮಂತ್ರಿಯೊಡನೆ ಇಂತೆಂದನು:-ಶರಣರಿ ಗತರಾಗಿ ಬಂದವರ ಮನ್ನಿಸಿ ರಕ್ಷಿಸದಿದ್ದರೆ ಅನೇಕ ಪಾಪವೆಂಬ ನೀತಿಯಿ ರುವ ಕಾರಣ ಈಯರಸನ ಪಾಲಿಸಬೇಕೆಂದು ಹೇಳಲಾಗಿ; ಆಮಾತಿಗೆ ಸಕಲರೂ ಸಮ್ಮತಿ ಪಟ್ಟು ಹಾಗೆ ಮಾಡಬಹುದು ಎಂದ ಬಳಿಕ ಅಸೋ ಮದತ್ತನ ಕರೆಸಿಕೊಂಡು-ರಾಯ ನಿಮ್ಮ ದೇಶದಲ್ಲಿ ಅತಿಶಯವೇನೆಂದು ಕೇಳಲಾಗಿ; ಆ ಅರನಿಂತೆಂದನು-ಹಿಮವತ್ಸರ್ವತಕ್ಕೆ ಮಡಲಾಗಿ ಹಸ್ತಗಿರಿ ಮೆರುಗಿನಲ್ಲಿರುವ ಭೈರವನ ಗುಡಿಗೆ ಕೊಂಬಿನ ಕೂಗಿನಲ್ಲಿ ಭೈರವಿಯೆಂಬ ಕೊಳವಿದೆ. ಆಕೊಳಕ್ಕೆ ದೇವಕನ್ಯಕೆಯರು ಒಂದು ಜಲಕ್ರೀಡೆಯ ನಾಡಿ ಮಾಡಿ ಆ ಭೈರವನ ಪೊಜೆಸಿ ಪೊಗುವರು ಎಂದ ಮಾತ ಕೇಳಿ, ರಾಯ ಅದ ನೋಡಬೇಕೆಂದು ಆಕ್ಷವೇ ಆಕಾಶಮಾರ್ಗದಲ್ಲಿ ಅಲ್ಲಿಗೆ ಹೋಗಿ, ಆ ಕೊಳದಲ್ಲಿ ಸ್ನಾನವ ಮಾಡಿ ಭೈರವನ ಪೂಜಿಸಿ, ಅಲ್ಲಿ ಇರುವಲ್ಲಿ ಎಂಟುಮಂದಿ ನಿಯರು ಆಕೊಳದಿಂದ ಮೇಲಕ್ಕೆ ಬಂದು ಕನಕ ಪ್ರತಿಮೆಯಂತೆ ಕಣ್ಣಿಗೆ ಕಾಣಿಸಿ ಭೈರವನ ಪೂಜಿಸಿ ಕೊಳದಲ್ಲಿ ಜಲಕ್ರೀಡೆ ಯಾಡಿ ಪಾಡಿ ಪೋಗುವುದ ಕಂಡು, ರಾಯನು ಅವರ ಹಿಂದೆ ಹೆಗಲಾಗಿ; ಅಲ್ಲೊಂದು ಬಿಲದ್ವಾರವ ಕಂಡು ಅದಕ್ಕೆ ಹೊಕ್ಕು ಪಾತಾಳಲೋಕಕ್ಕೆ ಹೋಗಿ, ಅಲ್ಲಿ ಹೇಮಾವತಿಯೆಂಬ ಪಟ್ಟಣದ ಕಾಣಲಾಗಿ; ರಾಯ ಅಲ್ಲಿಗೆ ಹೋಗಿ, ಸುವರ್ಣಮಯವಾದ ಕೋಟೆ ಕೊತ್ತಲನ ನೋಡುತ ಒಳಗೆ ಹೋಗಲಾಗಿ; ಅಲ್ಲಿರುವ ಗೃಹಗಳು ನವರತ್ನ ಖಚಿತವಾಗಿರುವುದಕ್ಕೆ ಅಲ್ಲ ರಸಡುತ್ತ, ಅರಮನೆಯ ಬಳಿಯಲ್ಲಿ ನಿಂದಿರುವ ರಾಯನ ಬಾಗಿಲ ಕಾವಲ ಗಾಜರು ಕಂಡು-ನೀವು ಯಾರೆಂದು ಕೇಳಲಾಗಿ; ರಾಯನು ತನ್ನ ವೃತ್ತಾಂ ತವ ಹೇಳಲಾಗಿ, ಕಾವಲುಗಾರು ವೇಗವಾಗಿ ಹೋಗಿ ತಮಗೆ ಅರಸಾಗಿ ರುವ ವೇದಾವತಿಗೆ ಹೋಗಿ ರಾಯನ ಸಮಾಚಾರವ ಹೇಳಲಾಗಿ; ಅವಳು ಕೇಳಿ ಎದುರುಗೊಂಡು ಬಂದು, ರಾಯನ ಕರೆದುಕೊಂಡು ಹೋಗಿ ತನ್ನ ನಿಂಹಾಸನದಲ್ಲಿ ಕುಳ್ಳಿರಿಸಿ, ರಾಯನ ಕುಶಲ ಕ್ಷೇಮವ ವಿಚಾರಿಸಿ, ರಾಯ ನಿಗರ್ಥ್ಯಪಾದ್ಯಾಚಮನಂಗಳಿ೦ದುಸಕರಿಸಿ, ನವರಸ ಭರಿತವಾದ ರಾಗದಿಂ ಮಾಡಿ, ರಾಯನ ಮೆಜಿ ಸಿ, ಇಂತೆಂದಳು:-ಎಲೈ ಮಹಾರಾಯನೇ! ನಿನ್ನ ವೀರ ವಿತರಣಾದಿ ಉದಾರವ ಕೇಳಿ ನಾನು ನಿನ್ನ ವಿವಾಹವಾಗಬೇಕೆಂದು ಚಿಂತಿ - ೪ ಒ